ನ್ಯಾಯವಾದಿ ಮನೆಯಿಂದ ನಗ-ನಗದು ದೋಚಿದ ತಂಡದಲ್ಲಿ  ನಾಲ್ಕು ಮಂದಿ ಭಾಗಿ ಶಂಕೆ: ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಚೈತ್ರಾರ ಮನೆಯಿಂದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ  ಹಣ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆಯ ವಿವಿಧೆಡೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂ ಎಂಬಾತನಿಗೆ  ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಈತನನ್ನು ಹೆಚ್ಚಿನ ತನಿಖೆಗೊಳಪಡಿಸುವ ಅಂಗವಾಗಿ ರಿಮಾಂಡ್‌ನಿಂದ ಕಸ್ಟಡಿಗೆ ತೆಗೆಯಲು ಅರ್ಜಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಈ ಕಳವು ಕೃತ್ಯದಲ್ಲಿ ಇಬ್ರಾಹಿಂ ಸಹಿತ ನಾಲ್ಕು ಮಂದಿ ಭಾಗಿಯಾಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.  …

ಕೃಷಿಕ ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ತೋಟಕ್ಕೆ ತೆರಳಿದ ಕೃಷಿಕ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆಕ್ರಾಜೆ ಕೃಷ್ಣಕೃಪಾ ನಿವಾಸಿ ಎನ್. ಸುಬ್ಬಣ್ಣ ಆಳ್ವ (82) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ ೧ ಗಂಟೆಗೆ ಮನೆ ಬಳಿಯ ತೋಟಕ್ಕೆ ತೆರಳಿದ್ದರು. ಸಂಜೆ 3 ಗಂಟೆ ಯಾದರೂ ಇವರು ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ತೋಟದಲ್ಲಿ ಹುಡುಕಾಡಿದರೂ ಪತ್ತೆಹಚ್ಚಲಾಗಲಿಲ್ಲ. ಇದೇ ವೇಳೆ ಸುಬ್ಬಣ್ಣ ಆಳ್ವರ ಚಪ್ಪಲಿ  ತೋಟದ ಕೆರೆ ಬಳಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಅಗ್ನಿಶಾಮಕದಳಕ್ಕೆ ಮನೆಯವರು ಮಾಹಿತಿ …

ಗಣರಾಜ್ಯೋತ್ಸವದಂದು ಕುಂಬಳೆ ಟೋಲ್ ಪ್ಲಾಜಾಕ್ಕೆ ಮಹಿಳಾ ಮಾರ್ಚ್

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ವಾಹನ ಗಳಿಂದ ಟೋಲ್ ಸಂಗ್ರಹ ಮುಂದುವರಿ ಯುತ್ತಿರುವ ಹಿನ್ನೆಲೆಯಲ್ಲಿ ಟೋಲ್ ಪ್ಲಾಜಾ ಮುಚ್ಚುಗಡೆಗೊಳಿಸುವವರೆಗೆ ಚಳವಳಿ ಮುಂದುವರಿಸಲು ಕ್ರಿಯಾಸಮಿತಿ ನಿರ್ಧರಿಸಿದೆ. ಇದರಂತೆ ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಹಾಗೂ ಒಕ್ಕೂಟಗಳನ್ನು ಸೇರಿಸಿಕೊಂಡು ಟೋಲ್ ಪ್ಲಾಜಾಕ್ಕೆ ಮಹಿಳಾಮಾರ್ಚ್ ನಡೆಸಲಾಗುವುದು.  ಇದರ ಜತೆಗೆ ಕಾನೂನು ಹೋರಾಟವನ್ನು ತೀವ್ರಗೊಳಿಸಲು ಕ್ರಿಯಾ ಸಮಿತಿ ಸಭೆ ನಿರ್ಧರಿಸಿದೆ. ವಿ.ಪಿ. ಅಬ್ದುಲ್ ಖಾದರ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿ.ಎ. ಸುಬೈರ್, ಅಶ್ರಫ್ ಕಾರ್ಳೆ, ಅಸೀಸ್ ಕಳತ್ತೂರು, …

