ಮಂತ್ರವಾದಕ್ಕೆ ಒಪ್ಪದ ಪತ್ನಿಯ ಮುಖಕ್ಕೆ ಕುದಿಯುವ ಪದಾರ್ಥ ಎರಚಿ ಪತಿಯ ಕ್ರೂರತೆ

ಕೊಲ್ಲಂ: ಮಂತ್ರವಾದಕ್ಕೆ ಒಪ್ಪದ ಪತ್ನಿಯ ಮುಖಕ್ಕೆ ಕುದಿಯುವ ಮೀನಿನ ಪದಾರ್ಥ ಎರಚಿ ಪತಿಯೋರ್ವ ಕ್ರೂರತೆ ತೋರಿದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ಆಯೂರ್‌ನ ರಜಿಲ ಎಂಬಾಕೆ ಪತಿ ಸಜೀರ್ ನಡೆಸಿದ ಕೃತ್ಯದಿಂದ ಸುಟ್ಟು ಗಾಯಗೊಂಡಿದ್ದಾಳೆ. ದಂಪತಿ ಮಧ್ಯೆ ನಿರಂತರ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಪತ್ನಿಯ ದೇಹಕ್ಕೆ ಪಿಶಾಚಿ ಸೇರಿಕೊಂಡಿರುವುದೇ ಜಗಳಕ್ಕೆ ಕಾರಣವೆಂದು ಸಜೀರ್ ನಂಬಿದ್ದನು.  ದೇಹದಿಂದ ಪಿಶಾಚಿಯನ್ನು ಹೊರತುಪಡಿಸಲು ಅವರಿಬ್ಬರು ಆಯೂರಿನಲ್ಲಿರುವ ಓರ್ವ ಮಂತ್ರವಾದಿಯನ್ನು ಸಂಪರ್ಕಿಸಿದ್ದರು. ಪಿಶಾಚಿ ಬಾಧೆ ತೊಲಗಿಸಲು ಮಂತ್ರವಾದಿ ಮಂತ್ರವಾದ ನಡೆಸಿ ಅವರನ್ನು ಮರಳಿ ಕಳುಹಿಸಿದ್ದನು. …

ಮೀಂಜ ಕೃಷಿ ಭವನ ಸಚಿವರಿಂದ ಉದ್ಘಾಟನೆ

ಮೀಂಜ: ಕೃಷಿಕರ ಬಳಿಗೆ ತೆರಳಿ ಅವರಿಗಾಗಿ ಕಾರ್ಯಾಚರಿಸು ವವರಾಗಿರಬೇಕು ಕೃಷಿ ಇಲಾಖೆಯ ಅಧಿಕಾರಿಗಳು ಎಂದು ರಾಜ್ಯ ಕೃಷಿ ಅಭಿವೃದ್ಧಿ ಖಾತೆ ಸಚಿವ ಪಿ. ಪ್ರಸಾದ್ ನುಡಿದಿದ್ದಾರೆ. ಮೀಂಜ ಪಂಚಾಯತ್ ಕೃಷಿ ಭವನದ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡುತ್ತಿದರು. ಕಾರ್ಯಕ್ರಮದಂಗವಾಗಿ ನಡೆದ ಕಿಸಾನ್ ಗೋಷ್ಠಿಯನ್ನು ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷೆ ಶಮೀಮ ಟೀಚರ್ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ …

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ: ಹೈಯರ್ ಸೆಕೆಂಡರಿ ವಿಭಾಗದಲ್ಲಿ ಧರ್ಮತ್ತಡ್ಕ ಪ್ರಥಮ, ಪೈವಳಿಕೆನಗರ ದ್ವಿತೀಯ

ಉಪ್ಪಳ: ಪೈವಳಿಕೆ ನಗರ ಶಾಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ನಿನ್ನೆ ಸಂಜೆ ಸಮಾರೋಪಗೊಂಡಿತು. ಹೈಯರ್ ಸೆಕಂಡರಿ ಜನರಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತ್ತಡ್ಕ 256 ಅಂಕಗಳೊಂದಿಗೆ ಪ್ರಥಮ ಹಾಗೂ 238 ಅಂಕಗಳೊಂದಿಗೆ ಜಿ.ಎಚ್.ಎಸ್.ಎಸ್ ಪೈವಳಿಕೆ ನಗರ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಹೈಸ್ಕೂಲ್ ಜನರಲ್‌ನಲ್ಲಿ 250 ಅಂಕ ಪಡೆದು ಎಸ್.ಡಿ.ಪಿ. ಎಚ್.ಎಸ್ ಧರ್ಮತ್ತಡ್ಕ ಪ್ರಥಮ, 204 ಅಂಕದೊಂದಿಗೆ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ದ್ವಿತೀಯ, ಯು.ಪಿ ಜನರಲ್‌ನಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ 80 ಅಂಕದೊಂದಿಗೆ ಪ್ರಥಮ, …