1.923 ಕೆ.ಜಿ ಗಾಂಜಾ ವಶ: ಸ್ಕೂಟರ್ ಸಹಿತ ಇಬ್ಬರ ಸೆರೆ


ಕಾಸರಗೋಡು: ಅಮಲು ಪದಾರ್ಥ ಪತ್ತೆಗಾಗಿ ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಯಂತೆ ನೀಲೇಶ್ವರ ಕರುವಾಚ್ಚೇರಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್ನಲ್ಲಿ ಸಾಗಿಸಲಾಗುತ್ತಿದ್ದ 1.923 ಕಿಲೋ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬAಧಿಸಿ ಹೊಸದುರ್ಗ ಬಲ್ಲಾ ಗ್ರಾಮದ ಕುಶಾಲ್ ನಗರದ ಅಶ್ವಂತ್ ಕುಮಾರ್ ಎಚ್.ಎ. (28) ಮತ್ತು ಬಲ್ಲಾ ಆವಿಕ್ಕರೆ ಎಎಲ್ಪಿ ಶಾಲೆ ಬಳಿಯ ನವಿತ್ ಎ. (31) ಎಂಬಿಬ್ಬರನ್ನು ಬಂಧಿಸಲಾಗಿದೆ. ನೀಲೇಶ್ವರ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ಎನ್ ವೈಶಾಖ್ರ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ರಾಜನ್ ಪಿ, ಪ್ರಿವೆಂಟಿವ್ ಆಫೀಸರ್ ಪ್ರಸಾದ್ ಎಂ.ಎA, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪ್ರಜಿತ್ ಕುಮಾರ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಬಾಬು ವಿ, ದಿನೂಪ್ ಕೆ, ನಸರುದ್ದೀನ್ ಎ.ಕೆ, ಶೈಲೇಶ್ ಕುಮಾರ್ ಎ, ಮಂಜುನಾಥ ವಿ, ಲೀಮ ಪಿ.ಕೆ. ಮತ್ತು ಚಾಲಕ ರಾಜೀವನ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page