ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ: 10 ಶೇ. ಡಿವಿಡೆಂಟ್ ಘೋಷಣೆ

ಮಂಜೇಶ್ವರ: ವರ್ಕಾಡಿ ಎಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇ ಟಿವ್ ಸೊಸೈಟಿಯ ವಾರ್ಷಿಕ ಮಹಾ ಸಭೆ ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಸುಂಕದಕಟ್ಟೆ ವಿಶ್ವ ಪ್ರಭ ಹಾಲಿನಲ್ಲಿ ಜರಗಿತು. ಕಾರ್ಯದರ್ಶಿ ರವೀಂದ್ರ ಮಡ್ವ ಸ್ವಾಗತಿಸಿ,ವರದಿ ಹಾಗೂ ಆಡಿಟ್ ರಿಪೋರ್ಟ್ ಮಂಡಿಸಿದರು. ವಿಶ್ವನಾಥ ಕುದುರು ಮಾತನಾಡಿ ಸೊಸೈಟಿಯು ಪ್ರಸ್ತುತ ವರ್ಷದಲ್ಲಿ 118 ಕೋಟಿ ವಾರ್ಷಿಕ ವ್ಯವಹಾರ ಮಾಡಿ 682,532 ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿ, ಸದಸ್ಯರಿಗೆ 10 ಶೇಕಡ ಡಿವಿಡೆಂಟ್ ಘೋಷಣೆ ಮಾಡಿದರು. ಡಿ ಬೂಬ ಮತ್ತು ಗಣೇಶ್ ಪಾವೂರು ಶುಭ ಕೋರಿದರು. ಆಡಳಿತ ಮಂಡಳಿಯ ಪರವಾಗಿ ಭಾರತಿ ಸುಳ್ಯಮೆ, ಮಾಧವ ಕುದುಕೋರಿ, ಲತೀಫ್ ಕಲ್ಮಿಂಜ ಮಾತನಾಡಿದರು. ನಂತರ 2023-24 ನೇ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ 60% ಮೇಲ್ಪಟ್ಟು ಅಂಕ ಪಡೆದ 37 ಸೊಸೈಟಿಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪುರಸ್ಕಾರ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಸೊಸೈಟಿಯ ಉಪಾಧ್ಯಕ ಸುಂದರ ಜೋಗಿಬೆಟ್ಟು ವÀಂದಿಸಿದರು

RELATED NEWS

You cannot copy contents of this page