ವೈದ್ಯಕೀಯ ಕಾಲೇಜು ಆಸ್ಪತ್ರೆ ಕುಸಿದು ಬಿದ್ದು ಕಾವನ್ನಪ್ಪಿದ ಮಹಿಳೆಯ ಕುಟುಂಬದ 4 ಬೇಡಿಕೆಗಳಿಗೆ ಅಂಗೀಕಾರ
ಕೋಟ್ಟಯಂ: ಕೋಟ್ಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಟ್ಟಡ ಕುಸಿದು ಬಿದ್ದು ಬಿಂದು ಎಂಬವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಅವರ ಕುಟುಂಬದವರು ಮುಂದಿರಿಸಿದ ೪ ಬೇಡಿಕೆಗಳನ್ನು ರಾಜ್ಯ ಸರಕಾರ ಅಂಗೀಕರಿಸಿದೆ. ಇದರಂತೆ ಆ ಕುಟುಂಬಕ್ಕೆ ತುರ್ತು ನೆರವಾಗಿ 50,000 ರೂ.ವನ್ನು ಸಚಿವ ವಾಸವನ್ ಬಿಂದುರ ಮನೆಗೆ ಆಗಮಿಸಿ ನೀಡಿದರು. ಬಿಂದುರ ಪುತ್ರಿ ನವಮಿಯ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರ ವಹಿಸುವುದಾಗಿ ಸಚಿವರು ತಿಳಿಸಿದರು. ಮಾತ್ರವಲ್ಲ ಅವರ ಪುತ್ರನಿಗೆ ವೈದ್ಯಕೀಯ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗ ನೀಡಲಾಗುವುದು. ಬಳಿಕ ಅದನ್ನು ಖಾಯಂಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.