ಬೀಡಿ ಗುತ್ತಿಗೆದಾರ ನಿಧನ

ಉಪ್ಪಳ: ಬಾಯಾರು ಸುದೆಂಬಳ ನಿವಾಸಿ ಬೀಡಿ ಗುತ್ತಿಗೆದಾರ ತಿಮ್ಮಪ್ಪ ದೇವಾಡಿಗ (68) ನಿಧನ ಹೊಂದಿದರು. ಅಸೌಖ್ಯ ಬಾಧಿಸಿದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಹಿರಿಯ ಕೃಷಿಕರೂ ಆದ ಇವರು ಟೆಲಿಫೋನ್ ಬೀಡಿ ಗುತ್ತಿಗೆದಾರರಾಗಿದ್ದರು. ದಿವಂಗತರಾದ ನಾರಾಯಣ ದೇವಾಡಿಗ- ಸೀತಾ ದಂಪತಿಯ ಪುತ್ರನಾದ ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಹರ್ಷಿತ್, ದೀಪಿಕ, ದೇವಿಕ, ರಕ್ಷಿತ್, ಅಳಿಯಂದಿರಾದ ಮೋಹನ, ಶೈಲೇಶ್, ಸಂದೀಪ್, ಸಹೋದರ ಅಚ್ಯುತ, ಸಹೋದರಿಯರಾದ ಲೀಲ, ಸುಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಡು ಬಡತನಮುಕ್ತ ಕೇರಳ ಎಂಬ ಘೋಷಣೆ ಎಡರಂಗ ಸರಕಾರದ ವಂಚನೆ- ಮುಕುಂದನ್ ಪಳ್ಳಿಯರ

ಕಾಸರಗೋಡು: ಕಡು ಬಡತನಮುಕ್ತ ಕೇರಳ ಎಂಬ ಘೋಷಣೆ ಕೇವಲ ರಾಜಕೀಯ ಹಕ್ಕುವಾದ ಮಂಡನೆ ಮಾತ್ರವಾಗಿದೆ. ಈ ಮೂಲಕ ಕೇರಳದ ಲಕ್ಷಾಂತರ ಮಂದಿ ಬಡ ಬುಡಕಟ್ಟು ಜನಾಂಗದ ಕುಟುಂಬಗಳನ್ನು ರಾಜ್ಯ ಸರಕಾರ ವಂಚಿಸಿದೆ ಎಂದು ಪರಿಶಿಷ್ಟ ವರ್ಗ ಮೋರ್ಚಾ ರಾಜ್ಯ ಅಧ್ಯಕ್ಷ ಮುಕುಂದನ್ ಪಳ್ಳಿಯರ ತಿಳಿಸಿದ್ದಾರೆ. ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಡು ಬಡತನಮುಕ್ತ ರಾಜ್ಯವೆಂಬ ಸುಳ್ಳು ಹಕ್ಕು ವಾದ ಮಂಡಿಸಿರುವುದರಿಂದ ಬುಡಕಟ್ಟು ಜನಾಂಗದವರ ಸಹಿತ ಬಡ ಜನರಿಗೆ ಆರ್ಥಿಕ ಸೌಲಭ್ಯಗಳು ಲಭಿಸದೆ …

ಗಡಿನಾಡ ಕನ್ನಡಿಗರಿಂದ ಹಕ್ಕೊತ್ತಾಯ: ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಧ್ವನಿಯೆತ್ತುವ ಕಾಲ ಸನ್ನಿಹಿತವಾಗಿದೆ- ಮಲಾರ್ ಜಯರಾಮ ರೈ

ಕಾಸರಗೋಡು: ಬಹುಭಾಷಾ ಸಂಸ್ಕೃತಿ ಹೊಂದಿರುವ ಕಾಸರಗೋಡಿನಲ್ಲಿ ಇಲ್ಲಿನ ಬಹುಭಾಷಿಗರನ್ನು ಬೆಸೆಯುವ ಕನ್ನಡ ಭಾಷೆಯನ್ನೇ ದಮನಿಸುವ ಕೆಲಸ ಸರಕಾರದ ಭಾಗದಿಂದ ನಡೆಯುತ್ತಿದೆ. ಆದ್ದರಿಂದ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತುವ ಕಾಲ ಸನ್ನಿಹಿತವಾಗಿದೆ ಎಂದು ಕನ್ನಡ ಹೋರಾಟಗಾರ ಮಲಾರ್ ಜಯರಾಮ ರೈ ನುಡಿದರು. ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಕನ್ನಡಿಗರ ಹಕ್ಕೊತ್ತಾಯ ದಿನಾಚರಣೆಯಂಗವಾಗಿ ಹಮ್ಮಿಕೊಳ್ಳಲಾದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇರಳ ಮತ್ತು ಕರ್ನಾಟಕ ರಾಜ್ಯಗಳು ತಮ್ಮ ೭೦ನೇ ರಾಜ್ಯೋತ್ಸವದ …

ಬಿಜೆಪಿ ಕೊಲ್ಯ ವಾರ್ಡ್ ಚುನಾವಣಾ ಸಮಿತಿ ಕಚೇರಿ ಉದ್ಘಾಟನೆ

ಮಧೂರು: ಬಿಜೆಪಿ ಮಧೂರು ಪಂಚಾಯತ್ ಕೊಲ್ಯ ವಾರ್ಡ್ ಚುನಾವಣಾ ಸಮಿತಿ ಕಚೇರಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ವಾರ್ಡ್ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ರಾಧಾಕೃಷ್ಣ ಸೂರ್ಲು, ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ., ಮಧೂರು ವೆಸ್ಟ್ ಏರಿಯಾ ಸಮಿತಿ ಅಧ್ಯಕ್ಷ ಮಾಧವ ಮಾಸ್ತರ್, ಮಧೂರು ಈಸ್ಟ್ ಏರಿಯಾ ಸಮಿತಿ ಅಧ್ಯಕ್ಷ ರವಿ ಗಟ್ಟಿ, …