17ರ ಬಾಲಕಿಗೆ ಕಿರುಕುಳ: ತಂದೆ, ಪ್ರಿಯತಮನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: 17ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋ ಪದಂತೆ ಹೊಸದುರ್ಗ ಪೊಲೀಸರು ಎರಡು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಬಾಲಕಿಯ ತಂದೆ ಹಾಗೂ ಪ್ರಿಯತಮನ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿ ಕಿರುಕುಳಕ್ಕೊಳಗಾಗಿದ್ದಾಳೆ. ಇದೇ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ  ನಿತಿನ್ ಕುಮಾರ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂ ಗಳು ಈ ಕಿರುಕುಳ ಘಟನೆ ನಡೆದಿರು ವುದಾಗಿ ದೂರಲಾಗಿದೆ. ಬಾಲಕಿಯನ್ನು ಸೇರಿಸಿಕೊಂಡು ಪಳ್ಳಿಕೆರೆಗೆ ಹೋದ ನಿತಿನ್ ಕುಮಾರ್ ಲಾಡ್ಜ್ ವೊಂದರಲ್ಲಿ ಕೊಠಡಿ ಪಡೆದಿದ್ದನು. ಅಲ್ಲಿ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದಾಗ ರಕ್ತಸ್ರಾವ ವುಂಟಾಗಿತ್ತು. ರಕ್ತಸ್ರಾವ ತೀವ್ರಗೊಂಡ ಹಿನ್ನೆಲೆಯಲ್ಲಿ ಆತನೇ ಆಸ್ಪತ್ರೆಗೆ ತಲುಪಿಸಿದ್ದನು. ಬಾಲಕಿಯ ಪ್ರಾಯದಲ್ಲಿ ಸಂಶಯಗೊಂಡ ಆಸ್ಪತ್ರೆ  ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಲುಪಿ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡ ಬಳಿಕ ನಿತಿನ್ ಕುಮಾರ್ ವಿರುದ್ಧ ಪೋಕ್ಸೋ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ಈ ಹಿಂದೆ ತಂದೆ ಕೂಡಾ ಕಿರುಕುಳ ನೀಡಿರುವುದಾಗಿ  ತಿಳಿಸಿದ್ದಾಳೆ. ಇದರಂತೆ ತಂದೆ ವಿರುದ್ಧವೂ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page