ಶಾಲಾ ಕಲೋತ್ಸವ: ಯಕ್ಷಗಾನ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಪ್ರೌಢ ಶಾಲೆ ಪ್ರಥಮ ಎ ಗ್ರೇಡ್

ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ನಿನ್ನೆ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಪ್ರೌಢ ಶಾಲೆ ಪ್ರಥಮ ಎ ಗ್ರೇಡ್ ಪಡೆದುಕೊಂಡಿದೆ. ನರಕಾಸುರ ವಧೆ ಎಂಬ ಯಕ್ಷಗಾನ ಪ್ರದರ್ಶಿಸಲಾಗಿತ್ತು. ಭಾಗವತಿಕೆಯಲ್ಲಿ ಶೇಖರ ಶೆಟ್ಟಿ ಬಾಯಾರು, ಚೆಂಡೆ-ಶಿವರಾಮ ಆಚಾರಿ ಧರ್ಮತ್ತಡ್ಕ, ವೇಷ ಭೂಷಣ ಗಣೇಶ ಕಲಾವೃಂದ ಪೈವಳಿಕೆ, ಶೇಖರ ಶೆಟ್ಟಿ ಬಾಯಾರು ನಿರ್ದೇಶಿಸಿದರು. ಸಂದೇಷ್ ಬಲ್ಲಾಳ್, ಧನ್ಯ ಆರ್.ಪಿ, ಲಿಖಿತ್ ವಿ ಪೂಜಾರಿ, ಕೌಶಿಕ್ ಸುರೇಶ್, ಧನಿಶ್.ಬಿ, ಸ್ಕಂದಪ್ರಸಾದ, ವೈಷ್ಣವಿ ಭಾಗವಹಿಸಿದರು.

RELATED NEWS

You cannot copy contents of this page