1 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಸಹಿತ ಬೆಂಗಳೂರು ನಿವಾಸಿ ಯುವತಿ ಸೆರೆ

ಕೊಚ್ಚಿ: ಒಂದು ಕೋಟಿ ರೂ. ಮೌಲ್ಯದ ಎಂಡಿಎಂಎ ಸಹಿತ ಯುವತಿಯನ್ನ ಸೆರೆ ಹಿಡಿಯಲಾಗಿದೆ. ಬೆಂಗಳೂರು ನಿವಾಸಿ ಸರ್ಮಿನ ಸೆರೆಯಾದ ಯುವತಿ. ಆಲುವಾದಲ್ಲಿ ನಿನ್ನೆ ಸಂಜೆ ಈಕೆಯನ್ನು ಸೆರೆ ಹಿಡಿಯಲಾಗಿದೆ. ದೆಹಲಿಯಿಂದ ಕೇರಳ ಎಕ್ಸ್‌ಪ್ರೆಸ್‌ನಲ್ಲಿ ಈಕೆ ಆಲುವಾಕ್ಕೆ ತಲುಪಿದ್ದು, ಈಕೆಯ ವಶದಲ್ಲಿದ್ದ ವಾಟರ್ ಹೀಟರ್‌ನ ಕಾಯಿಲ್‌ನ ಒಳಗೆ ಮಾದಕ ದ್ರವ್ಯವನ್ನು ಅಡಗಿಸಿಟ್ಟು ಸಾಗಿಸಲಾಗಿದೆ. ಎರ್ನಾಕುಳಂ ರೂರಲ್ ಎಸ್‌ಪಿ ವೈಭವ್ ಸಕ್ಸೇನಾರಿಗೆ ಲಭಿಸಿದ ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ತಂಡ ಸರ್ಮಿನಳನ್ನು ಸೆರೆ ಹಿಡಿದಿದೆ. ಈಕೆ ಈ ಹಿಂದೆ ಯೂ ಈ ರೀತಿಯಲ್ಲಿ ಮಾದಕ ದ್ರವ್ಯ ಸಾಗಿಸಿರಬಹುದೆಂದು ಪೊಲೀ ಸರು ಶಂಕಿಸಿದ್ದಾರೆ. ಮಾದಕದ್ರವ್ಯ ವನ್ನು ಈಕೆಯಿಂದ ಸ್ವೀಕರಿಸಲು ರೈಲ್ವೇ ನಿಲ್ದಾಣಕ್ಕೆ ತಲುಪಿದವರ ಕಂಡು ಹಿಡಿಯಲು ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದಾರೆ.

ಇತ್ತೀಚೆಗೆ ಕೊಚ್ಚಿಯಲ್ಲಿ ಸೆರೆ ಹಿಡಿದ ಅತ್ಯಂತ ದೊಡ್ಡ ಮಾದಕದ್ರವ್ಯ ಬೇಟೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page