ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡುವುದಾಗಿ ತಿಳಿಸಿ ಯುವತಿಗೆ ಕಿರುಕುಳ: ಉಪ್ಪಳ ನಿವಾಸಿಗಾಗಿ ಶೋಧ

ಹೊಸದುರ್ಗ:  ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊದ ಗಿಸುವುದಾಗಿ ಭರವಸೆಯೊಡ್ಡಿ ಯುವತಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಕಿರುಕುಳ ನೀಡಿರು ವುದಾಗಿ ದೂರಲಾಗಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿ ನಿವಾಸಿ ಯೂ, ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ ಯುವತಿಯ ದೂರಿನಂತೆ ಉಪ್ಪಳ ನಿವಾಸಿ ಯಾದ ನವಾಸ್ (೨೪) ಎಂಬಾ ತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.

ಕಳೆದ ವರ್ಷ ಜುಲೈ ೨೮ರಂದು ಮುನ್ನಾರ್‌ನಲ್ಲಿ, ಸೆಪ್ಟಂಬರ್‌ನಲ್ಲಿ ಬೇಕಲ ಪಳ್ಳಿಕೆರೆಯಲ್ಲಿರುವ ಖಾಸಗಿ ವ್ಯಕ್ತಿಯ ಮಾಲಕತ್ವದಲ್ಲಿರುವ ಸ್ಥಳಕ್ಕೆ ಕರೆದೊಯ್ದು ಕಿರುಕುಳ ನೀಡಿರುವು ದಾಗಿ ಯುವತಿಯ ದೂರಿನಲ್ಲಿ ತಿಳಿಸಲಾಗಿದೆ. 

ಈ ಹಿಂದೆ ಕೆಲವು ಧಾರಾವಾಹಿ ಗಳಲ್ಲಿ  ಅಭಿನಯಿಸಿರುವ ಯುವತಿಗೆ ನವಾಸ್‌ನನ್ನು ಮೊದಲೇ ಪರಿಚಯ ಇತ್ತೆನ್ನಲಾಗಿದೆ. ಸಿನಿಮಾದಲ್ಲಿ  ಅಭಿನ ಯಿಸಲು ಅವಕಾಶ ದೊರಕಿಸು ವುದಾಗಿ ತಿಳಿಸಿ ಪುಸಲಾಯಿಸಿ ಹಲವು ಬಾರಿ ಟೂರಿಸ್ಟ್ ಕೇಂದ್ರಗಳಿಗೆ ಕರೆದೊ ಯ್ದು ಕಿರುಕುಳ ನೀಡಿರುವುದಾಗಿಯೂ ಯುವತಿ ಆರೋಪಿಸಿದ್ದಾಳೆ. ಅನಂತರ  ಆತ ತಲೆಮರೆಸಿಕೊಂಡಿದ್ದಾನೆ ನ್ನಲಾಗಿದೆ. ಇದರಿಂದ  ಯುವತಿ ಚಂದೇರ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾಳೆ. 

ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದಿರುವುದು ಬೇಕಲ ಪೊಲೀಸ್ ಠಾಣೆಯಲ್ಲಾಗಿರುವು ದರಿಂದ ಕೇಸನ್ನು ಅಲ್ಲಿಗೆ ಹಸ್ತಾಂತರಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ಕ್ರಮಗಳನ್ನು ಬೇಕಲ ಪೊಲೀಸರು ಕೈಗೊಂಡಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

RELATED NEWS

You cannot copy contents of this page