ಹನಿ ಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಹಣ ಎಗರಿಸಲೆತ್ನ: ಯುವತಿ ಸೇರಿ ನಾಲ್ವರ ಸೆರೆ

ಕಾಸರಗೋಡು: ಹನಿಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಹಣ ಎಗರಿಸಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಯುವತಿ ಸೇರಿದಂತೆ ಮೂವರ ವಿರುದ್ಧ  ಚಕ್ಕರಕಲ್ ಪೊಲೀಸರು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ. ಹೊಸದುರ್ಗ ನಿವಾಸಿಗಳಾದ ೧೭ರ ಹರೆಯದ ಯುವತಿ, ಇಬ್ರಾಹಿಂ ಸಜ್ಮಲ್ ಅರ್ಶಾದ್ (28), ಮೈಮೂನಾ (51) ಮತ್ತು ಎ.ಕೆ. ಅಬ್ದುಲ್ ಕಲಾಂ (52) ಬಂಧಿತ ಆರೋಪಿಗಳು. ಮೊಬೈಲ್ ಆಪ್ ಮೂಲಕ ಪರಿಚಯಗೊಂಡ ಚಕ್ಕರಕಲ್ ಕೊಯ್ಯೋಡು ನಿವಾಸಿಯಾಗಿರುವ ಯುವಕನೋರ್ವ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ಆಪ್ ಮೂಲಕ ಪರಿಚಯಗೊಂಡ …

ಕಿರುಕುಳಕ್ಕೊಳಗಾದ 13,17 ವರ್ಷ ಪ್ರಾಯದ ಇಬ್ಬರು ಬಾಲಕಿಯರು ಗರ್ಭಿಣಿಯರು: ಯುವಕ ಬಂಧನ; ಇನ್ನೋರ್ವನಿಗಾಗಿ ಶೋಧ

ಕಾಸರಗೋಡು:  ಪ್ರಾಯಪೂರ್ತಿ ಯಾಗದ ಇಬ್ಬರು ಬಾಲಕಿಯರಿಗೆ ಮದುವೆ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಪೋಕ್ಸೋ ಪ್ರಕಾರ ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ರಾಜಪುರಂ ಹಾಗೂ ನೀಲೇಶ್ವರ ಪೊಲೀಸ್ ಠಾಣೆಗಳಲ್ಲಿ ಈ ಕೇಸು ದಾಖಲಿಸಲಾಗಿದೆ. ರಾಜಪುರಂ  ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಕರ್ನಾಟಕ ನಿವಾಸಿಯಾದ ಸಿದ್ದಾರ್ಥ್ ಎಂಬಾತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಿರುಕುಳ ನೀಡಿರುವುದು ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ  ಪ್ರಕರಣವನ್ನು ಅಲ್ಲಿಗೆ ಹಸ್ತಾಂತರಿಸಲಾಗಿದೆ. ಕರ್ನಾಟಕ ನಿವಾಸಿಯಾದ 13ರ ಬಾಲಕಿ ಕೆಲವು ವರ್ಷಗಳಿಂದ  ಅಂಬಲತ್ತರ ಪೊಲೀಸ್ ಠಾಣೆ …

