ಸರಿಯಾದ ದಾಖಲುಪತ್ರಗಳಿಲ್ಲದೆ ಕೈವಶವಿರಿಸಿಕೊಂಡ 15.50 ಲಕ್ಷ ರೂ. ವಶ: ಓರ್ವ ಕಸ್ಟಡಿಗೆ

ಕಾಸರಗೋಡು:   ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 15,50,000 ರೂ. ಸಹಿತ ಓರ್ವನನ್ನು ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಳಿಯತ್ತಡ್ಕ ಪೆಟ್ರೋಲ್ ಬಂಕ್ ಬಳಿ ವಿದ್ಯಾನಗರ ಪೊಲೀಸ್ ಠಾಣೆ ಎಸ್.ಐ ಉಮ್ಮರ್ ಟಿ.ಕೆ ನೇತೃತ್ವದ ಪೊಲೀಸರು ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಉಳಿಯತ್ತಡ್ಕ ವರ್ಕತ್ತೋಡಿ ನಜಿಲ ಅಪಾರ್ಟ್‌ಮೆಂಟ್‌ನ ಲತೀಫ್ ಅಲಿಯಾಸ್ ಅಬ್ದುಲ್ ಲತೀಫ್ (42)ನನ್ನು ತಪಾಸಣೆಗೊಳಪಡಿ ಸಿದಾಗ ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್‌ನಲ್ಲಿ ಈ ಹಣ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿ ಬಿಡುಗಡೆಗೊ ಳಿಸಿದ್ದಾರೆ. ವಶಪಡಿಸಲಾದ ಹಣವನ್ನು ಇಂದು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ.

ಇದೇ ವ್ಯಕ್ತಿಯಿಂದ ಎರಡು ತಿಂಗಳ ಹಿಂದೆಯೂ  ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ಸುಮಾರು 13.16 ಲಕ್ಷ ರೂ.ವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ನಿನ್ನೆ ಮತ್ತೆ ಆತನಿಂದ ಹಣ ಪತ್ತೆಯಾಗಿದೆ.

RELATED NEWS

You cannot copy contents of this page