ಬಿಸಿಲಲ್ಲಿ ಬೆವರಿಳಿಸಿ ಬಸ್‌ಗಾಗಿ ಕಾಯಬೇಕಾಗುತ್ತಿದೆ ಹೊಸಂಗಡಿಯಲ್ಲಿ ತಂಗುದಾಣವಿಲ್ಲದೆ ಸಮಸ್ಯೆ

ಮಂಜೇಶ್ವರ: ಕಾಸರಗೋಡಿ ನಿಂದ ಮಂಗಳೂರು ಕಡೆಗೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಹೊಸಂಗಡಿ ಯಲ್ಲಿ ಬಸ್ ತಂಗುದಾಣ ನಿರ್ಮಿಸದೇ ಇರುವುದರಿಂದ ಪ್ರಯಾಣಿಕರು ಬಿಸಿ ಲಲ್ಲೇ ಬಸ್‌ಗೆ ಕಾಯುವ ಪರಿಸ್ಥಿತಿ ಉಂಟಾಗಿದೆ. ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ ಹೊಸಂಗಡಿ ಪೇಟೆಯಲ್ಲಿ ಮಂ ಗಳೂರು ಭಾಗಕ್ಕೆ ತೆರಳುವ ಸರ್ವೀಸ್ ರಸ್ತೆಯಲ್ಲಿ ಇನ್ನೂ ಬಸ್ ತಂಗುದಾಣ ನಿರ್ಮಿಸದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆನೆಕಲ್ಲು, ಮೀಯಪದವು, ಬಂಗ್ರಮAಜೇಶ್ವರ ಮೊದಲಾದ ಪ್ರದೇಶಗಳಿಂದ ದಿನನಿತ್ಯ ನೂರಾರು ಮಂದಿ ಮಂಗಳೂರಿಗೆ ತೆರ ಳಲು ಬಸ್‌ಗಾಗಿ ಹೊಸಂಗಡಿ ಪೇ ಟೆಗೆ ತಲುಪುತ್ತಿದ್ದಾರೆ. ಕೆಲವರು ಬಿಸಿ ಲಲ್ಲಿ, ಇನ್ನು ಕೆಲವರು ಅಂಗಡಿಗಳು ಹಾಗೂ ಮರದ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಪರಿಸರದಲ್ಲಿ ಸ್ಥಳವಕಾಶವಿದ್ದರೂ ಬಸ್ ತಂಗುದಾಣ ನಿರ್ಮಿಸದಿರಲು ಕಾರಣನೆೆಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಎಲ್ಲಾ ಕಡೆಗಳ ಸರ್ವೀಸ್ ರಸ್ತೆಯ ಇಕ್ಕೆಡೆಗಳಲ್ಲಿ ತಂಗುದಾಣವಿದ್ದರೂ ಇಲ್ಲಿ ನಿರ್ಮಿಸದಿರುವುದು ಸಾರ್ವಜನಿಕರಲ್ಲಿ ಅಸಮÁಧಾನವನ್ನುಂಟು ಮಾಡಿದೆ. ಸಂಬAಧ ಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ಕೂಡಲÉÃ ತಂಗುದಾಣ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page