೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶ: ಓರ್ವ ಸೆರೆ

ಮಂಜೇಶ್ವರ: ಉಪ್ಪಳ ಶಾಲೆ ಪರಿಸರದಲ್ಲಿನ ಗೂಡಂಗಡಿ ಬಳಿ ನಿಂತಿದ್ದ ವ್ಯಕ್ತಿಯಿಂದ ೧೧೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿದ್ದಾರೆ. ಈ ಸಂಬಂಧ ಬಾಕ್ರಬೈಲು ನಿವಾಸಿ ಮೊಯ್ದೀನ್ ಕುಂಞಿ (೫೩)ನನ್ನು ಸೆರೆ ಹಿಡಿಯಲಾಗಿದೆ. ಎಸ್.ಐ. ನಿಖಿಲ್ ಹಾಗೂ ತಂಡ ಪಟ್ರೋಲಿಂಗ್ ನಡೆಸುತ್ತಿದ್ದಾಗ ಶಂಕೆ ತೋರಿ ತಪಾಸಣೆ ನಡೆಸಿದಾಗ ಮೊಯ್ದೀನ್ ಕುಂಞಿಯ ಬಳಿ ಇದ್ದ ಚೀಲದಲ್ಲಿ  ಮಾಲು ಪತ್ತೆಯಾಗಿದೆ. ಪೊಲೀಸರಾದ ಶುಕೂರ್, ಶ್ರೀಜಿತ್ ಸಹಕರಿಸಿದ್ದರು.

You cannot copy contents of this page