ಸೂರಂಬೈಲು ಶಾಲೆಯ ನೂತನ ಕಟ್ಟಡ ಉದ್ಘಾಟನೆ

ಸೂರಂಬೈಲು: ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ನೂತನ ತರಗತಿ ಕಟ್ಟಡ ಉದ್ಘಾಟನೆ ನಡೆಯಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿಡಿಇ ನಂದಿಕೇ ಶನ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಪುತ್ತಿಗೆ ಪಂಚಾಯತ್ ಸದಸ್ಯೆ ಅನಿತಾಶ್ರೀ, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ, ಮಾತೃ ಸಂಘದ ಅಧ್ಯಕ್ಷೆ ಆಶಿಯತ್ ಅಸೀದ ಎ ಎಂ, ಕಾಂಟ್ರಾಕ್ಟರ್ ಮೊಹಮ್ಮದ್ ಅಶ್ರಫ್, ಸಿಪಿಎಂ ಲೋಕಲ್ ಏರಿಯ ಸೆಕ್ರೆಟರಿ ಅಬ್ದುಲ್ ಹಕೀಂ, ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಅನಂತಪುರ ಶುಭಾಶಂಸನೆಗೈದರು. ಮುಖ್ಯ ಶಿಕ್ಷಕಿ ಸುನೀತ ಎಂ. ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಕಿರಣ್ ಕೆ ವಂದಿಸಿದರು. ಗೀತ ಕೆ. ನಿರ್ವಹಿಸಿದರು.

RELATED NEWS

You cannot copy contents of this page