ಹಣಕಾಸು ವರ್ಷದ ಮೊದಲ ದಿನವೇ ಸಿಹಿಸುದ್ದಿ: ವಾಣಿಜ್ಯ ಎಲ್‌ಪಿಜಿ ದರ ಇಳಿಕೆ
ನವದೆಹಲಿ: ಹೊಸ ಹಣಕಾಸು ವರ್ಷದ ಮೊದಲದಿನವಾದ ಇಂದು ಕೇಂದ್ರಸರಕಾರ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಂದಿನಿAದ 41 ರೂ. ಕಡಿಮೆಗೊಳಿಸಲಾಗಿದೆ. ಇದರಂತೆ 19 ಕೆ.ಜಿ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಸಲಾಗಿದೆ. ಬೆಲೆ ಹೊಂದಾಣಿಕೆಗಳು ಜಾಗತಿಕ ಕಚ್ಚಾ ಬೆಲೆಗಳು ಮತ್ತು ಇತರ ಮಾರುಕಟ್ಟೆ ಅಂಶಗಳ ಆಧಾರದ ಮೇಲೆ ನಿಯಮಿತ ಮಾಸಿಕ ಪರಿಷ್ಕರಣೆಗೆ ಭಿನ್ನವಾಗಿದೆ ಆದರೆ 16.2 ಕೆ.ಜಿ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ವಾಣಿಜ್ಯ ಎಲ್ಪಿಜಿ ದರಗಳನ್ನು ಇಳಿಸಲಾಗಿದ್ದರೂ ಗೃಹ ಅಡುಗೆಗೆ ಬಳಸುವದೇಶೀಯ ಎಲ್ಪಿಜಿ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ತರಲಾಗಿಲ್ಲ.