ವಿಳಿಂಞ್ಞಂ ಬಂದರು ಎರಡನೇ ಹಂತದ ನಿರ್ಮಾಣಕ್ಕೆ ಇಂದು ಚಾಲನೆ

ತಿರುವನಂತಪುರ: ವಿಳಿಂಞ್ಞಂ ಬಂದರಿನ ಎರಡನೇ ಹಂತದ ನಿರ್ಮಾಣವನ್ನು ಇಂದು ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಕೇಂದ್ರ ಶಿಪ್ಪಿಂಗ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಮುಖ್ಯ ಅತಿಥಿಯಾಗಿರುವರು. 10 ಸಾವಿರ  ಕೋಟಿ ರೂಪಾಯಿಗಳ ನಿರ್ಮಾಣ ಚಟುವಟಿಕೆಗಳನ್ನು ಎರಡನೇ ಹಂತದಲ್ಲಿ ನಡೆಸಲಾಗುವುದು. ಇದರೊಂದಿಗೆ ಬಂದರಿನ   ಅಭಿವೃದ್ಧಿ ಪೂರ್ತಿಯಾಗಲಿದೆ. 2028ರಲ್ಲಿ ನಿರ್ಮಾಣ ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ. ರೈಲ್ವೇ ಯಾರ್ಡ್, ಮಲ್ಟಿ ಪರ್ಪಸ್ ಬರ್ತ್, ಲಿಕ್ವಿಡ್ ಟರ್ಮಿನಲ್, ಟ್ಯಾಂಕ್ ಫಾಮ್ ಎಂಬಿವುಗಳು ಕೂಡಾ ದ್ವಿತೀಯ ಹಂತದಲ್ಲಿ ನಡೆಯಲಿದೆ. ವಿಳಿಂಞ್ಞಂನಲ್ಲಿ ಈಗಾಗಲೇ 710 ಹಡಗುಗಳಿಂದಾಗಿ …

ಹೊಯ್ಗೆ ಸಾಗಾಟ: 2 ವಾಹನ ವಶ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಎರಡು ಲೋಡ್ ಹೊಯ್ಗೆಯನ್ನು  ಎಸ್.ಐ ಶ್ರೀಜೇಶ್ ನೇತೃತ್ವದ ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಂದು ಟಿಪ್ಪರ್ ಲಾರಿ ಹಾಗೂ ಓಮ್ನಿ ವ್ಯಾನ್ ವಶಪಡಿಸಿ ಇಬ್ಬರನ್ನು ಬಂಧಿಸಲಾಗಿದೆ. ಓಮ್ನಿ ವ್ಯಾನ್‌ನಲ್ಲಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಆರಿಕ್ಕಾಡಿ ಕೆ.ಪಿ. ರೆಸಾರ್ಟ್ ಬಳಿಯಿಂದ ವಶಪಡಿಸಿಕೊಂಡಿದ್ದು ಅದರಲ್ಲಿದ್ದ ಆರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ (40) ಎಂಬಾತನನ್ನು ಬಂಧಿಸಲಾಗಿದೆ. ಇದರ ಹೊರತು ವಳಯಂಕಡವು ಭಾಗದಿಂದ ಬಂದ್ಯೋಡು ಭಾಗಕ್ಕೆ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಲಾಗಿದೆ. ಲಾರಿಯಲ್ಲಿದ್ದ ಮೀಂಜ ನಿವಾಸಿ …

ಕಾರು ಢಿಕ್ಕಿ ಹೊಡೆದು ಟ್ರಾನ್ಸ್‌ಫಾರ್ಮರ್ ಹಾನಿ: ತಪ್ಪಿದ ದುರಂತ

ಕಾಸರಗೋಡು: ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಟ್ರಾನ್ಸ್ ಫಾರ್ಮರ್ ಹಾನಿಗೀಡಾದ ಘಟನೆ ತಚ್ಚಂಗಾಡ್‌ನಲ್ಲಿ ನಡೆದಿದೆ. ನಿನ್ನೆ ರಾತ್ರಿ 11 ಗಂಟೆಗೆ ಅಪಘಾತವುಂಟಾಗಿದೆ. ತಚ್ಚಂಗಾಡ್ -ಪಾಲಕುನ್ನು ರಸ್ತೆಯಲ್ಲಿ ತಚ್ಚಂಗಾಡ್ ಜಂಕ್ಷನ್‌ನ ಟ್ರಾನ್ಸ್ ಫಾರ್ಮರ್‌ಗೆ ಕಾರು ಢಿಕ್ಕಿ ಹೊಡೆದಿದೆ. ಪಾಲಕುನ್ನು ಭಾಗದಿಂದ ಬಂದ ಕಾರು ರಸ್ತೆಯಿಂದ ೨ ಮೀಟರ್ ದೂರದಲ್ಲಿರುವ ಟ್ರಾನ್ಸ್ ಫಾರ್ಮರ್‌ನ ಕಬ್ಬಿಣದ ಬೇಲಿ ಹಾಗೂ ಕಗ್ಗಲ್ಲಿನ ಕಟ್ಟೆಗೆ ಢಿಕ್ಕಿ ಹೊಡೆದು ನಿಂತಿದೆ. ಚಟ್ಟಂಚಾಲ್ ಭಾಗದ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಯುವಕರು …

