ಗಣರಾಜ್ಯೋತ್ಸವದಂದು ಕುಂಬಳೆ ಟೋಲ್ ಪ್ಲಾಜಾಕ್ಕೆ ಮಹಿಳಾ ಮಾರ್ಚ್

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಜಾದಲ್ಲಿ ವಾಹನ ಗಳಿಂದ ಟೋಲ್ ಸಂಗ್ರಹ ಮುಂದುವರಿ ಯುತ್ತಿರುವ ಹಿನ್ನೆಲೆಯಲ್ಲಿ ಟೋಲ್ ಪ್ಲಾಜಾ ಮುಚ್ಚುಗಡೆಗೊಳಿಸುವವರೆಗೆ ಚಳವಳಿ ಮುಂದುವರಿಸಲು ಕ್ರಿಯಾಸಮಿತಿ ನಿರ್ಧರಿಸಿದೆ. ಇದರಂತೆ ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಹಾಗೂ ಒಕ್ಕೂಟಗಳನ್ನು ಸೇರಿಸಿಕೊಂಡು ಟೋಲ್ ಪ್ಲಾಜಾಕ್ಕೆ ಮಹಿಳಾಮಾರ್ಚ್ ನಡೆಸಲಾಗುವುದು.  ಇದರ ಜತೆಗೆ ಕಾನೂನು ಹೋರಾಟವನ್ನು ತೀವ್ರಗೊಳಿಸಲು ಕ್ರಿಯಾ ಸಮಿತಿ ಸಭೆ ನಿರ್ಧರಿಸಿದೆ. ವಿ.ಪಿ. ಅಬ್ದುಲ್ ಖಾದರ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಿ.ಎ. ಸುಬೈರ್, ಅಶ್ರಫ್ ಕಾರ್ಳೆ, ಅಸೀಸ್ ಕಳತ್ತೂರು, ಎ.ಕೆ. ಆರಿಫ್, ಲಕ್ಷ್ಮಣ ಪ್ರಭು, ತಾಜುದ್ದೀನ್ ಮೊಗ್ರಾಲ್, ಅಬ್ದುಲ್ ಲತೀಫ್ ಕುಂಬಳೆ, ಬಿ. ಮುಹಮ್ಮದಲಿ, ಫಾರೂಕ್ ಶಿರಿಯ, ಕೆ.ವಿ. ಯೂಸುಫ್, ಸತ್ತಾರ್ ಆರಿಕ್ಕಾಡಿ, ಮುಹಮ್ಮದ್ ಕುಂಞಿ ಮೊದಲಾದವರು ಭಾಗವಹಿಸಿದರು.

RELATED NEWS

You cannot copy contents of this page