ಶಾಲು ಗ್ರೈಂಡರ್‌ಗೆ ಸಿಲುಕಿ ಗೃಹಿಣಿ ಮೃತ್ಯು

ಉಪ್ಪಳ: ತೆಂಗಿನಕಾಯಿ ಹೆರೆಯುತ್ತಿದ್ದಾಗ ಶಾಲು ಗ್ರೈಂಡರ್‌ಗೆ ಸಿಲುಕಿ ಗೃಹಿಣಿ ಮೃತಪಟ್ಟ ಘಟನೆ ಶೋಕಸಾಗರ ಸೃಷ್ಟಿಸಿದೆ. ಉಪ್ಪಳ ಗೇಟ್ ಅಪ್ನಗಲ್ಲಿಯ ಇಬ್ರಾಹಿಂ ಎಂಬವರ ಪತ್ನಿ ಮೈಮೂನ (47) ಮೃತಪಟ್ಟ ದುರ್ದೈವಿ. ನಿನ್ನೆ ಬೆಳಿಗ್ಗೆ ಆಹಾರ ತಯಾರಿಸಲೆಂದು ತೆಂಗಿನಕಾಯಿ ಹೆರೆಯುತ್ತಿದ್ದಾಗ ಶಾಲು ಗ್ರೈಂಡರ್‌ಗೆ ಸಿಲುಕಿದೆ. ಇದರಿಂದ ಕುತ್ತಿಗೆ ಬಿಗಿದು ಮೈಮೂನ ಗಂಭೀರ ಸ್ಥಿತಿಯಲ್ಲಿದ್ದರು. ಅದನ್ನು ಕಂಡ ಮನೆಯವರು ಕೂಡಲೇ ಉಪ್ಪಳದ ಆಸ್ಪತ್ರೆಗೆ ತಲುಪಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪತಿ ಇಬ್ರಾಹಿಂ ಪೂನದಲ್ಲಿ ವ್ಯಾಪಾರಿಯಾಗಿದ್ದಾರೆ.

ಮುಹಮ್ಮದ್- ನೀಸ ದಂಪತಿಯ ಪುತ್ರಿಯಾದ ಮೃತರು ಪತಿ, ಮಕ್ಕಳಾದ ಸಾಬಿತ್, ಸಫ, ಸಾವಿಲ್ (ವಿದ್ಯಾರ್ಥಿಗಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page