ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಉಪೇಕ್ಷೆ: ಶ್ವಾನಗಳ ಕಚ್ಚಾಟದಿಂದ ಸಂಚಾರ ಸಮಸ್ಯೆ, ದುರ್ವಾಸನೆ

ಉಪ್ಪಳ: ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಉಪೇಕ್ಷಿಸುವ ಕೃತ್ಯ ವ್ಯಾಪಕ ಗೊಳ್ಳುತ್ತಿದ್ದು, ಇದನ್ನು ಶ್ವಾನಗಳು ಚೆಲ್ಲಾಪಿಲ್ಲಿಗೊಳಿಸಿ ಪಾದಚಾರಿಗಳ ಸಹಿತ ವಾಹನಗಳ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗುತ್ತಿರುವುದಾಗಿ ಆರೋಪಿಸಲಾಗಿದೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ಹಿದಾಯತ್ ನಗರ ಪರಿಸರದ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಕಂಡು ಬಂದಿದೆ.
ಹಲವು ತಿಂಗಳುಗಳಿAದ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಲಾಗುತ್ತಿರುವುದಾಗಿ ದೂರಲಾಗಿದೆ. ದುರ್ವಾಸನೆಯಿಂದ ಸಮಸ್ಯೆ ಉಂಟಾಗಿದೆ. ಈ ರಸ್ತೆಯಲ್ಲಿ ನೂರಾರು ವಾಹನಗಳ ಸಹಿತ ಪಾದಚಾರಿಗಳು ಸಂಚಾರ ನಡೆಸುತ್ತಿದ್ದು, ನಾಯಿಗಳ ಗುಂಪು ಕಚ್ಚಾಡುತ್ತಿದ್ದು, ಪಾದಚಾರಿಗಳನ್ನು ಹಾಗೂ ವಾಹನ ಸವಾರರನ್ನು ಬೆನ್ನಟ್ಟುತ್ತಿರುವುದು ಆತಂಕP್ಕೆ ಕಾರಣವಾಗಿದೆ. ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page