ಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ‘ಪುವೆಂಪು’ ಸಂಸ್ಮರಣೆ
ಬದಿಯಡ್ಕ: ಶಿವಳ್ಳಿ ಬ್ರಾಹ್ಮಣ ಸಭಾ ಏತಡ್ಕ ವಲಯ ಇದರ ಸಹಭಾಗಿತ್ವದಲ್ಲಿ ಡಾ| ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಜನ್ಮದಿನಂದು `ಪುವೆಂಪು ಸಂಸ್ಮರಣೆ’ ಕಾರ್ಯಕ್ರಮವನ್ನು ಬದಿಯಡ್ಕದ ಡಾ| ಶ್ರೀನಿಧಿ ಸರಳಾಯ ಅವರ ಬಾರಡ್ಕ ದಲ್ಲಿರುವ ನಿವಾಸದಲ್ಲಿ ಆಯೋಜಿಸ ಲಾಯಿತು. ಯಕ್ಷಗಾನ ಭಾಗವತ ಡಾ| ಸತೀಶ ಪುಣಿಂಚತ್ತಾಯ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾ ಯಿತು. ವಲಯ ಕಾರ್ಯದರ್ಶಿ ಮಧು ಸೂದನ ಎಂ. ಸ್ವಾಗತಿಸಿ, ನಿರೂಪಣೆ ಮಾಡಿದರು. ಹರಿನಾರಾಯಣ ನಡು ವಂತಿಲ್ಲಾಯ ಹಾಗೂ ವಿಜಯರಾಜ ಪುಣಿಂಚತ್ತಾಯ ದೀಪಪ್ರಜ್ವಲನೆಗೈದರು. ಡಾ| ಶ್ರೀನಿಧಿ ಸರಳಾಯರು ಪುವೆಂಪು ಬಗ್ಗೆ ಮಾತನಾಡಿದರು. ನ್ಯಾಯವಾದಿ ಪ್ರಕಾಶ್ ಅಮ್ಮಣಾಯ, ಮಂಜುನಾಥ ಉಡುಪ, ರಕ್ಷಾಧಿಕಾರಿಗಳಾದ ಸೀತಾರಾಮ ಕುಂಜತ್ತಾಯ ಉಪಸ್ಥಿತರಿದ್ದರು. ವಲಯದ ಮಹಿಳೆಯರಾದ ನಳಿನಿ ಕಲ್ಲಕಟ್ಟ, ಸೀತಾರತ್ನ ಪುಣಿಂಚತ್ತಾಯ, ಸತ್ಯವತಿ, ಸುರೇಖ ಇವರಿಂದ ಪುವೆಂಪು ವಿರಚಿತ ತುಳು ಹಾಗೂ ಕನ್ನಡ ಪದ್ಯಗಳ ಗಾಯನ ನಡೆಯಿತು. ಪಾರ್ವತಿ ಕುಂಜತ್ತಾಯ ವಂದಿಸಿದರು.