ಹರಿಯಾಣದಲ್ಲಿ ಬಿಜೆಪಿಗೆ ಹ್ಯಾಟ್ರಿಕ್: ಕುಂಬಳೆಯಲ್ಲಿ ವಿಜಯೋತ್ಸವ

ಕುಂಬಳೆ: ಹರಿಯಾಣದಲ್ಲಿ ಬಿಜೆಪಿಗೆ ಸತತ ಮೂರನೇ ಬಾರಿ ಅಧಿಕಾರ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪಂಚಾಯತ್ ಬಿಜೆಪಿ ಸಮಿತಿ ಆಶ್ರಯದಲ್ಲಿ ಪೇಟೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿದರು. ರಾಜ್ಯ ಉತ್ತರ ವಲಯ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ್ ಕಾಮತ್, ಉತ್ತರ ವಲಯ ಅಧ್ಯಕ್ಷ ಪ್ರತೀಪ್ ಆರಿಕ್ಕಾಡಿ, ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಕೆ. ಮಧುಸೂದನ ಕಾಮತ್, ಪಂ. ಸದಸ್ಯ ಮೋಹನ್ ಬಂಬ್ರಾಣ, ಅಜಯ ನಾಯ್ಕಾಪು, ಶೋಭಾ ಎಸ್, ಯುವಮೋರ್ಚ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ, ಜಗದೀಶ್ ಮಾತನಾಡಿದರು.

RELATED NEWS

You cannot copy contents of this page