ಸ್ಫೋಟಕವಸ್ತು ಸಿಡಿದು ಉದ್ಯೋಗ ಖಾತರಿ ಕಾರ್ಮಿಕೆಗೆ ಗಾಯ

ಕಣ್ಣೂರು: ಸ್ಫೋಟಕವಸ್ತು ಸಿಡಿದು ಉದ್ಯೋಗ ಖಾತರಿ ಕಾರ್ಮಿಕೆ ಗಾಯಗೊಂಡ ಘಟನೆ ಇರಿಟ್ಟಿ ಆಯಿರಕ್ಕಳ ಎಂಬಲ್ಲಿ ನಡೆದಿದೆ. ಆಯಿರಕ್ಕಳ ನಿವಾಸಿ ರೋಹಿಣಿ ಎಂಬವರು ಗಾಯ ಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಶುಚೀಕರಣ ಕೆಲಸ ನಡೆಯುತ್ತಿದ್ದಂತೆ ಗೋಣಿ ಚೀಲವೊಂದನ್ನು ಕತ್ತಿಯಿಂದ ತೆರವುಗೊಳಿಸುತ್ತಿದ್ದಾಗ  ಸ್ಫೋಟ ನಡೆದಿದೆ.

ವನ್ಯಮೃಗಗಳು ದಾಳಿ ನಡೆಸುವ ಪ್ರದೇಶ ಇದಾಗಿದೆ. ಇದರಿಂದ ಯಾರಾದರೂ ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕವಸ್ತು ಇದಾಗಿರಬಹುದೆಂದು ಅಂದಾಜಿ ಸಲಾಗಿದೆ.

RELATED NEWS

You cannot copy contents of this page