ಕಾಸರಗೋಡು: ಕಡು ಬಡತನಮುಕ್ತ ಕೇರಳ ಎಂಬ ಘೋಷಣೆ ಕೇವಲ ರಾಜಕೀಯ ಹಕ್ಕುವಾದ ಮಂಡನೆ ಮಾತ್ರವಾಗಿದೆ. ಈ ಮೂಲಕ ಕೇರಳದ ಲಕ್ಷಾಂತರ ಮಂದಿ ಬಡ ಬುಡಕಟ್ಟು ಜನಾಂಗದ ಕುಟುಂಬಗಳನ್ನು ರಾಜ್ಯ ಸರಕಾರ ವಂಚಿಸಿದೆ ಎಂದು ಪರಿಶಿಷ್ಟ ವರ್ಗ ಮೋರ್ಚಾ ರಾಜ್ಯ ಅಧ್ಯಕ್ಷ ಮುಕುಂದನ್ ಪಳ್ಳಿಯರ ತಿಳಿಸಿದ್ದಾರೆ. ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಕಡು ಬಡತನಮುಕ್ತ ರಾಜ್ಯವೆಂಬ ಸುಳ್ಳು ಹಕ್ಕು ವಾದ ಮಂಡಿಸಿರುವುದರಿಂದ ಬುಡಕಟ್ಟು ಜನಾಂಗದವರ ಸಹಿತ ಬಡ ಜನರಿಗೆ ಆರ್ಥಿಕ ಸೌಲಭ್ಯಗಳು ಲಭಿಸದೆ ಆತಂಕ ಸೃಷ್ಟಿಯಾಗಿದೆ. ರಾಜ್ಯದ ಆರ್ಥಿಕ ಸಂದಿಗ್ಧತೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ನಿಷೇಧಿಸಲು ಎಡರಂಗ ಉದ್ದೇಶಿಸಿದೆಯೇ ಎಂದು ಸಂಶಯಿಸಬೇಕಾಗಿದೆ ಎಂದು ಅವರು ತಿಳಿಸಿದರು. ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಳ್ಕೂರು, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಟಿ.ಡಿ. ಭರತನ್, ಶಿಬು ಪಾಣತ್ತೂರು, ರಾಜ್ಯ ಸಮಿತಿ ಸದಸ್ಯ ಕೆ.ಟಿ. ಈಶ್ವರನ್ ಮಾಸ್ತರ್, ಜಿಲ್ಲಾ ಕಾರ್ಯದರ್ಶಿಗಳಾಗ ಉಣ್ಣಿಕೃಷ್ಣನ್ ಕೆ, ಹರೀಶ್ ಕೊಲ್ಲಂಗಾನ ಮಾತನಾಡಿದರು







