ಮಹಿಳೆಯರ ಮುಂದೆ ಅನುಚಿತ ವರ್ತನೆ: ಓರ್ವ ಸೆರೆ

ಬದಿಯಡ್ಕ: ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರ ಸಹಿತ ವಿದ್ಯಾರ್ಥಿನಿಯರ ಮುಂದೆ  ಅನುಚಿತವಾಗಿ ವರ್ತಿಸಿದ ಆರೋಪ ದಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಗೋಳಿಯಡ್ಕ ಬಳಿಯ ಶಾಂತಿಪಳ್ಳದ ಅಜ್ಮಲ್ ಇರ್ಷಾದ್ (26) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನನ್ನು ನಿನ್ನೆ ಸಂಜೆ 5.15 ಕ್ಕೆ ಬೇಳ ವಿಷ್ಣುಮೂರ್ತಿನಗರದಿಂದ ವಶಕ್ಕೆ ತೆಗೆಯಲಾಗಿದೆ. ಈತ ರಸ್ತೆಯಲ್ಲಿ ನಡೆದುಹೋಗುವ ಮಹಿಳೆಯರ ಸಹಿತ ವಿದ್ಯಾರ್ಥಿನಿಯರ ಮುಂದೆ ಅನುಚಿತವಾಗಿ ವರ್ತಿಸುತ್ತಿರುವುದಾಗಿ ಗಮನಕ್ಕೆ ಬಂದ ಹಿನ್ನೆಲೆ ