ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ ಸಮಾಪ್ತಿ

ವಿದ್ಯಾನಗರ: ಕಾಸರಗೋಡು ಜನರಲ್ ಆಸ್ಪತ್ರೆಗಾಗಿ ಹೊಸತಾಗಿ ನಿರ್ಮಿಸಿದ ಕಟ್ಟಡವನ್ನು ಕೂಡಲೇ ತೆರೆದು ಕೊಡಬೇಕೆಂದು ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ ಆಗ್ರಹಿಸಿದೆ. ಅಲ್ಲದೆ ಜನರಲ್ ಆಸ್ಪತ್ರೆಯಲ್ಲಿರುವ ಇತರ ಅಸೌಕರ್ಯಗಳನ್ನು ಪರಿಹರಿಸಬೇಕೆಂದು ಸಮ್ಮೇಳನ ಆಗ್ರಹಿಸಿದೆ.

ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಮಿತಿ ಸದಸ್ಯ ಸಿ.ಎಚ್. ಕುಂಞಂಬು, ಏರಿಯಾ ಕಾರ್ಯದರ್ಶಿ ಕೆ.ಎ. ಮುಹಮ್ಮದ್ ಹನೀಫ್, ಎ. ರವೀಂದ್ರನ್, ಪಿ. ಶಿವಪ್ರಸಾದ್ ಸಹಿತ ಹಲವರು ಮಾತನಾಡಿದರು. ನೂತನ ಏರಿಯಾ ಸಮಿತಿ ಕಾರ್ಯದರ್ಶಿಯಾಗಿ ಟಿ.ಎಂ.ಎ. ಕರೀಂ ಆಯ್ಕೆಯಾದರು. ೧೭ ಮಂದಿ ಸದಸ್ಯರನ್ನು ಆರಿಸಲಾಯಿತು.

RELATED NEWS

You cannot copy contents of this page