ವಿವಿಧ ಬೇಡಿಕೆ ಮುಂದಿಟ್ಟು ಕಿಸಾನ್ ಸೇನೆಯಿಂದ ಪುತ್ತಿಗೆ ಪಂ. ಕೃಷಿ ಭವನಕ್ಕೆ ಮಾರ್ಚ್
ಪುತ್ತಿಗೆ: ಕೃಷಿಭವನದ ವಿರುದ್ಧ ಕಿಸಾನ್ ಸೇನೆ ವಿವಿಧ ಬೇಡಿಕೆ ಮುಂದಿಟ್ಟು ನಡೆಸಿದ ಪ್ರತಿಭಟನಾ ಮಾರ್ಚ್‌ನ್ನು ರಾಷ್ಟ್ರೀಯ ಕಿಸಾನ್ ಮಹಾ ಸಂಘ್ ಕೋ-ಆರ್ಡಿನೇಟರ್ ಕೆ.ವಿ. ಬಿಜು ಉದ್ಘಾಟಿಸಿದರು. ಕಿಸಾನ್ ಸೇನೆ ಪುತ್ತಿಗೆ ಪಂ. ಅಧ್ಯಕ್ಷ ಪಿ. ಅಬ್ದುಲ್ಲ ಕಂಡತ್ತಿಲ್ ಅಧ್ಯಕ್ಷತೆ ವಹಿಸಿದರು. ಕಿಸಾನ್ ಸೇನೆ ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಪ್ರಧಾನ ಭಾಷಣ ಮಾಡಿದರು. ಸುಲೈಖ ಮಾಹಿನ್, ನಾಸಿರ್ ಚೆರ್ಕಳ, ಸಚ್ಚಿನ್ ಕುಂಟಾರ್, ಶಾಜಿ ಕಾಡಮನೆ, ಥೋಮಸ್ ಡಿಸೋಜಾ, ಬಾಲಸುಬ್ರಹ್ಮಣ್ಯ ಭಟ್, ಸುರೇಶ್ ಅಡ್ಕತ್ತೊಟ್ಟಿ, ಪ್ರಸಾದ್ ಕಕ್ಕೆಪ್ಪಾಡಿ, ಖಮರುದ್ದೀನ್, ಸಲೀಂ, ಕೃಷ್ಣ ಭಟ್, ರಾಸಿ, ಮೊಹಮ್ಮದ್ ಕುಂಞಿ ಹಾಜಿ, ಬದ್ರುದ್ದೀನ್, ಸುಲೈಮಾನ್, ಶೆರಿನ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ ಸ್ವಾಗತಿಸಿ, ಸುಬ್ಬಣ್ಣ ರೈ ಗುತ್ತು ವಂದಿಸಿದರು.