ವಾಲಿಕೊಂಡು ಅಪಾಯ ಭೀತಿಗೆ ಕಾರಣವಾದ ವಿದ್ಯುತ್ ಕಂಬಗಳು: ಬದಲಿಸಲು ಊರವರ ಒತ್ತಾಯ

ಉಪ್ಪಳ: ಹಲವು ವರ್ಷಗಳಿಂದ ವಾಲಿ ಕೊಂಡಿರುವ ವಿದ್ಯುತ್ ಕಂಬವೊAದು ಯಾವುದೇ ಕ್ಷಣದಲ್ಲಿ ಕುಸಿದು ಅನಾಹುತ ಸಂಭವಿಸಬಹು ದೆಂದು ಊರವರು ತಿಳಿಸಿದ್ದಾರೆ. ಈ ರೀತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಆತಂಕ ಉಂಟು ಮಾಡುತ್ತಿರುವ ಎರಡು ವಿದ್ಯುತ್ ಕಂಬ ಇದೆ. ಈ ಹಿಂದೆ ನೀರು ಹರಿಯುವ ಚರಂಡಿಯಲ್ಲಿ ಕಂಬವನ್ನು ಸ್ಥಾಪಿಸಲಾಗಿದೆ. ಮಳೆ ನೀರು ಹರಿದು ಕಂಬ ಒಂದು ಭಾಗಕ್ಕೆವಾಲಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಮಳೆ, ಗಾಳಿಗೆ ಯಾವುದೇ ಹೊತ್ತಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವುದು ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ಈ ಪರಿಸರದಲ್ಲಿ ಹಲವು ಮನೆಗಳಿದ್ದು, ರಸ್ತೆಯಿಂದ ಮದ್ರಸ ಸಹಿತ ಶಾಲೆ ಮಕ್ಕಳು ನಡೆದು ಹೋಗುತ್ತಿದ್ದಾರೆ. ನಿರಂತರ ವಾಹನ ಸಂಚಾರ ವಿರುವ ಪ್ರದೇಶವಾಗಿದೆ. ಈ ಬಗ್ಗೆ ಸಂಬAಧಪಟ್ಟ ಉದ್ಯೋಗಸ್ಥರಲ್ಲಿ ವಾರ್ಡ್ ಜನಪ್ರತಿ ನಿಧಿ ಹಾಗೂ ಸ್ಥಳೀಯರು ತಿಳಿಸಿದರೂ ಬದಲಾಯಿಸುವ ಕ್ರಮಕ್ಕೆ ಮುಂದಾಗುತ್ತಿಲ್ಲವೆAದು ದೂರಲಾಗಿದೆ. ಕುಸಿದು ಬಿದ್ದು ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಕಂಬಗಳನ್ನು ಬದಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page