ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಲಾರಿ ಚಾಲಕ ಚಿಕಿತ್ಸೆ ಮಧ್ಯೆ ಮೃತ್ಯು

ಮುಳ್ಳೇರಿಯ: ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೆಂಪುಕಲ್ಲು ಲಾರಿ ಚಾಲಕ ಮೃತಪಟ್ಟನು. ದೇಲಂಪಾಡಿ ವಿಲ್ಲೇಜ್‌ನ ಬೆಳ್ಳಿಪ್ಪಾಡಿ ನಿವಾಸಿ ವಣ್ಣಪ್ಪ ಗೌಡ ಎಂಬವರ ಪುತ್ರ ಬಿ.ಎಚ್. ಕಿರಣ್ (36) ಮೃತಪಟ್ಟ ಯುವಕ. ಅಕ್ಟೋಬರ್ ೨೬ರಂದು ಸಂಜೆ ಪಂಜಿಕಲ್ಲು ತೂಗುಸೇತುವೆ ಸಮೀಪ  ಕಿರಣ್ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿ ದ್ದರು. ಕೂಡಲೇ ನಾಗರಿಕರು ಇವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತಲುಪಿಸಿದ್ದರು. ಅಲ್ಲಿ ನಡೆದ ತಪಾಸಣೆಯಲ್ಲಿ ಕಿರಣ್ ಇಲಿ ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ. ಸ್ಥಿತಿ ಗಂಭೀರವಾಗಿದ್ದುದರಿಂದ …

ಉಪ್ಪಳ ಗೇಟ್ ಸಮೀಪ ಮಂಗಳೂರು ನಿವಾಸಿಯ ಮೃತದೇಹ ಪತ್ತೆ ಪ್ರಕರಣ: ಸಾವಿನಲ್ಲಿ ಮುಂದುವರಿದ ನಿಗೂಢತೆ

ಉಪ್ಪಳ: ಉಪ್ಪಳ ರೈಲ್ವೇ ಹಳಿ ಸಮೀಪ ಮಂಗಳೂರು ನಿವಾಸಿಯಾದ ನೌಫಲ್ ಎಂಬ ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಸರ್ಜನ್ ಡಾ| ರೋಹಿತ್‌ರ ನೇತೃತ್ವದಲ್ಲಿ  ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೌಫಲ್‌ನ ಸಾವು  ಕೊಲೆಕೃತ್ಯವಾಗಿದೆಯೇ ಎಂಬ ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಸರ್ಜನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸರ್ಜನ್ ಜೊತೆಗೆ ಮಂಜೇಶ್ವರ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್, ಹೊಸದುರ್ಗ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್, ಫಾರೆನ್ಸಿಕ್ ತಜ್ಞರು   …

ಅಪಘಾನಿಸ್ಥಾನದಲ್ಲಿ ಪ್ರಬಲ ಭೂಕಂಪ:  ಭಾರೀ ಸಾವುನೋವು

ಕಾಬೂಲ್: ಅಪಘಾನಿಸ್ಥಾನದ ಅತೀ ದೊಡ್ಡ ನಗರವಾದ ಮಜರ್ ಇ ಶೆರೀಫ್‌ನಲ್ಲಿ 6.3 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದೆ ಯೆಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಜಿಕಲ್ ಸರ್ವೇ ತಿಳಿಸಿದೆ. ಭೂಮಿಯ 28 ಕಿ.ಮೀ. ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಬಾಲ್ಕ್ ಪ್ರಾಂತ್ಯದ ರಾಜಧಾನಿಯಾದ ಮಜರ್ ಇ. ಶೆರೀಫ್ ಪ್ರದೇಶದ ಸುಮಾರು 5,23,000 ಜನರು ವಾಸಿಸುತ್ತಿರುವ ಜನನಿಬಿಡ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ. ಇದು ಭಾರೀ ಸಾವುನೋವುಗಳಿಗೂ ದಾರಿಮಾಡಿಕೊಟ್ಟಿದೆ. ಈತನಕ ಲಭಿಸಿದ ವರದಿ ಪ್ರಕಾರ 7 ಮಂದಿ  ಸಾವನ್ನಪ್ಪಿ ೧೫೦ಕ್ಕೂ ಹೆಚ್ಚು …

ಸ್ಕೂಟರ್‌ಗಳು ಪರಸ್ಪರ ಢಿಕ್ಕಿ: ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಸವಾರ ಮೃತ್ಯು

