ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನೆ ಯಾಲ್‌ನಲ್ಲಿ ಲೋಕೋಪಯೋಗಿ ರಸ್ತೆ ಬದಿಯ 100ರಷ್ಟು ಮರಗಳನ್ನು ಜೆಸಿಬಿ ಉಪಯೋಗಿಸಿ ತೆರವುಗೊಳಿ ಸಲಾಗಿದೆ. ಪೆರಿಯಾಟಡ್ಕ- ಬೇಕಲ ರಸ್ತೆಯ ಪನೆಯಾಲ್ ಪಳ್ಳಾರದಲ್ಲಿ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ ಮರಗಳನ್ನು ನಾಶಗೊಳಿಸಿದ ಬಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ಸಾಮಾಜಿಕ ಅರಣ್ಯೀಕರಣದಂಗ ವಾಗಿ ಹಾಗೂ ಪ್ರಕೃತಿಪ್ರೇಮಿಗಳು ನೆಟ್ಟು ಬೆಳೆಸಿದ ಮರಗಳನ್ನು ಒಂದೇ ರಾತ್ರಿಯಲ್ಲಿ ಸಂಪೂರ್ಣವಾಗಿ ಕಡಿದುರುಳಿಸಲಾಗಿದೆ.
ಮಹಾಗನಿ, ಊರ ಮಾವಿನಮರಗಳು ಸಹಿತ ವಿವಿಧ ರೀತಿಯ ಮರಗಳನ್ನು ಕಡಿದು ಹಾಕಲಾಗಿದೆ. ರಸ್ತೆಗೆ ಸಮಾನಾಂತರವಾಗಿ 50ಮೀಟರ್ ಉದ್ದದಲ್ಲೂ, 5 ಮೀಟರ್ ಅಗಲದಲ್ಲಿರುವ ಸ್ಥಳದಿಂದ 100ರಷ್ಟು ಮರಗಳನ್ನು ಈ ರೀತಿ ತೆರವುಗೊಳಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಲ್ಲೇ ರಸ್ತೆ ಬದಿಯಲ್ಲಿದ್ದ ತಲೆಹೊರೆ ಕಂಬ ಕೂಡಾ ನಾಪತ್ತೆಯಾಗಿದೆ.






