ರಸ್ತೆಯ ಶೋಚನೀಯಾವಸ್ಥೆ: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಖಾಸಗಿ ಬಸ್ ಮುಷ್ಕರ: ಪ್ರಯಾಣಿಕರಿಗೆ ಸಮಸ್ಯೆ
ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಖಾಸಗಿ ಬಸ್ ಸಂಚಾರವನ್ನು ಇಂದು ಮೊಟಕುಗೊಳಿಸಿದ್ದು ಇದರಿಂದ ಪ್ರಯಾಣಿಕರು ಭಾರೀ ಸಮಸ್ಯೆಗೀಡಾ ಗಿದ್ದಾರೆ. ಎಂದಿನಂತೆ ಕಾಸರಗೋಡು ಹಾಗೂ ಕಲ್ಲಡ್ಕ ಭಾಗಕ್ಕೆ ತೆರಳಲು ಬಸ್ ಸ್ಟಾಪ್‌ಗಳಿಗೆ ತಲುಪಿದ ಪ್ರಯಾಣಿಕರು ಬಸ್‌ಗಳಿಲ್ಲದುದರಿಂದ ಸಂಕಷ್ಟಕ್ಕೀಡಾದರು. ಈ ರೂಟ್‌ನಲ್ಲಿ ಕೆಲವೊಮ್ಮೆ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆಯಾದರೂ ಪ್ರಯಾಣಿಕರ ಸಂದಣಿ ಹೆಚ್ಚಿರುವುದರಿಂದ ಅದಕ್ಕೇರಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ. ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರೂಟ್‌ನಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಒಂದು ವರ್ಷದಿಂದ ಹೊಂಡಗಳಿಂದ ತುಂಬಿಕೊಂಡಿರು ವುದರಿಂದ ಪ್ರಯಾಣಿಕರು ಹಾಗೂ …