ಹಿರಿಯ ಪತ್ರಕರ್ತ ಬಿ.ಆರ್.ಪಿ. ಭಾಸ್ಕರ್ ನಿಧನ

ತಿರುವನಂತಪುರ: ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ, ಲೇಖಕ ಬಿ.ಆರ್.ಪಿ. ಭಾಸ್ಕರ್ (91) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಕಳೆದ ಕೆಲವು ಸಮಯದಿಂದ ವಿಶ್ರಾಂತಿಯಲ್ಲಿದ್ದರು. ಭಾರತದ ಅತ್ಯಂತ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ಇವರ ಪೂರ್ಣ ಹೆಸರು ಬಾಬು ರಾಜೇಂದ್ರ ಪ್ರಸಾದ್ ಭಾಸ್ಕರ್ ಎಂದಾಗಿದೆ. ಇವರ ಪತ್ನಿ ರಮಾ ಭಾಸ್ಕರ್ ಈ ಹಿಂದೆ ನಿಧನ ಹೊಂದಿದ್ದರು. ಇವರು ಸ್ವದೇಶಾಭಿಮಾನಿ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳಿಗೆ ಬಾಜನರಾಗಿದ್ದಾರೆ. ಕೊಲ್ಲಂ ಕಾಯ್ಕರ ದಲ್ಲಿ ಜನಿಸಿದ ಬಿಆರ್‌ಪಿ ನವಭಾರತ ಪತ್ರಿಕೆಯಲ್ಲಿ ತಮ್ಮ ಔದ್ಯೋಗಿಕ ಜೀವನವನ್ನು ಆರಂಭಿಸಿದ್ದರು. 20ನೇ ವರ್ಷದಲ್ಲಿ ‘ದ ಹಿಂದೂ’ ಪತ್ರಿಕೆಯಲ್ಲಿ ಪತ್ರಕರ್ತ ಟ್ರೈನರ್ ಆಗಿ ಸೇರಿದ್ದರು. 1991ರಲ್ಲಿ ಕೆಲಸದಿಂದ ನಿವೃತ್ತರಾದರೂ ಬಳಿಕ ಬರವಣಿಗೆಯಲ್ಲಿ ನಿರತರಾಗಿದ್ದರು.

Leave a Reply

Your email address will not be published. Required fields are marked *

You cannot copy content of this page