ಸಿನಿಮಾ ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ: ಮುಖೇಶ್, ಜಯಸೂರ್ಯ, ಇಡವೇಳ ಬಾಬು ಸಹಿತ ಐದು ಮಂದಿ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರ: ಸಿನಿಮಾ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ  ಆರೋಪದಂತೆ ಸಿಪಿಎಂ ಶಾಸಕ, ಮಲೆಯಾಳಂ ಸಿನಿಮಾ ನಟ ಎಂ. ಮುಖೇಶ್ ಸಹಿತ ನಟರಾದ ಜಯಸೂರ್ಯ, ಮಣಿಯಾಂಪಿಳ್ಳೆ ರಾಜು, ಇಡವೇಳ  ಬಾಬು ಸೇರಿದಂತೆ  ಐದು ಮಂದಿ ವಿರುದ್ಧ  ಪೊಲೀಸರು ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಕೊಚ್ಚಿ ನಿವಾಸಿಯಾಗಿರುವ ನಟಿಯೋರ್ವೆ ನೀಡಿದ ದೂರಿನಂತೆ  ಕೊಚ್ಚಿ ಮರಟ್ ಪೊಲೀಸರು ಮುಖೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 376(1), 554, 452 ಮತ್ತು 509ರ ಪ್ರಕಾರ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ  ಲೈಂಗಿಕ ಕಿರುಕುಳ ಆರೋಪ ಉಂಟಾದ ಹಿನ್ನೆಲೆಯಲ್ಲಿ ಮುಖೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಭಾರೀ ಒತ್ತಡವೂ  ಇನ್ನೊಂದೆಡೆ ಹೇರಲ್ಪಟ್ಟಿದೆ.  ಮುಖೇಶ್ ತಕ್ಷಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಬಿಜೆಪಿ ಪ್ರತ್ಯಕ್ಷ ಹೋರಾಟಕ್ಕಿಳಿಯಲಿ ದೆಯೆಂದು  ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಅದೇ ರೀತಿ ಕಾಂಗ್ರೆಸ್ ಮತ್ತು ವಿವಿಧ ಮಹಿಳಾ ಸಂಘಟನೆಗಳೂ ಇದೇ ಬೇಡಿಕೆ ಯನ್ನು ಮುಂದಿರಿಸಿವೆ.

  ನಟ ಜಯಸೂರ್ಯ  ವಿರುದ್ದ ನಟಿಯೋರ್ವೆ ನೀಡಿದ ದೂರಿನಂತೆ ತಿರುವನಂತಪುರ ಕಂಟೋನ್ಮೆಂಟ್  ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಯ ಸೂರ್ಯ ಈಗ ಅಮೇರಿಕ ಪ್ರವಾಸದಲ್ಲಿದ್ದಾರೆ. ತಿರುವನಂತಪುರದ ಸೆಕ್ರೆಟರಿಯೇಟ್‌ನಲ್ಲಿ ಇತ್ತೀಚೆಗೆ ನಡೆದ ಸಿನಿಮಾ ಚಿತ್ರೀಕರಣದ ವೇಳೆ ಅಲ್ಲಿನ ಶೌಚಾಲಯದ ಬಳಿ ಜಯಸೂರ್ಯ ತನ್ನೊಂದಿಗೆ ಲೈಂಗಿಕ ಕಿರುಕುಳ ರೀತಿ ಯಲ್ಲಿ ವರ್ತಿಸಿದ್ದರೆಂದೂ ಆ ಮೂಲಕ ತನ್ನ ಸ್ತ್ರೀತನಕ್ಕೆ ಅವಮಾನಗೈಯ್ಯ ಲೆತ್ನಿದರೆಂದು ಆಲಪ್ಪುಳ ನಿವಾಸಿಯಾಗಿ ರುವ ಈ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಇದರ ಹೊರತಾಗಿ ನಟಿಯೋರ್ವೆ ನೀಡಿದ ದೂರಿನಂತೆ ನಟ ಮಣಿಯಾಂ ಪಿಳ್ಳೆ ರಾಜು  ವಿರುದ್ಧ  ಪೋರ್ಟ್ ಕೊಚ್ಚಿ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ನಟಿ ನೀಡಿದ ಇನ್ನೊಂದು ದೂರಿನಂತೆ ಸಿನಿಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್  ವಿಚ್ಚು ಎಂಬಾತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಇನ್ನೋರ್ವೆ ನಟಿ ನೀಡಿದ ದೂರಿನಂತೆ ನಟ ಇಡವೇಳ ಬಾಬು ವಿರುದ್ಧ ಎರ್ನಾಕುಳಂ ನೋರ್ತ್ ಪೊಲೀಸರೂ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಸಿನಿಮಾ ಪ್ರೊಡಕ್ಷನ್ ಕಂಟ್ರೋಲರ್ ನೋಬಿನ್, ಕಾಂಗ್ರೆಸ್ ನೇತಾರ ನ್ಯಾಯವಾದಿ ಬಿ.ಎಸ್. ಚಂದ್ರಶೇಖರ  ವಿರುದ್ಧವೂ   ಲೈಂಗಿಕ ಕಿರುಕುಳ ನೀಡಿದ ಆರೋಪ ಉಂಟಾಗಿದ್ದು, ಅದರಂತೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರು ಸಜ್ಜಾಗಿದ್ದಾರೆ.

