ಸಪ್ಲೈಕೋ, ಅಂಗಡಿಗಳಲ್ಲಿ ಜಿಲ್ಲಾಧಿಕಾರಿ ತಪಾಸಣೆ
ಕಾಸರಗೋಡು: ಸಪ್ಲೈ ಕೋ ಸೂಪರ್ ಮಾರ್ಕೆಟ್, ಮಾವೇಲಿ ಸ್ಟೋರ್, ಖಾಸಗಿ ವ್ಯಾಪಾರ ಸಂಸ್ಥೆಗಳು ಎಂಬೆಡೆಗಳಲ್ಲಿ ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಎಡಿಎಂಕೆ ನವೀನ್ ಬಾಬು, ಜಿಲ್ಲಾ ಸಪ್ಲೈ ಆಫೀಸರ್ ಎ ಸಜಾದ್, ತಾಲೂಕು ಸಪ್ಲೈ ಆಫೀಸರ್, ಲೀಗಲ್ ಮೆಟ್ರೋಲಜಿ ಇನ್ಸ್‌ಪೆಕ್ಟರ್ ಎಂಬಿವರು ಭಾಗವಹಿಸಿದರು. ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದ ಅಂಗಡಿಗಳು, ಹೋಟೆಲ್‌ಗಳು, ಹಣ್ಣು ಹಂಪಲು, ತರಕಾರಿ ಅಂಗಡಿಗಳು, ಪೆರಿಯಾಟಡ್ಕ, ಮಾವೇಲಿ ಸ್ಟೋರ್, ಉದುಮ ಸಪ್ಲೈಕೋ , ಸೂಪರ್ ಮಾರ್ಕೆಟ್ ಎಂಬೆಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಓಣಂ ಕಿಟ್‌ಗಳನ್ನು ಸಿದ್ಧಪಡಿಸುವುದಕ್ಕಿರುವ ಕ್ರಮ ಕೈಗೊಳ್ಳಲು ಸಪ್ಲೈ ಕೋ ಹಾಗೂ ಡಿಎಸ್‌ಒಗೆ ಜಿಲ್ಲಾಧಿಕಾರಿ ನಿರ್ದೇಶ ನೀಡಿದರು. ವ್ಯಾಪಾರ ಸಂಸ್ಥೆಗಳಲ್ಲಿ ದರಪಟ್ಟಿ ಸರಿಯಾಗಿ ಪ್ರದರ್ಶಿಸಲು ಹಾಗೂ ಪ್ಯಾಕ್ ಮಾಡಿ ಮಾರಾಟ ಮಾಡುವ ಸಾಮಗ್ರಿಗಳಲ್ಲಿ ಎಂ.ಆರ್.ಪಿ. ಉತ್ಪನ್ನದ ದಿನಾಂಕ ಮೊದಲಾದ ವುಗಳನ್ನು ನಮೂದಿಸಲು ಹಾಗೂ ಅದಿಲ್ಲದಿದ್ದರೆ ಕ್ರಮ ಕೈಗೊಳ್ಳುವುದಾ ಗಿಯೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹೊಸ ಬಸ್ ನಿಲ್ದಾಣದಲ್ಲಿನ ದಿನಸಿ ಅಂಗಡಿಯಲ್ಲಿ ತಕ್ಕಡಿ ಉಪಯೋಗಿ ಸಿರುವುದಕ್ಕೆ ೨೦೦೦ ರೂ. ದಂಡ ವಸೂಲಿ ಮಾಡಲಾಯಿತು.