ಕಾರಿನಲ್ಲಿ ಸಾಗಿಸುತ್ತಿದ್ದ 29 ಲಕ್ಷ ರೂ., 97 ಗ್ರಾಂ ಚಿನ್ನ ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ನಗರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 29 ಲಕ್ಷ ರೂಪಾಯಿ ಹಾಗೂ 97 ಗ್ರಾಂ ಚಿನ್ನ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮೂಲತಃ ಮಹಾರಾಷ್ಟ್ರ ನಿವಾಸಿಗಳಾದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರ ಹೇಳಿಕೆಗಳನ್ನು ದಾಖಲಿಸಿ ಕೊಂಡಿದ್ದಾರೆ. ಕಾಸರಗೋಡು ಪೊಲೀಸ್ ಠಾಣೆ ಪರಿಸರದಲ್ಲಿ ನಿನ್ನೆ ಸಂಜೆ ಪೊಲೀಸ್ ಕಾರ್ಯಾಚರಣೆ ನಡೆದಿದೆ. ನಗ-ನಗದು ಸಾಗಿಸುತ್ತಿದ್ದ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪೊಲೀಸರು ನಿನ್ನೆ ಸಂಜೆ ಠಾಣೆ ಪರಿಸರದಲ್ಲಿ ವಾಹನ ತಪಾಸಣೆಯಲ್ಲಿ …

ಕನ್ನಡ ಹೋರಾಟಗಾರ ಕೆ.ಎಂ. ಗೋಪಾಲಕೃಷ್ಣ ಭಟ್ ನಿಧನ

ಮುಳ್ಳೇರಿಯ: ಕಾರಡ್ಕ ಸಮೀಪದ ಪೊನ್ನಂಪಲ ನಿವಾಸಿ ಕೆ.ಎಂ. ಗೋಪಾಲಕೃಷ್ಣ ಭಟ್ (84) ನಿಧನ ಹೊಂದಿದರು. ಕಳೆದ ಕೆಲವು ಸಮಯದಿಂದ ಅಸೌಖ್ಯ ತಗಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ, ಕನ್ನಡ ಹೋರಾಟಗಾರ, ಕನ್ನಡ ಅಂಕಣ ಬರಹಗಾರರಾಗಿ ಗುರುತಿಸಿ ಕೊಂಡಿದ್ದರು.  ಕೃಷಿ, ಶಿಕ್ಷಣ, ಸಾಂ ಸ್ಕೃತಿಕ, ಧಾರ್ಮಿಕ ವಲಯಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು. ಇವರ ಪತ್ನಿ ಭಾಗ್ಯಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪುತ್ರನಾದ ಕವಿ, …

ಕರ್ನಾಟಕ ಮದ್ಯ ಕೈವಶವಿರಿಸಿದ ವ್ಯಕ್ತಿ ಬಂಧನ

ಕುಂಬಳೆ: ಕರ್ನಾಟಕದಲ್ಲಿ ಮಾತ್ರವೇ ಮಾರಾಟಗೈಯ್ಯ ಬಹುದಾದ ವಿದೇಶಿ ಮದ್ಯವನ್ನು ಕೈವಶವಿರಿಸಿಕೊಂಡಿದ್ದ ಓರ್ವನನ್ನು ಕುಂಬಳೆ ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಕೊಯಿಪ್ಪಾಡಿ ವಿಲ್ಲೇಜ್‌ನ ನಾಯ್ಕಾಪು ನಾರಾಯಣಮಂಗಲದ ಅಕ್ಷಿತ್ ಕೆ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ ೫.೪ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಲಾಗಿದೆ. ಕುಂಬಳೆ ಅಬಕಾರಿ ರೇಂಜ್ ಪ್ರಿವೆಂಟೀವ್ ಆಫೀಸರ್ ಜಿಜಿನ್ ಎಂ.ವಿ ನೇತೃತ್ವದಲ್ಲಿ ನಿನ್ನೆ ಮಧ್ಯಾಹ್ನ 12.50ರ ವೇಳೆ ಕುಂಬಳೆ ಪೇಟೆಯಲ್ಲಿ  ಗಸ್ತು ನಡೆಸುತ್ತಿದ್ದಾಗ ಬದಿಯಡ್ಕ ರಸ್ತೆಯಲ್ಲಿರುವ  ಹೋಟೆಲ್‌ವೊಂದರ ಮುಂಭಾಗ ನಿಂತಿದ್ದ ಅಕ್ಷಿತ್‌ನನ್ನು ತಪಾಸಣೆ ನಡೆಸಿದಾಗ ಮದ್ಯ …

