ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನೂತನ ಸಮಿತಿ ಅಧಿಕಾರ ಸ್ವೀಕಾರ: ಮೊಹಮ್ಮದ್ ಹನೀಫ್ ಅಧ್ಯಕ್ಷ, ಸತ್ಯನಾರಾಯಣ ಭಟ್ ಉಪಾಧ್ಯಕ್ಷ
ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಳಿತ ಸಮಿತಿ ಅಧಿಕಾರ ಸ್ವೀಕರಿಸಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಮೊಹಮ್ಮದ್ ಹನೀಫ್, ಉಪಾಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಆಯ್ಕೆಯಾದರು. ಬ್ಯಾಂಕ್ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ಚುನಾವಣಾಧಿಕಾರಿಯಾಗಿದ್ದ ಬೈಜುರಾಜ್ ಪದಾಧಿಕಾರಿಗಳ ಆಯ್ಕೆ ನಡೆಸಿದರು.
ನಿರ್ದೇಶಕರಾಗಿ ವಿನೋದ್ ಕುಮಾರ್ ಪಾವೂರು, ಸತೀಶ್ ಕೂಟತ್ತಜೆ, ನಿಕೋಲಸ್ ಮೊಂತೇರೋ, ಜಗದೀಶ್ ಚೇಂಡ್ಲ, ಸುನಿತಾ ಡಿ’ಸೋಜಾ, ಪ್ರವೀಣ್, ಮೂಸಾಕುಂಞಿ, ತುಳಸಿ ಕುಮಾರಿ, ರಾಬಿಯಾ ಇಸ್ಮಾಯಿಲ್ ಪ್ರಮಾಣವಚನ ಸ್ವೀಕರಿಸಿದರು.
ಕಳೆದ ೮ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಸಿಪಿಎಂ-ಲೀಗ್ ಮೈತ್ರಿಕೂಟವನ್ನು ಸೋಲಿಸಿ ಜನಪರ ವೇದಿಕೆ ಜಯಗಳಿಸಿತ್ತು.