ಗಡಿನಾಡ ಕನ್ನಡಿಗರಿಂದ ಹಕ್ಕೊತ್ತಾಯ: ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಧ್ವನಿಯೆತ್ತುವ ಕಾಲ ಸನ್ನಿಹಿತವಾಗಿದೆ- ಮಲಾರ್ ಜಯರಾಮ ರೈ

ಕಾಸರಗೋಡು: ಬಹುಭಾಷಾ ಸಂಸ್ಕೃತಿ ಹೊಂದಿರುವ ಕಾಸರಗೋಡಿನಲ್ಲಿ ಇಲ್ಲಿನ ಬಹುಭಾಷಿಗರನ್ನು ಬೆಸೆಯುವ ಕನ್ನಡ ಭಾಷೆಯನ್ನೇ ದಮನಿಸುವ ಕೆಲಸ ಸರಕಾರದ ಭಾಗದಿಂದ ನಡೆಯುತ್ತಿದೆ. ಆದ್ದರಿಂದ ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತುವ ಕಾಲ ಸನ್ನಿಹಿತವಾಗಿದೆ ಎಂದು ಕನ್ನಡ ಹೋರಾಟಗಾರ ಮಲಾರ್ ಜಯರಾಮ ರೈ ನುಡಿದರು. ಕರ್ನಾಟಕ ಸಮಿತಿ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಕನ್ನಡಿಗರ ಹಕ್ಕೊತ್ತಾಯ ದಿನಾಚರಣೆಯಂಗವಾಗಿ ಹಮ್ಮಿಕೊಳ್ಳಲಾದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇರಳ ಮತ್ತು ಕರ್ನಾಟಕ ರಾಜ್ಯಗಳು ತಮ್ಮ ೭೦ನೇ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ ಗಡಿನಾಡು ಕಾಸರಗೋಡಿನ ಕನ್ನಡಿಗರನ್ನು ಹಕ್ಕೊತ್ತಾಯದ ಜತೆಗೆ ಕರಾಳ ದಿನಾಚರಣೆಯತ್ತ ಕೇರಳ ಸರಕಾರ ಒಯ್ಯುವಂತೆ ಮಾಡಿರುವುದು ದೌರ್ಭಾಗ್ಯಕರ ಸಂಗತಿಯಾಗಿದೆ ಎಂದು ಅವರು ತಿಳಿಸಿದರು. ಕರ್ನಾಟಕ ಸಮಿತಿ ಜಿಲ್ಲಾಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು.

ಕ.ಸಾ.ಪ. ಕೇರಳ ಗಡಿನಾಡ ಘಟಕದ ವಿಶಾಲಾಕ್ಷ ಪುತ್ರಕಳ, ಟಿ. ಶಂಕರನಾರಾಯಣ ಭಟ್, ಸತೀಶ್ ಕುಮಾರ್ ಕೂಡ್ಲು,  ನ್ಯಾಯವಾದಿ ಎಂ. ನಾರಾಯಣ ಭಟ್, ರವೀಶ ತಂತ್ರಿ ಕುಂಟಾರು, ಸಂಕಬೈಲು ಸತೀಶ ಅಡಪ, ಲಕ್ಷ್ಮಣ ಪ್ರಭು ಕುಂಬಳೆ, ಎಂ. ಉಮೇಶ ಸಾಲ್ಯಾನ್, ಕೆ. ಭಾಸ್ಕರ, ಶಿವರಾಮ ಕಾಸರಗೋಡು, ನ್ಯಾಯವಾದಿ ಕೆ. ಶ್ರೀಕಾಂತ್, ಅರಿಬೈಲು ಗೋಪಾಲ ಶೆಟ್ಟಿ, ಪ್ರೊ. ಎ. ಶ್ರೀನಾಥ್, ರವಿ ನಾಯ್ಕಾಪು, ಸುಕೇಶ್, ವಿ.ಬಿ. ಕುಳಮರ್ವ, ಡಾ. ವೆಂಕಟ್ರಮಣ ಹೊಳ್ಳ, ಬೇ.ಸಿ. ಗೋಪಾಲಕೃಷ್ಣ ಭಟ್, ಗಣಪತಿ ಭಟ್, ಎಂ. ಸಂಜೀವ ಶೆಟ್ಟಿ, ಜಯನಾರಾ ಯಣ ತಾಯನ್ನೂರು, ಗಣೇಶ್ ಪ್ರಸಾದ್ ಪಾಣೂರು, ಸತ್ಯನಾರಾ ಯಣ ತಂತ್ರಿ, ಜಯಾನಂದ ಕುಮಾರ್ ಹೊಸದುರ್ಗ ಮೊದಲಾ ದವರು ಉಪಸ್ಥಿತರಿದ್ದರು. ಕ.ಸಾ.ಪ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ ಸ್ವಾಗತಿಸಿ, ಗುರುಪ್ರಸಾದ್ ಕೋಟೆಕಣಿ ವಂದಿಸಿದರು. ಪತ್ರಕರ್ತ ವೀಜಿ ಕಾಸರಗೋಡು ನಿರೂಪಿಸಿದರು.

RELATED NEWS

You cannot copy contents of this page