ಕೋಳಿ ಅಂಕ: ಏಳು ಕೋಳಿಗಳ ಸಹಿತ ಏಳು ಮಂದಿ ಸೆರೆ

ಬದಿಯಡ್ಕ: ಬೇಳದಲ್ಲಿ ಕೋಳಿಅಂಕ ನಡೆಸುತ್ತಿದ್ದ ಕೇಂದ್ರಕ್ಕೆ ಬದಿಯಡ್ಕ ಪೊಲೀಸರು ನಿನ್ನೆ ದಾಳಿ ನಡೆಸಿ ಕೋಳಿಅಂಕದಲ್ಲಿ ನಿರತರಾದ ಆರೋಪದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಮಾತ್ರವಲ್ಲ ಕೋಳಿ ಅಂಕಕ್ಕಾಗಿ ಉಪಯೋಗಿಸುತ್ತಿದ್ದ ಏಳು ಕೋಳಿಗಳು, 3400 ರೂ. ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಳ ಮತ್ತು ಪರಿಸರ ಪ್ರದೇಶದವರಾದ ಅನಿಲ್  ಕುಮಾರ್ ಬಿ (೨೮), ಉದಯ ಕುಮಾರ್ ಡಿ (40), ನಾರಾಯಣ (42), ರವಿರಾಜ್ ಪಿ (37), ನಿತೀಶ್ ಕುಮಾರ್ ಬಿ (26), ನಾರಾಯಣ ರೈ (42) ಮತ್ತು ಅಕ್ಷಯ್ ಬಿ …

ಭಾರತದಲ್ಲಿ ಸರಣಿ ದಾಳಿಗೆ ಪಾಕ್ ಉಗ್ರಗಾಮಿ ಸಂಘಟನೆ ಸ್ಕೆಚ್: ದೇಶಾದ್ಯಂತ ಜಾಗ್ರತಾ ನಿರ್ದೇಶ

ಹೊಸದಿಲ್ಲಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ  ತೋಯ್ಬಾ ಬಾಂಗ್ಲಾದೇಶ ದಲ್ಲಿ ತನ್ನ ಹೊಸ ನೆಲೆಯನ್ನು ಸ್ಥಾಪಿಸಿದ್ದು ಆ ಮೂಲಕ  ಅದನ್ನು ಕೇಂದ್ರವನ್ನಾಗಿ ಸಿಕೊಂಡು  ಭಾರತದ ಹಲವೆಡೆಗಳಲ್ಲಿ ಸರಣಿ  ಭಯೋತ್ಪಾದಕ ದಾಳಿ ನಡೆಸಲು ಹೊಸ ಯೋಜನೆಗೆ ರೂಪು ನೀಡಿದ ಬಗ್ಗೆ ಕೇಂದ್ರ ಗುಪ್ತಚರ ವಿಭಾಗಕ್ಕೆ ಮಾಹಿತಿ ಲಭಿಸಿದೆ.  ಈ ಹಿನ್ನೆಲೆಯಲ್ಲಿ ದೇಶದಾದ್ಯಂತ  ಕೇಂದ್ರ ಗೃಹ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ. ಭಯೋತ್ಪಾದನಾ ಸಂಘಟನೆಯಾದ ಲಷ್ಕರ್ ಎ  ತೋಯ್ಬಾ ಭಾರತದ ಹಲವೆಡೆಗಳಲ್ಲಿ ತನ್ನ ಸ್ಲೀಪಿಂಗ್ ಸೆಲ್‌ಗಳನ್ನು ಆರಂಭಿಸಿ ಆ …

