ಮೀಂಜ: ಕೃಷಿಕರ ಬಳಿಗೆ ತೆರಳಿ ಅವರಿಗಾಗಿ ಕಾರ್ಯಾಚರಿಸು ವವರಾಗಿರಬೇಕು ಕೃಷಿ ಇಲಾಖೆಯ ಅಧಿಕಾರಿಗಳು ಎಂದು ರಾಜ್ಯ ಕೃಷಿ ಅಭಿವೃದ್ಧಿ ಖಾತೆ ಸಚಿವ ಪಿ. ಪ್ರಸಾದ್ ನುಡಿದಿದ್ದಾರೆ. ಮೀಂಜ ಪಂಚಾಯತ್ ಕೃಷಿ ಭವನದ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡುತ್ತಿದರು. ಕಾರ್ಯಕ್ರಮದಂಗವಾಗಿ ನಡೆದ ಕಿಸಾನ್ ಗೋಷ್ಠಿಯನ್ನು ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಉದ್ಘಾಟಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷೆ ಶಮೀಮ ಟೀಚರ್ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಬ್ಲೋಕ್ ಪಂ. ಉಪಾಧ್ಯಕ್ಷ ಮೊಹಮ್ಮದ್ ಹನೀಫ, ಮೀಂಜ ಪಂ. ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಸ್ಥಾಯಿ ಸಮಿತಿ ಅಧ್ಯಕ್ಷರಾದ ರುಖಿಯ ಸಿದ್ದಿಕ್, ಬಾಬು, ಸರಸ್ವತಿ, ಜಿಲ್ಲಾ ಪಂ. ಸದಸ್ಯರಾದ ಗೋಲ್ಡನ್ ರಹ್ಮಾನ್, ಕಮಲಾಕ್ಷಿ, ಬ್ಲೋಕ್ ಪಂ. ಸದಸ್ಯರಾದ ಎಂ.ಎಲ್. ಅಶ್ವಿನಿ, ಕೆ.ವಿ. ರಾಧಾಕೃಷ್ಣನ್, ಆತ್ಮ ಪ್ರೊಜೆಕ್ಟ್ ಡೈರೆಕ್ಟರ್ ಕೆ. ಆನಂದ, ಕೃಷಿ ಡೆಪ್ಯುಟಿ ಡೈರೆಕ್ಟರ್ ಮಿನಿ ಮೆನೋನ್, ಮಂಜೇಶ್ವರ ಕೃಷಿ ಅಸಿಸ್ಟೆಂಟ್ ಡೈರೆಕ್ಟರ್ ಇನ್‌ಚಾರ್ಜ್ ಅರುಣ್ ಪ್ರಸಾದ್, ಪಂ. ಸದಸ್ಯರು, ಜನಪ್ರತಿನಿಧಿಗಳ ಸಹಿತ ಹಲವರು ಉಪಸ್ಥಿತರಿದ್ದರು.







