ಸಪ್ಲೈಕೋ ಓಣಂ ಮೇಳ ಉದ್ಘಾಟನೆ ನಾಳೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಮಟ್ಟದ ಓಣಂ ಮೇಳ ನಾಳೆ ಬೆಳಿಗ್ಗೆ 9.30ಕ್ಕೆ ಕಾಞಂಗಾಡ್ ಪೆಟ್ರೋಲ್ ಬಂಕ್ ಸಮೀಪ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸುವರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಮೇಳದಲ್ಲಿ ಪ್ರತಿದಿನ ಅಪರಾಹ್ನ 2ರಿಂದ ಸಂಜೆ 4 ಗಂಟೆ ವರೆಗೆ ಪ್ರತ್ಯೇಕ ರಿಯಾಯಿತಿ ಮಾರಾಟ ನಡೆಯಲಿದೆ. ಕುಟುಂಬಶ್ರೀ, ಜಿಲ್ಲಾ ಕೈಗಾರಿಕಾ ಕೇಂದ್ರದ ಉತ್ಪನ್ನಗಳು  ಮೇಳದಲ್ಲಿ  ಲಭ್ಯವಿದೆ.

You cannot copy contents of this page