ಮೆದುಳು ಆಘಾತ : ಬೇಕರಿ ಮಾಲಕ ನಿಧನ

ಕುಂಬಳೆ: ಮೆದುಳು ಆಘಾತ ಕ್ಕೊಳಗಾಗಿ ಬೇಕರಿ ಮಾಲಕ ಮೃತಪಟ್ಟ ಘಟನೆ ನಡೆದಿದೆ. ಮೊಗ್ರಾಲ್ ನಡುಪಳ್ಳದ ಅಬ್ದುಲ್ ಅಸೀಸ್ (44) ಮೃತಪಟ್ಟ ದುರ್ದೈವಿ. ಇವರು ಮೊಗ್ರಾಲ್ ಪೇಟೆಯಲ್ಲಿರುವ ಜಾಸ್ ಬೇಕರಿಯ ಮಾಲಕನಾಗಿದ್ದರು. ನಿನ್ನೆ ಮುಂಜಾನೆ ಮಸೀದಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಇವರು ಕುಸಿದು ಬಿದ್ದಿದ್ದರು. ಕೂಡಲೇ ಮಂ ಗಳೂರಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅಲ್ಲಿ ನಡೆಸಿದ ತಪಾಸಣೆ ಯಲ್ಲಿ ಮೆದುಳು ಆಘಾತಗೊಂಡ ಬಗ್ಗೆ ತಿಳಿದುಬಂದಿದೆ. ಇದರಿಂದ ವೆಂಟಿಲೇಟರ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ರಾತ್ರಿ 7 ಗಂಟೆಗೆ ನಿಧನ ಸಂಭವಿಸಿದೆ. …

ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಇಲ್ಲಿನ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಮಾರ್ಚ್ 31ರಿಂದ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ, ಉತ್ಸವ ಸಮಿತಿ ರೂಪೀಕರಣ ಕ್ಷೇತ್ರ ಸನ್ನಿಧಿಯಲ್ಲಿ ಜರಗಿತು. ನಗರಸಭೆಯ 4ನೇ ವಾರ್ಡ್ ಸದಸ್ಯ ಗುರುಪ್ರಸಾದ್ 5ನೇ ವಾರ್ಡ್ ಸದಸ್ಯ ಹರೀಶ್ ಕೆ.ಆರ್. ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಉದ್ಘಾಟಿಸಿದರು. ಉತ್ಸವ ಸಮಿತಿ ರೂಪೀಕರಿಸಲಾಯಿತು. ರಕ್ಷಾಧಿಕಾರಿಯಾಗಿ ವಿಷ್ಣುಪ್ರಕಾಶ್ ತಂತ್ರಿ, ಗೌರವಾಧ್ಯಕ್ಷರಾಗಿ ಭಾಸ್ಕರ ಸುವರ್ಣ ಗರಡಿಮನೆ, ನೂತನ ಅಧ್ಯಕ್ಷರಾಗಿ ಎ. …

ಅನಧಿಕೃತ ನಿರ್ಮಾಣ: ಕಾಸರಗೋಡು ನಗರಸಭಾ ಅಧ್ಯಕ್ಷೆ ಕಾನೂನು ವಿರುದ್ಧರೊಂದಿಗೆ -ಬಿಜೆಪಿ ಆರೋಪ

ಕಾಸರಗೋಡು: ಕಾಸರಗೋಡು ನಗರಸಭೆ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ಕಾನೂನು ವಿರುದ್ಧ ನಿಲುವನ್ನು ತನ್ನ ಜಾಯಮಾನ ಮಾಡಿಕೊಂಡಿರುವುದಾಗಿ ಬಿಜೆಪಿ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಆರೋಪಿಸಿದರು. ನಗರಸಭಾ ಅಧ್ಯಕ್ಷೆಯ ಈ ರೀತಿಯ ನಿಲುವುಗಳನ್ನು ಪ್ರತಿಭಟಿಸಿ ಬಿಜೆಪಿ ಸದಸ್ಯರು ಸಭೆಯಲ್ಲಿ ಎದ್ದು ನಿಂತು ಪ್ರತಿಭಟಿಸಿದರು. ಕಾಸರಗೋಡು ಹೊಸ ಬಸ್ ನಿಲ್ದಾಣದ ನಗರಸಭಾ ಕಟ್ಟಡ ಬಾಡಿಗೆಗೆ ಪಡೆದ ರಿಶಾದ್ ಕೆ.ಎಂ. ಎಂಬ ವ್ಯಕ್ತಿ ನಗರಸಭೆಯ ಅರಿವು, ಅನುವಾದ ಇಲ್ಲದೆ ಕಟ್ಟಡದ ಮುಂಭಾಗದಲ್ಲಿ ನಡೆಸಿದ ಅನಧಿಕೃತ ನಿರ್ಮಾಣವನ್ನು ಮುರಿದು ತೆಗೆಯಲಿರುವ ನಗರಸಭೆ ಕಾರ್ಯದರ್ಶಿಯ …

