25 ವರ್ಷಗಳ ಹಿಂದೆ ವಾಹನ ಅಪಘಾತ: ಕಾಲುಗಳ ಬಲ ಕಳೆದುಕೊಂಡು ಹಾಸಿಗೆ ಹಿಡಿದ ಮನೆಯೊಡೆಯ; ಚಿಕಿತ್ಸೆಗೆ ಬೇಕು ಭಾರೀ ಮೊತ್ತ; ದಾನಿಗಳ ಸಹಾಯ ನಿರೀಕ್ಷೆಯಲ್ಲಿ ಕುಟುಂಬ

ಪೆರ್ಲ: 25 ವರ್ಷಗಳ ಹಿಂದೆ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಲುಗಳಿಗೆ ಉಂಟಾದ ಏಟು ವ್ಯಕ್ತಿಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಪರಿಣಾಮ ಒಂದು ಕಾಲು ಬಲಹೀನಗೊಂಡು ನಡೆದಾಡಲು ಕಷ್ಟಪಡುತ್ತಿದ್ದು ಇದರಿಂದ ಕುಟುಂಬದ ಜೀವನ ಸಂಕಷ್ಟ ಮಯವಾಗಿ ಮಾರ್ಪಾಡುಗೊಂಡಿದೆ. ಪೆರ್ಲ ನಿವಾಸಿಯಾದ ಸುಬ್ರಹ್ಮಣ್ಯ ಭಟ್ (50) ಎಂಬವರು ಪ್ರಸ್ತುತ ನಡೆದಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರು ೨೫ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆಟೋರಿಕ್ಷಾ ಚಾಲಕನಾಗಿ ದುಡಿ ಯುತ್ತಿದ್ದರು. ಈ ವೇಳೆ ಮಡಂತ್ಯಾರು ಎಂಬಲ್ಲಿ ಆಟೋರಿಕ್ಷಾ ಅಪಘಾತ …

ಬೇಕಲದಲ್ಲಿ ನಾಳೆ ಸಮನ್ವಯ ಗಡಿನಾಡ ಜನಪದ ಉತ್ಸವ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಬೇಕಲ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಇದರ ಜಂಟಿ ಆಶ್ರಯದಲ್ಲಿ ಸಮನ್ವಯ ಗಡಿನಾಡ ಜಾನಪದ ಉತ್ಸವ ನಾಳೆ ಬೆಳಿಗ್ಗೆ 9ರಿಂದ ರಾತ್ರಿ 10 ಗಂಟೆವರೆಗೆ ಅರವತ್ ಎನ್‌ಕೆಪಿಎಸ್‌ಕೆ ಟ್ರಸ್ಟ್ ಆಂಪಿಥಿಯೇಟರ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ ೯ರಿಂದ ಮುದಿಯಕಲ್‌ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ರಿಂದ ಚೆಂಡೆಮೇಳ, 10ರಿಂದ …

ರಾಜ್ಯಸರಕಾರದ ಕೊನೆಯ ಮುಂಗಡಪತ್ರವೂ ನಿರಾಶಾಜನಕ- ಎಂ.ಎಲ್. ಅಶ್ವಿನಿ

ಕಾಸರಗೋಡು: ಜಿಲ್ಲೆಯ ಅಭಿವೃದ್ಧಿ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸೂಕ್ತವಾದ ಯೋಜನೆಗಳು ಹಾಗೂ ಮೊತ್ತ ಮೀಸಲಿಡದ ಪಿಣರಾಯಿ ವಿಜಯನ್‌ರ ದ್ವಿತೀಯ ಹಂತದ ಸರಕಾರದ ಕೊನೆಯ ಮುಂಗಡಪತ್ರ ನಿರಾಸೆ ಮೂಡಿಸಿರುವುದಾಗಿಯೂ ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣಿಸಿರುವುದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಗಿರುವ ರಾಜ್ಯ ಸರಕಾರದ ಬಜೆಟ್ ಪಾಲು ಜಿಲ್ಲೆಯ ಆರೋಗ್ಯವಲಯ ಹಾಗೂ ಶಿಕ್ಷಣವಲಯದಲ್ಲಿರುವ ಹಿಂದುಳಿದಾವಸ್ಥೆಯನ್ನು ಪರಿಹರಿಸಲು ಸಾಕಾಗುವಂತದ್ದಲ್ಲ. ಕಾಸರಗೋಡು ಮೆಡಿಕಲ್ ಕಾಲೇಜಿನ ಜೊತೆಗೆ ರಾಜ್ಯದ ಇತರ ಮೂರು ಮೆಡಿಕಲ್ ಕಾಲೇಜುಗಳಿಗೂ ಸೇರಿ ಒಟ್ಟು 53 ಕೋಟಿ ರೂ. ಮೀಸಲಿಡಲಾಗಿದೆ. 40 …

ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಸ್ಮೃತಿ ಆಚರಣೆ

ಪೈವಳಿಕೆ: ಮಹಾತ್ಮಾ ಗಾಂಧಿ ಯವರ ನೆನಪು ಹಾಗೂ ಅವರ ತತ್ವ ಆದರ್ಶಗಳು ವರ್ತಮಾನ ಕಾಲದಲ್ಲಿ ಅತ್ಯಂತಾಪೇಕ್ಷಿತವಾಗಿದ್ದು ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಕೆಲಸ ನಡೆಯಬೇಕು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ನುಡಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬ್ಲೋಕ್ ಕಾಂಗ್ರೆಸ್ ಪದಾಧಿಕಾರಿಗಳಾದ ನಾರಾಯಣ ಏದಾರ್, ಸಚ್ಚಿದಾನಂದ ರೈ, ಮಂಡಲ ಕಾಂಗ್ರೆಸ್ ನೇತಾರರಾದ ಶಾಜಿ, ಪೌಲ್ ರೋಡ್ರಿಗಸ್, ಅಸೀಸ್ ಕಟ್ಟೆ, …