ನಟ ಮುಖೇಶ್ ಮನೆಗೆ ಪೊಲೀಸ್ ಕಾವಲು

ತಿರುವನಂತಪುರ: ನಟಿಯ ದೂರಿನಂತೆ ಕೇಸು ದಾಖಲಿಸಿಕೊಂಡ ಬೆನ್ನಲ್ಲೇ ನಟ ಹಾಗೂ ಶಾಸಕನಾದ ಮುಖೇಶ್‌ರ ತಿರುವನಂತಪುರ ಮನೆಗೆ ಪೊಲೀಸ್ ಕಾವಲು ಏರ್ಪಡಿಸಲಾ ಗಿದೆ. ಮೆಡಿಕಲ್ ಕಾಲೇಜು ಪೊಲೀ ಸರ ನೇತೃತ್ವದಲ್ಲಿ ಭದ್ರತೆ ಏರ್ಪಡಿ ಸಲಾಗಿದೆ.  ಮನೆಯ ಮುಂದೆ ಮುಖೇಶ್‌ರ ವಾಹನ ಇದೆ. ಆದರೆ ಮುಖೇಶ್ ಮನೆಯಲ್ಲಿದ್ದಾರೆಯೇ ಎಂದು ತಿಳಿದುಬಂದಿಲ್ಲ. ಇದೇ ವೇಳೆ ಇಂದು ಜಿಲ್ಲೆಯಲ್ಲಿ ಮುಖೇಶ್ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷ ಪ್ರತಿಭಟನೆ ನಡೆಸುತ್ತಿದೆ.  ಮುಖೇಶ್ ರ ಪಟ್ಟತ್ತಾನದ ಮನೆ ಹಾಗೂ ಶಾಸಕರ ಕಚೇರಿಗೆ ಮಾರ್ಚ್ ನಡೆಸಲಾಗಿದೆ.

ಮುಖೇಶ್ ರಾಜೀನಾಮೆಗೆ ಸಿಪಿಐ ಒತ್ತಾಯ

ದಿಲ್ಲಿ: ನಟಿಯರಿಗೆ ಕಿರುಕುಳ ಆರೋಪದಂತೆ ಕೇಸು ದಾಖಲಿಸಿ ಕೊಂಡ ಹಿನ್ನೆಲೆಯಲ್ಲಿ ಮುಖೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಪಿಐ ಒತ್ತಾಯಿಸಿದೆ. ಮುಖೇಶ್ ರಾಜೀನಾಮೆ ನೀಡದಿದ್ದಲ್ಲಿ ರಾಜ್ಯ ಸರಕಾರ ರಾಜೀನಾಮೆ ಪಡೆಯಲು ಮುಂದಾಗಬೇ ಕೆಂದು  ನೇತಾರೆ ಆನಿರಾಜ ಆಗ್ರಹಪಟ್ಟಿದ್ದಾರೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿಲ್ಲವೆಂಬ ಕಾರಣದಿಂದ ನಾವೂ ರಾಜೀನಾಮೆ ನೀಡಲಾರೆವು ಎನ್ನುವುದು ಸರಿಯಲ್ಲ. ಒಂದು ಅಪರಾಧವನ್ನು ಮತ್ತೊಂದರ ಮೂಲಕ ಮರೆಮಾಚಲಾ ಗದು ಎಂದೂ ಅವರು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page