ಮಂಜೇಶ್ವರ: ಸ್ಕೂಟರ್‌ಗಳು ಪರಸ್ಪರ ಢಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸವಾರ ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ಬಳಿಯ ಕಳಾಯಿ ಕುಂಟುಕೊಳಂಜೆ ನಿವಾಸಿ ಹಿರಿಯ ಕೃಷಿಕ ಪುರೋಹಿತರೂ ಆಗಿರುವ ಗೋಪಾಲಕೃಷ್ಣ ಕೆ. ನಲ್ಲೂರಾಯ (68) ಮೃತಪಟ್ಟ ವ್ಯಕ್ತಿ. ಶನಿವಾರ ಮಧ್ಯಾಹ್ನ ಉಪ್ಪಳ ತುರ್ತಿ ಎಂಬಲ್ಲಿನ ದೈವಸ್ಥಾನದಲ್ಲಿ ವೈದಿಕ ಕಾರ್ಯಕ್ರಮ ಮುಗಿಸಿ ಸ್ಕೂಟರ್‌ನಲ್ಲಿ ಹೊಸಂಗಡಿ ಭಾಗಕ್ಕೆ ಸಂಚರಿಸುತ್ತಿದ್ದ ವೇಳೆ ವಾಮಂಜೂರು ಚೆಕ್‌ಪೋಸ್ಟ್ ಸಮೀಪ   ಹೆದ್ದಾರಿಯಲ್ಲಿ ಇನ್ನೊಂದು ಸ್ಕೂಟರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ …

ಬೈಕ್‌ನಲ್ಲಿ ಸಾಗಿಸುತ್ತಿದ್ದ 26.81 ಗ್ರಾಂ ಎಂಡಿಎಂಎ ವಶ: ಓರ್ವ ಸೆರೆ

ಮಂಜೇಶ್ವರ: ಬೈಕ್‌ನಲ್ಲಿ ಸಾಗಿಸುತ್ತಿದ್ದ 26.81 ಗ್ರಾಂ ಮಾದಕದ್ರವ್ಯವಾದ ಎಂಡಿಎಂಎಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ವೈಷ್ಣವ್ ನೇತೃತ್ವದ ಪೊಲೀಸರು ಇಂದು ಮುಂಜಾನೆ ವಶಪಡಿಸಿದೆ. ಇದಕ್ಕೆ  ಸಂಬಂಧಿಸಿ ಬಂಗ್ರಮಂಜೇಶ್ವರ ನಸೀರಿಯ ಮಂಜಿಲ್‌ನ  ಅಬೂಬ ಕರ್ ಆಬೀದ್ (25) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ಮುಂಜಾನೆ 1.45ರ ವೇಳೆಗೆ ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ ಓವರ್ ಬ್ರಿಡ್ಜ್ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಎಸ್‌ಐ ನೇತೃತ್ವದಲ್ಲಿ ಪೊಲೀಸರು ರಾತ್ರಿ ವೇಳೆ ನಡೆಸಿದ ವಾಹನ ತಪಾಸಣೆಯಲ್ಲಿ …

ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಕುಂಬಳೆ: ಬದಿಯಡ್ಕದ ಮೀನು  ಮಾರಾಟಗಾರನಾದ ಅನಿಲ್ ಕುಮಾರ್ (40)ರಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ೭ನೇ ಆರೋಪಿಯನ್ನು ಬಂಧಿಸಲಾಗಿದೆ. ಮಧೂರು ಪಟ್ಲ ನಿವಾಸಿ ಪನ್ನಿಯೂರ್ ಹೌಸ್‌ನ ಕೆ. ರಾಮಚಂದ್ರ (55) ಎಂಬಾತನನ್ನು ಕುಂಬಳೆ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ  ಈ ಹಿಂದೆ 6 ಮಂದಿಯನ್ನು ಬಂಧಿಸಲಾಗಿತ್ತು. ಅಕ್ಟೋಬರ್ ೫ರಂದು ರಾತ್ರಿ ಸೀತಾಂಗೋಳಿ ಪೇಟೆಯಲ್ಲಿ  ಘಟನೆ ನಡೆದಿದೆ. ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ನಡೆದ ತರ್ಕದ ಮಧ್ಯೆ ಅನಿಲ್ ಕುಮಾರ್‌ರನ್ನು ಇರಿದು ಕೊಲೆಗೈಯ್ಯಲು ಯತ್ನಿಸಲಾಗಿತ್ತು. ಅನಿಲ್ …

ಸೀತಾಂಗೋಳಿಯಲ್ಲಿ ಜೂಜಾಟ: ಇಬ್ಬರ ಸೆರೆ

ಸೀತಾಂಗೋಳಿ: ಸೀತಾಂ ಗೋಳಿಯಲ್ಲಿ ಜೂಜಾಟ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ಸ್ಥಳದಿಂದ 30,260 ರೂಪಾಯಿ ಗಳನ್ನು ವಶಪಡಿಸಲಾಗಿದೆ. ಪೊಲೀಸರನ್ನು ಕಂಡು ಇಬ್ಬರು ಓಡಿ ಪರಾರಿಯಾಗಿದ್ದಾರೆ. ಮುಗು ರೋಡ್‌ನ ಅಬ್ದುಲ್ ಅಸೀಸ್ (45), ಉಪ್ಪಳದ ಮುಹಮ್ಮದ್ ಎಂಬಿವರು ಜೂಜಾಟ ವೇಳೆ ಸೆರೆಗೀಡಾದ ವ್ಯಕ್ತಿಗಳಾಗಿದ್ದಾರೆ. ಮೊನ್ನೆ ರಾತ್ರಿ 1 ಗಂಟೆ ವೇಳೆ ಸೀತಾಂಗೋಳಿ -ಕುಂಬಳೆ ರಸ್ತೆಯ ಬಸ್ ವೈಟಿಂಗ್ ಶೆಡ್‌ನ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ತಂಡ ಜೂಜಾಟ ನಿರತವಾಗಿತ್ತು. ಈ ಬಗ್ಗೆ ಲಭಿಸಿದ ಮಾಹಿತಿ ಪ್ರಕಾರ ಸಬ್ …

