ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ನಾಳೆ ಮುಂಜಾನೆ ಭೂಮಿಗೆ

ನವದೆಹಲಿ: ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ನಾಳೆ ಮುಂಜಾನೆ ಭೂಮಿಗೆ ಮರಳಲಿದ್ದಾರೆ.
ಭಾರತೀಯ ಕಾಲಮಾನ ಮಾರ್ಚ್ 19ರ ಮುಂಜಾನೆ 3.27ಕ್ಕೆ ಅಮೆರಿಕಾದ ಗಗನಯಾತ್ರಿಕರ ವಾಹಕ ಪ್ಲೋರಿಡಾದ ಸಾಗರದಲ್ಲಿ ಪತನಗೊಳ್ಳ ಲಿದೆ ಮತ್ತು ಅವರಿಬ್ಬರನ್ನು ಅಲ್ಲಿಂದ ಸುರಕ್ಷಿತ ತಾಣಕ್ಕೆ ಸಾಗಿಸಲಾಗುವುದೆಂದು ನಾಸಾ ತಿಳಿಸಿದೆ.
ನವೀಕರಿಸಿದ ರಿಟರ್ನ್ ಟಾರ್ಗೆಟ್ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗಳಿಗೆ ಹಸ್ತಾಂತರ ಕರ್ತವ್ಯಗಳನ್ನು ಪೂರ್ಣ ಗೊಳಿಸಲು ಸಮಯ ನೀಡುತ್ತದೆ. ಈ ಇಬ್ಬರು ಗಗನಯಾತ್ರಿಕರು ಸ್ಪೇಸ್ ಎಕ್ಸ್ಕ್ರೂ ಡ್ರಾಗನ್ ಕ್ರಾಫ್ಟ್ನಲ್ಲಿ ಭೂಮಿಗೆ ಹಿಂತಿರುಗಿಸಲಾಗುವುದೆAದು ನಾಸಾ ತಿಳಿಸಿದೆ. ಇವರು ಭೂಮಿಗೆ ಇಳಿಯುವ ದೃಶ್ಯಗಳನ್ನು ನಾಸಾ ಲೈವ್ ಆಗಿ ತೋರಿಸಲಿದೆ.
ಕಳೆದ ವರ್ಷ ಜೂನ್ 5ರಂದು ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ಎಲ್ಮೋರ್ ಕ್ರೂ-9ರ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ಕ್ಕೆ ತೆರಳಿದ್ದರು. ಅವರು ಎಂಟು ದಿನಗಳ ತನಕ ಮಿಶನ್ನಲ್ಲಿರಬೇಕಾಗಿತ್ತು.ಆದರೆ ಅವರನ್ನು ಕರೆದೊಯ್ದ ಬಾಹ್ಯಾಕಾಶ ನೌಕೆಯಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಕಾಣಿಸಿಕೊಂಡವು. ಅದರಿಂದಾಗಿ ಅವರಿಗೆ ಹಿಂತಿರುಗಲು ಸಾಧ್ಯವಾಗದೆ ಅಲ್ಲೇ ಉಳಿದುಕೊಂಡರು. ಆ ಬಳಿಕ ಸೆಪ್ಟಂಬರ್ನಲ್ಲಿ ಹಿಂತಿರುಗುವ ನಿರೀಕ್ಷೆಯಿತ್ತು. ಆದರೆ ಇತರ ಸಿಬ್ಬಂದಿಗೆ ತುರ್ತು ಪ್ಯಾಡ್ ಕೊರತೆಯಿಂದಾಗಿ ಅದು ವಿಫಲವಾಯಿತು. ಹಾಗಾಗಿ ಅವರು ಕಳೆದ 9 ತಿಂಗಳಿAದ ಬಾಹ್ಯಾಕಾಶ ನಿಲ್ದಾಣದಲ್ಲೇ ಸಿಲುಕಿಕೊಳ್ಳಬೇಕಾಯಿತು. ಅವರನ್ನು ಭೂಮಿಗೆ ಮರಳಿ ಕರೆತರಲು ಸ್ಪೇಸ್ ಎಕ್ಸ್ ಕ್ಯಾಪ್ಸ್ಯೂಲ್ನ್ನು ಮಾರ್ಚ್ 14ರಂದು 4 ಗಗನ ಯಾತ್ರಿಗಳೊಂ ದಿಗೆ ಉಡಾಯಿಸಲಾಯಿತು. ಅವರು ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ರನ್ನು ಸಂಪರ್ಕಿಸಿ ಅವರನ್ನು ಭೂಮಿಗೆ ಮರಳಿಸುವಂತೆ ಮಾಡುವ ಪ್ರಯತ್ನದಲ್ಲೂ ಕೈಜೋಡಿಸಿಕೊಂಡಿ ದ್ದಾರೆ. ಈ ಎಲ್ಲಾ ಪ್ರಯತ್ನದ ಫಲವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಸುನೀತಾ ವಿಲಿಯಮ್ಸ್ ಮತ್ತು ಎಲ್ಮೋರ್ರನ್ನು ಸುರಕ್ಷಿತವಾಗಿ ಭೂಮಿಕೆ ಕರೆತರುವ ಕ್ಷಣಗಣನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page