ಸಂಜೆ 5 ಗಂಟೆಗೆ ಮೊಳಗಲಿದೆ ಸೈರನ್ ಭೀತಿ ಬೇಡ

ಕಾಸರಗೋಡು: ಇಂದು ಸಂಜೆ 5 ಗಂಟೆ ವೇಳೆಗೆ ಜಿಲ್ಲೆಯ ಆರು ಕೇಂದ್ರಗಳಲ್ಲಿ ಸೈರನ್ ಮೊಳಗಲಿದ್ದು, ಸ್ಥಳೀಯರು ಭೀತಿ ಪಡಬೇಕಾದ ಅಗತ್ಯವಿಲ್ಲವೆಂದು ಸಂಬಂಧಪಟ್ಟವರು ಸೂಚಿಸಿದ್ದಾರೆ. ಕವಚಂ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರ ದಲ್ಲಿ ಸಂಜೆ ಉದ್ಘಾಟಿಸಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಿದ ಸೈರನ್ ವ್ಯವಸ್ಥೆ ಸರಿಯಾಗಿ ಇದೆಯೇ ಎಂಬ ಬಗ್ಗೆ ಪರೀಕ್ಷಿಸಲು ಅದನ್ನು ಮೊಳಗಿ ಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಜಿಎಸ್‌ಬಿಎಸ್ ಕುಂಬಳೆ, ಅಡ್ಕತ್ತಬೈಲು, ಚೆರ್ವತ್ತೂರು, ಪುಲ್ಲೂರು ಮತ್ತು ವೆಳ್ಳರಿಕುಂಡ್‌ಗಳಲ್ಲಿ ಸೈರನ್‌ಗಳನ್ನು ಸ್ಥಾಪಿಸಲಾಗಿದೆ.

You cannot copy contents of this page