ವಿಧಾನಸಭಾ ಚುನಾವಣೆ: ಜಿಲ್ಲೆಯ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ  ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಂತೆ  ಮಂಜೇಶ್ವರ ಠಾಣೆಯ ನೂತನ ಇನ್‌ಸ್ಪೆಕ್ಟರ್ ಆಗಿ ಜಿಜೀಶ್‌ರನ್ನು ನೇಮಿಸಲಾಗಿದೆ. ಇಲ್ಲಿಂದ  ಪಿ.ಅಜಿತ್ ಕುಮಾರ್‌ರನ್ನು ತಳಿಪರಂಬಕ್ಕೆ ವರ್ಗಾಯಿಸ ಲಾಗಿದೆ.  ಕುಂಬಳೆ ಕರಾವಳಿ ಠಾಣೆಯಿಂದ ಕೆ.ಆರ್. ಅನೂಪ್‌ರನ್ನು ಬದಿಯಡ್ಕಕ್ಕೆ, ಕಲ್ಲಿಕೋಟೆಯಿಂದ ಬೈಜು ಕೆ ಜೋಸ್‌ರನ್ನು ಕುಂಬಳೆಗೆ  ವರ್ಗಾಯಿಸಲಾಗಿದೆ.  ಶಿವನ್ ಚೋಡತ್ತ್ತ್ ಅವರನ್ನು ಹೊಸದುರ್ಗಕ್ಕೆ, ಎಂ.ಪಿ. ವಿನೀಶ್‌ರನ್ನು ವಿದ್ಯಾನಗರಕ್ಕೆ  , ಕೆ.ಪಿ. ವಿನೋದ್ ರನ್ನು ಬೇಡಗಕ್ಕೆ ಸಿ. ಶಾಜುರನ್ನು ಅಂಬಲತ್ತರಕ್ಕೆ, ಉಮೇಶ್‌ರನ್ನು ಚಿಟ್ಟಾರಿಕ್ಕಲ್‌ಗೆ, ಎಂ.ವಿ. ಶಿಜುರನ್ನು …

ಆದ್ಯಾತ್ಮಿಕತೆಯೊಂದಿಗೆ ಭೌತಿಕ ಶಕ್ತಿ ಸೇರಿದಾಗ ಶ್ರೇಯಸ್ಸು ಸಾಧ್ಯ- ಪೆರ್ಲ ಹಿಂದೂ ಸಂಗಮದಲ್ಲಿ ಸಾಧ್ವಿಶ್ರೀ

ಪೆರ್ಲ: ಹಿಂದೂ ಸಂಗಮ ಆಯೋಜನಾ ಸಮಿತಿ ಎಣ್ಮಕಜೆ ಪಂ. ಸಮಿತಿ ಆಶ್ರಯದಲ್ಲಿ ಪೆರ್ಲ ಪೇಟೆ ವಠಾರದಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕತೆಯೊಂದಿಗೆ ಭೌತಿಕ ಶಕ್ತಿ ಸೇರಿಕೊಂಡಾಗ ಮಹತ್ವದ ಶ್ರೇಯಸ್ಸು ಕಾಣಲು ಸಾಧ್ಯ. ಶ್ರೇಷ್ಠ ದಾರ್ಶನಿಕರನ್ನು ವಿಶ್ವಕ್ಕೆ ನೀಡಿರುವ ಹೆಗ್ಗಳಿಕೆ ಭಾರತಕ್ಕಿದೆ. ಧರ್ಮ ಹಾಗೂ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಸಮಸ್ತ ಹಿಂದೂ ಸಮಾಜಕ್ಕೆ ಮಹತ್ವದ ಜವಾಬ್ದಾರಿಯಿದೆ. ಆರೆಸ್ಸೆಸ್‌ನ ನೂರನೇ ವರ್ಷಾಚರಣೆಯ ಮಹತ್ವದ …