ಅನಾಥ ವೃದ್ಧೆಗೆ ನೆರಳಾದ ಪಿಂಕ್ ಪೊಲೀಸ್

ಕಾಸರಗೋಡು: ಅನಾಥರಂತಿದ್ದ ವೃದ್ದೆಗೆ ಕಾಸರಗೋಡು ಪಿಂಕ್ ಪೊಲೀಸರು ಆಶ್ರಯ ನೀಡಿದ್ದಾರೆ. ಪಾರೆಕಟ್ಟೆ ಭಾಗದಲ್ಲಿ ಸ್ಥಳೀಯರ ನೆರವಿನೊಂದಿಗೆ ಜೀವಿಸುತ್ತಿದ್ದ ೭೫ ವರ್ಷದ ವಾರಿಜ ಎಂಬ ವೃದ್ಧೆಯನ್ನು ಪಿಂಕ್ ಪೊಲೀಸರು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ವಾರಿಜರ ದಯನೀಯ ಸ್ಥಿತಿ ಗಮನಕ್ಕೆ ಬಂದ ಪಿಂಕ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಅವರಿಗೆ ಅಗತ್ಯದ ವೈದ್ಯ ಸಹಾಯ ಲಭ್ಯಗೊಳಿಸಿದ್ದಾರೆ. ಬಳಿಕ ಎಎಸ್‌ಐ ಶಾರದ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೀತ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರೇಷ್ಮ, ರಮ್ಯ ಎಂಬಿವರು ಅಧಿಕಾರಿಗಳೊಂದಿಗೆ ಮಾತನಾಡಿ ವಾರಿಜರನ್ನು ಪರವನಡ್ಕ ಸರಕಾರಿ ವೃದ್ಧ ಸದನಕ್ಕೆ ತಲುಪಿಸಿದ್ದಾರೆ. ಪಿಂಕ್ ಪೊಲೀಸರ ಈ ಮಾನವೀಯ ನಿಲುವಿಗೆ ಶ್ಲಾಘನೆ ವ್ಯಕ್ತವಾಗಿದೆ.

RELATED NEWS

You cannot copy contents of this page