ಬಿಸಿಲಲ್ಲಿ ಬೆವರಿಳಿಸಿ ಬಸ್‌ಗಾಗಿ ಕಾಯಬೇಕಾಗುತ್ತಿದೆ ಹೊಸಂಗಡಿಯಲ್ಲಿ ತಂಗುದಾಣವಿಲ್ಲದೆ ಸಮಸ್ಯೆ

ಮಂಜೇಶ್ವರ: ಕಾಸರಗೋಡಿ ನಿಂದ ಮಂಗಳೂರು ಕಡೆಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಹೊಸಂಗಡಿ ಯಲ್ಲಿ ಬಸ್ ತಂಗುದಾಣ ನಿರ್ಮಿಸದೇ ಇರುವುದರಿಂದ ಪ್ರಯಾಣಿಕರು ಬಿಸಿ ಲಲ್ಲೇ ಬಸ್‌ಗೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ ಹೊಸಂಗಡಿ ಪೇಟೆಯಲ್ಲಿ ಮಂ ಗಳೂರು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಇನ್ನೂ ಬಸ್ ತಂಗುದಾಣ ನಿರ್ಮಿಸದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆನೆಕಲ್ಲು, ಮೀಯಪದವು, ಬಂಗ್ರಮAಜೇಶ್ವರ ಮೊದಲಾದ ಪ್ರದೇಶಗಳಿಂದ ದಿನನಿತ್ಯ ನೂರಾರು ಮಂದಿ ಮಂಗಳೂರಿಗೆ ತೆರ ಳಲು ಬಸ್‌ಗಾಗಿ …

ನಿವೃತ್ತ ಅಧ್ಯಾಪಕ ನಿಧನ

ನೀರ್ಚಾಲು: ಮಾನ್ಯ ಕಾರ್ಮಾರು ನಿವಾಸಿ ನಿವೃತ್ತ ಅಧ್ಯಾಪಕ, ಕೃಷಿಕ ಕಾರಿಂಜ ವೆಂಕಪ್ಪ ಶೆಟ್ಟಿ (94) ನಿಧನ ಹೊಂದಿದರು. ಎಡನೀರು, ಕಡಂಬಳ ಸಹಿತ ಹಲವಾರು ಶಾಲೆಗಳಲ್ಲಿ ಅಧ್ಯಾಪಕನಾಗಿದ್ದರು. ಇವರ ಪತ್ನಿ ರತ್ನಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ವಿಶಾಲಾಕ್ಷಿ, ವಿನುತ, ವಿನೋದಿನಿ, ಅಳಿಯಂದಿರಾದ ಮಹಾಬಲ, ಪ್ರಸನ್ನ, ಸುಧೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆಟೋರಿಕ್ಷಾ ಮಜ್ದೂರ್ ಸಂಘ ಚೌಕಿ ಯೂನಿಟ್ ಸಮ್ಮೇಳನ

ಕಾಸರಗೋಡು: ಆಟೋ ರಿಕ್ಷಾ ಮಜ್ದೂರ್ ಸಂಘ ಬಿಎಂಎಸ್ ಚೌಕಿ ಘಟಕ ಸಮ್ಮೇಳನ ಕಾವುಗೋಳಿ ಶ್ರೀ ಶಿವದೇವಸ್ಥಾನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಮಧೂರು ಮಂಡಲ ಅಧ್ಯಕ್ಷ ವಸಂತ ನಾಯ್ಕ್ ಕೊರುವೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಗುರುದಾಸ್ ಮಧೂರು ಶುಭ ಕೋರಿದರು. ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಪ್ರಸ್ತಾವಿಸಿದರು. ಮಧೂರು ಪಂಚಾಯತ್ ೨೪ನೇ ವಾರ್ಡ್‌ನಿಂದ ಪಂ. ಸದಸ್ಯನಾಗಿ ಆಯ್ಕೆಯಾದ ಆಟೋಚಾಲಕ ನವನೀತ್ ರೈ ಕಜೆ ಅವರನ್ನು …

ಸಮಸ್ತದ 100ನೇ ವಾರ್ಷಿಕಾಚರಣೆ: ನಾಳೆ ಜಿಲ್ಲೆಯಲ್ಲಿ ಸಾರಿಗೆ ಸಂಚಾರದಲ್ಲಿ ವ್ಯತ್ಯಯ

ಕಾಸರಗೋಡು: ಸಮಸ್ತದ 100ನೇ ವಾರ್ಷಿಕಾಚರಣೆ ಯಂಗವಾಗಿ ನಾಳೆ ಕಾಸರಗೋಡು ಜಿಲ್ಲೆಯಲ್ಲಿ ಸಾರಿಗೆ ವ್ಯತ್ಯಯ ಏರ್ಪಡಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಕಣ್ಣೂರು ಭಾಗದಿಂದ ಕಾಸರಗೋಡು ಭಾಗಕ್ಕೆ ಆಗಮಿಸುವ ಹೆವಿ ವಾಹನಗಳು ತಳಿಪರಂಬ ಮೂಲಕ ಮಲೆನಾಡು ಹೆದ್ದಾರಿಯಲ್ಲಾಗಿ ಸಾಗಬೇಕಾಗಿದ್ದು, ಮಂಗಳೂರಿನಿಂದ ಬರುವ ವಾಹನಗಳು ಕುಂಬಳೆ ಭಾಗದಿಂದ ಮಲೆನಾಡು ಹೆದ್ದಾರಿ ಮೂಲಕ ಸಾಗಬೇಕಾಗಿದೆ. ಕಾರ್ಯಕ್ರಮಕ್ಕೆ ತೆರಳುವ ವಾಹನಗಳು ಪೆರಿಯ, ಪೊಯಿನಾಚಿ ಎಂಬೆಡೆಗಳಿಂದ ಸರ್ವೀಸ್ ರಸ್ತೆ ಮೂಲಕ ಬಂದು ಜನರನ್ನು ಇಳಿಸಿ ಪಾರ್ಕಿಂಗ್ ಏರಿಯಾಕ್ಕೆ ತೆರಳಬೇಕಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವ್ಯಕ್ತಿಗಳು ಸರ್ವೀಸ್ …