ಜೀವ ತೆಗೆಯುವುದನ್ನು ತಡೆದ ಮಕ್ಕಳಿಗೆ ಹಣ್ಣು ನೀಡಿ ಪ್ರತ್ಯುಪಕಾರ: ಪಯಸ್ವಿನಿ ಮಾವಿನ ಮರ ಫಲವಿತ್ತ ಸಂಭ್ರಮ

ಕಾಸರಗೋಡು: ಹೊಸವರ್ಷದ ಹೊಸ ದಿನಗಳಲ್ಲಿ ನಿರೀಕ್ಷೆಯ ಹೊಸ ಕಿರಣಗಳೊಂದಿಗೆ ಮಾವಿನ ಮರ ಹೂಬಿಟ್ಟಿದೆ. ಪ್ರಕೃತಿಪ್ರೇಮಿಗಳು ಮಧ್ಯಪ್ರವೇಶಿಸಿ ಪುನರ್ಜನ್ಮ ನೀಡಿದ ಪಯಸ್ವಿನಿ ಮಾವಿನಮರ ಫಲ ಬಿಟ್ಟಿದೆ. ಮರ ತುಂಬ ಹೂಗಳಿದ್ದು ಕಾಯಿ ಕಂಡು ಬರುತ್ತಿದೆ. ೨೦೨೨ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯಂ ಗವಾಗಿ ಹೊಸ ಬಸ್ ನಿಲ್ದಾಣ ಬಳಿಯ ರಸ್ತೆ ಬದಿಯಿಂದ   ಅಡ್ಕತ್ತಬೈಲು ಸರಕಾರಿ ಯುಪಿ ಶಾಲೆಯ ಮೈದಾನಕ್ಕೆ ಸ್ಥಳಾಂತರಿಸಿದ ಮಾವಿನ ಮರದಲ್ಲಿ ಈ ವರ್ಷ ಪ್ರಥಮವಾಗಿ ಮಾವಿನಕಾಯಿ ಕಂಡು ಬಂದಿದೆ. ಕಾಸರಗೋಡು ನಗರ ಹೃದಯ ದಲ್ಲಿ ಕವಯಿತ್ರಿ ಸುಗತಕುಮಾರಿ …

ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ಅಪೂರ್ಣ: ಮುಷ್ಕರ ಸಮಿತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಇಂದಿನಿಂದ

ಕಾಸರಗೋಡು: ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸಗೈದು 13 ವರ್ಷ ಕಳೆದರೂ  ಮೆಡಿಕಲ್ ಕಾಲೇಜು ಸಾಕ್ಷಾತ್ಕಾರಗೊ ಳ್ಳದಿರುವುದನ್ನು ಪ್ರತಿಭಟಿಸಿ ಇಂದಿನಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಅನಿರ್ದಿಷ್ಟಕಾಲ ಮುಷ್ಕರ ನಡೆಸುವುದಾಗಿ ಮೆಡಿಕಲ್ ಕಾಲೇಜು ಮುಷ್ಕರ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 2013 ನವಂಬರ್ 30ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸಗೈದಿ ದ್ದರು. ಬಳಿಕ 2014-15ರ ವರ್ಷದಲ್ಲಿ ಅಕಾಡೆಮಿಕ್ ಬ್ಲೋಕ್ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಹಣ ಮಂಜೂರು ಮಾಡಲಾಯಿತು. 2016 ಜನವರಿಯಲ್ಲಿ ಅಕಾಡೆಮಿಕ್ ಬ್ಲೋಕ್‌ನ …