ಸ್ಕೂಟರ್-ಲಾರಿ ಢಿಕ್ಕಿ ಹೊಡೆದು ಅಪಘಾತ: ಯುವತಿ ಮೃತ್ಯು; ಪುತ್ರಿಗೆ ಗಂಭೀರ

ಕಾಸರಗೋಡು: ಕಾಞಂಗಾಡ್ ಐಂ ಙೋತ್ತ್‌ನಲ್ಲಿ ಸಂಭವಿ ಸಿದ ವಾಹನ ಅಪಘಾತ ದಲ್ಲಿ ಯುವತಿ ಮೃv ಪಟ್ಟರು.  ಹಿಂಬದಿ ಸವಾರೆ ಪುತ್ರಿಯನ್ನು ಗಂಭೀರ ಗಾಯಗಳೊಂ ದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಡನ್ನಕ್ಕಾಡ್ ಕರುವಳಂ ಕುಯ್ಯಾಲ್ ನಿವಾಸಿ ಸಮದ್‌ರ ಪತ್ನಿ ರಂಸೀನ(32) ಮೃತಪಟ್ಟವರು. ಪುತ್ರಿ ಆಯಿಶತ್ ಶಂನಾ ಗಾಯಗೊಂಡಿದ್ದಾರೆ. ಬೆಳಿಗ್ಗೆ 10 ಗಂಟೆಗೆ  ಐಂಙೋತ್ತ್ ಪೆಟ್ರೋಲ್ ಬಂಕ್ ಸಮೀಪ ಅಪಘಾತ ಸಂಭವಿಸಿದೆ. ಕಾಞಂ ಗಾಡ್ ಭಾಗದಿಂದ ಸ್ಕೂಟರ್‌ನಲ್ಲಿ ರಂಸೀನ  ಆಗಮಿಸುತ್ತಿದ್ದ ವೇಳೆ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತದೇಹವನ್ನು  ಜಿಲ್ಲಾ ಆಸ್ಪತ್ರೆಯಲ್ಲಿರಿಸಲಾಗಿದೆ.

RELATED NEWS

You cannot copy contents of this page