ವ್ಯಕ್ತಿ ನಾಪತ್ತೆ: ಪತ್ನಿಯಿಂದ ದೂರು
ಕಾಸರಗೋಡು: ನಾಪತ್ತೆಯಾದ ಪತಿಯನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾನಗರ ಪೋಸ್ಟಲ್ ಸ್ಟಾಫ್ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಶರೀಫ್ ಎಂಬವರು ಕಾಸರಗೋಡು ನಗರ ಠಾಣೆ ಪೊಲೀಸರಿಗೆ ಈ ದೂರು ನೀಡಿದ್ದಾರೆ. 2024 ಜನವರಿ 1ರಂದು ಕಾಸರಗೋಡು ಪ್ರಧಾನ ಅಂಚೆ ಕಚೇರಿ ಬಳಿಯಿಂದ ಅಬ್ದುಲ್ (62) ನಾಪತ್ತೆಯಾಗಿರುವುದಾಗಿ ಶರೀಫ್ ದೂರಿನಲ್ಲಿ ತಿಳಿಸಿದ್ದಾರೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.