ಆಟೋರಿಕ್ಷಾ ಮಜ್ದೂರ್ ಸಂಘ ಚೌಕಿ ಯೂನಿಟ್ ಸಮ್ಮೇಳನ

ಕಾಸರಗೋಡು: ಆಟೋ ರಿಕ್ಷಾ ಮಜ್ದೂರ್ ಸಂಘ ಬಿಎಂಎಸ್ ಚೌಕಿ ಘಟಕ ಸಮ್ಮೇಳನ ಕಾವುಗೋಳಿ ಶ್ರೀ ಶಿವದೇವಸ್ಥಾನದಲ್ಲಿ ನಡೆಯಿತು. ಯೂನಿಟ್ ಅಧ್ಯಕ್ಷ ದಯಾನಂದ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಮಧೂರು ಮಂಡಲ ಅಧ್ಯಕ್ಷ ವಸಂತ ನಾಯ್ಕ್ ಕೊರುವೈಲು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಗುರುದಾಸ್ ಮಧೂರು ಶುಭ ಕೋರಿದರು. ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಪ್ರಸ್ತಾವಿಸಿದರು. ಮಧೂರು ಪಂಚಾಯತ್ ೨೪ನೇ ವಾರ್ಡ್‌ನಿಂದ ಪಂ. ಸದಸ್ಯನಾಗಿ ಆಯ್ಕೆಯಾದ ಆಟೋಚಾಲಕ ನವನೀತ್ ರೈ ಕಜೆ ಅವರನ್ನು ಅಭಿನಂದಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಘಟಕ ಅಧ್ಯಕ್ಷರಾಗಿ ದಯಾನಂದ ಕಡಪ್ಪುರ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ರಾಮ್‌ನಗರ, ಕೋಶಾಧಿಕಾರಿಯಾಗಿ ಉದಯ ಕಂಬಾರ್ ಆಯ್ಕೆಯಾದರು. ಉದಯ ಕುಮಾರ್ ಸಿ.ಎಚ್. ಸ್ವಾಗತಿಸಿ, ಯಧುಕುಲೇಶ್ ವಂದಿಸಿದರು. ಚೌಕಿಯಿಂದ ಕಂಬಾರು ಭಾಗಕ್ಕೆ ತೆರಳುವ ರಸ್ತೆಯಲ್ಲಿ ಹಂಪ್‌ಗಳು ಅಲ್ಲಲ್ಲಿದ್ದು, ಆದರೆ ಯಾವುದೇ ಸಿಗ್ನಲ್‌ಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಂಪ್ಸ್ ಇರುವ ಬಗ್ಗೆ ತಿಳಿಯುವಂತೆ ಮಾಡುವ ಕಾರ್ಯ ನಡೆಸಬೇಕೆಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಮನವಿ ನೀಡಲು ತೀರ್ಮಾನಿಸಲಾಯಿತು

RELATED NEWS

You cannot copy contents of this page