ಶಬರಿಮಲೆ ಚಿನ್ನ ಕಳವು: ಮಾಜಿ ಮುಜರಾಯಿ ಮಂಡಳಿಯ ಅಧ್ಯಕ್ಷರ  ವಿಚಾರಣೆ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರು ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎನ್. ವಾಸುರನ್ನು  ವಿಶೇಷ ತನಿಖಾ ತಂಡದ ಮುಖ್ಯಸ್ಥರಾದ ಎಸ್.ಪಿ ಶಶಿಧರನ್ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೊನ್ನೆ ಬಂಧಿತನಾದ ಶಬರಿಮಲೆ ಕ್ಷೇತ್ರದ ನಿವೃತ್ತ ಎಕ್ಸಿಕ್ಯೂಟಿವ್ ಆಫೀಸರ್ ಸಿ. ಸುಧೀಶ್ ಕುಮಾರ್ ನೀಡಿದ ಹೇಳಿಕೆಯ ಆಧಾರದಲ್ಲಿ ವಾಸು ರನ್ನು ತನಿಖಾ ತಂಡ ವಿಚಾರಣೆ ಗೊಳಪಡಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆ ಮೂಲಕ ಈ ಪ್ರಕರಣದ ತನಿಖೆ ಮುಜ ರಾಯಿ ಮಂಡಳಿಯ ಉನ್ನತ …

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ: ಮನೆ ಕೆಡಹಲು ಬಂದ ಅಧಿಕಾರಿಗಳ ಮುಂದೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ಕುಟುಂಬ, ಸೃಷ್ಟಿಯಾದ ಸಂಘರ್ಷ ವಾತಾವರಣ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಾಗಿ ಭೂಸ್ವಾಧೀನಗೊಳಿಸುವ ಕ್ರಮದಂತೆ ಮನೆಯನ್ನು ಕೆಡಹಲು ಬಂದ ಅಧಿಕಾರಿಗಳ ಮುಂದೆ  ಆ ಮನೆಯವರು ಆತ್ಮಹತ್ಯಾಬೆದರಿಕೆಯೊಡ್ಡಿದ  ಅದು ಅಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿದ ಘಟನೆ  ಚೆರ್ಕಳ ಸಮೀಪದ ಬೇವಿಂಜೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಂತೆ ಬೇವಿಂಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಎಂ.ಟಿ. ಅಬ್ದುಲ್ ಬಶೀರ್ ಎಂಬವರ ದ್ವಿ ಅಂತಸ್ತು ಮನೆಯ ಎದುರುಗಡೆ ಭಾಗವನ್ನು ಕೆಡಹಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿಗಳ ತಂಡ ನಿನ್ನೆ ಆ ಮನೆಗೆ ಬಂದಿತ್ತು. ಪ್ರಸ್ತುತ ಯೋಜನೆ …

ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ 51  ಕೋಟಿ ರೂ. ನಗದು ಬಹುಮಾನ ಘೋಷಣೆ

ಮುಂಬೈ: 2026ರ ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಭಾರತೀಯ  ಕ್ರಿಕೆಟ್ ನಿಯಂತ್ರಣ  ಮಂಡಳಿ ೫೧ ಕೋಟಿ ರೂ. ನಗದು ಬಹುಮಾನ ಘೋಷಿಸಿದೆ.  ಆ ಮೂಲಕ ಇದೇ ಚೊಚ್ಚಲಬಾರಿ ಯಾಗಿ  ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ 41.75 ಕೋಟಿ ರೂ. ಹಾಗೂ ರನ್ನರ್ಸ್ ಅಪ್ ತಂಡವಾದ ದ. ಆಫ್ರಿಕಾಕ್ಕೆ  21.55 ಕೋಟಿ ರೂ. ಲಭಿಸಿದೆ. ಇದರ ಹೊರತಾಗಿ ಡಿಸಿಸಿಐ ಭಾರತದ ಮಹಿಳಾ ತಂಡಕ್ಕೆ ೫೧ ಕೋಟಿ ರೂ.ಗಳ ಈ ವಿಶೇಷ ಬಹುಮಾನ ಘೋಷಿಸಿದೆ.