ಬೇಕರಿಯಲ್ಲಿ ಬೆಂಕಿ ಅನಾಹುತ, ಲಕ್ಷಾಂತರ ರೂ. ನಷ್ಟ

ಕಾಸರಗೋಡು: ನಗರದ ಹಳೇ ಬಸ್ ನಿಲ್ದಾಣ ಪರಿಸರದಲ್ಲಿರುವ ರಾಮ್‌ದೇವ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯವೆಸಗುತ್ತಿರುವ ಲೂಮ್ಸ್ ಬೇಕರಿ ಆಂಡ್ ಕೂಲ್ ಬಾರ್‌ಗೆ ಮೊನ್ನೆ ರಾತ್ರಿ ಬೆಂಕಿ ತಗಲಿ ಅದರೊಳಗಿದ್ದ ಹೆಚ್ಚುಕಡಿಮೆ ಎಲ್ಲಾ ಸಾಮಗ್ರಿಗಳು ಬೆಂಕಿ ಗಾಹುತಿಯಾಗಿದೆ.

ಮೀಟರ್ ಬೋಕ್ಸ್, ಪ್ರೀಜರ್‌ಗಳು, ಅಡುಗೆಕೊಠಡಿಯ ಸಾಮಗ್ರಿಗಳೂ ಸೇರಿದಂತೆ ಎಲ್ಲಾ ಸಾಮಗ್ರಿಗಳೂ ಬೆಂಕಿಗಾಹುತಿಯಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಬೆಂಕಿ ತಗಲಲು ಕಾರಣವೆನ್ನಲಾಗಿದೆ. ಅಗ್ನಿಶಾಮಕದಳ ಸಕಾಲಿಕ ರಕ್ಷಣಾ ಕಾರ್ಯಾಚರಣೆಯಿಂದಾಗಿ ಸಂಭಾವ್ಯ ಭಾರೀ ದೊಡ್ಡ ಅನಾಹುತ ತಪ್ಪಿಹೋಗಿದೆ. ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ ಆರ್. ವಿನೋದ್ ಕುಮಾರ್, ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್, ವಿ.ಎಂ. ಸತೀಶ್‌ರ ನೇತೃತ್ವದಲ್ಲಿ ಕಾಸರಗೋಡು ಅಗ್ನಿಶಾಮಕ ದಳದ ೨ ಇಂಜಿನಿಯರ್‌ಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸತತವಾಗಿ ನಡೆಸಿದ ಪ್ರಯತ್ನದಿಂದಾಗಿ ಬೆಂಕಿ ನಂದಿಸಿದೆ. ಈ ಕಟ್ಟಡದಲ್ಲಿ ೩೦ರಷ್ಟು ಅಂಗಡಿಗಳು ಕಾರ್ಯವೆಸಗುತ್ತಿವೆ. ಅಗ್ನಿಶಾಮಕದಳದ ಸಕಾಲಿಕ ಕಾರ್ಯಾಚರಣೆಯಿಂದಾಗಿ ಬೆಂಕಿ ಇತರ ಅಂಗಡಿಗಳಿಗೆ ವ್ಯಾಪಿಸುವುದು ತಪ್ಪಿಹೋಗಿದೆ. ಈ ತಂಡದಲ್ಲಿ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಮೊಹಮ್ಮದ್ ಸಿರಾಜುದ್ದೀನ್, ಪಿ.ಎಂ. ನೌಫಲ್, ಎಸ್ ಸಂತು, ಎಸ್.ಎಂ. ಅಶ್ವಿನ್, ಎಂ. ರಮೇಶ್, ಕೆ. ಅನಂತು, ಹೋಮ್‌ಗಾರ್ಡ್‌ಗಳಾದ ವಿಜಿತ್ ಮತ್ತು ಪ್ರಸಾದ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page