ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಸ್ಮೃತಿ ಆಚರಣೆ

ಪೈವಳಿಕೆ: ಮಹಾತ್ಮಾ ಗಾಂಧಿ ಯವರ ನೆನಪು ಹಾಗೂ ಅವರ ತತ್ವ ಆದರ್ಶಗಳು ವರ್ತಮಾನ ಕಾಲದಲ್ಲಿ ಅತ್ಯಂತಾಪೇಕ್ಷಿತವಾಗಿದ್ದು ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಕೆಲಸ ನಡೆಯಬೇಕು ಎಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ನುಡಿದರು. ಪೈವಳಿಕೆ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಾಂಧೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬ್ಲೋಕ್ ಕಾಂಗ್ರೆಸ್ ಪದಾಧಿಕಾರಿಗಳಾದ ನಾರಾಯಣ ಏದಾರ್, ಸಚ್ಚಿದಾನಂದ ರೈ, ಮಂಡಲ ಕಾಂಗ್ರೆಸ್ ನೇತಾರರಾದ ಶಾಜಿ, ಪೌಲ್ ರೋಡ್ರಿಗಸ್, ಅಸೀಸ್ ಕಟ್ಟೆ, ಅಬ್ಬುಲ್ ರಸಾಕ್, ಎಡ್ವರ್ಡ್, ಬಾತಿಶ್ ಪಾಕ ಉಪಸ್ಥಿತರಿದ್ದರು. ಗಂಗಾಧರ ನಾಯ್ಕ್ ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

RELATED NEWS

You cannot copy contents of this page