ಕುಂಬಳೆ ಭಾಸ್ಕರನಗರದಲ್ಲಿ ವಿಕಲ ಚೇತನ ವ್ಯಕ್ತಿಯ ಗೂಡಂಗಡಿಯಿಂದ ಕಳವು

ಕುಂಬಳೆ: ಇಲ್ಲಿನ ಭಾಸ್ಕರ ನಗರದಲ್ಲಿ ವಿಕಲ ಚೇತನ ವ್ಯಕ್ತಿಯ ಗೂಡಂಗಡಿ ಯಿಂದ  ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿ ಸಿದ್ದಾರೆ. ಕಳೆದ ಶನಿವಾರ ರಾತ್ರಿ ಅಂಗಡಿಯ ಬೀಗ ಮುರಿದು ಸಿಗರೇಟ್, ಮೊಟ್ಟೆ ಮೊದಲಾದವು ಗಳನ್ನು  ಕಳವು ನಡೆಸಲಾಗಿದೆ.  ಹರೀಶ ಎಂಬವರ ಮಾಲಕತ್ವದ ಅಂಗಡಿಯಿಂದ ಈ ಕಳವು ನಡೆಸಲಾಗಿದೆ. ನಿನ್ನೆ ಬೆಳಿಗ್ಗೆ ಅಂಗಡಿ ತೆರೆಯಲು ತಲುಪಿದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಸುಮಾರು ಒಂದು ಸಾವಿರ ರೂಪಾಯಿಗಳ ಸಿಗರೇಟ್ ಹಾಗೂ ಎರಡು ಟ್ರೇ ಮೊಟ್ಟೆಗಳು ಕಳವುಹೋ ಗಿರುವುದಾಗಿ ಹರೀಶ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಉದ್ದೇಶದಿಂದ  ಹರೀಶ ವ್ಯಾಪಾರ ಆರಂಭಿಸಿದ್ದರು. ಈ ಅಂಗಡಿಯಿಂದ ಲಭಿಸುವ ಅತ್ಯಲ್ಪ ಆದಾಯದಿಂದ ಕುಟುಂಬ ಜೀವನ ಸಾಗಿಸಬೇಕಾಗಿದೆ.

RELATED NEWS

You cannot copy contents of this page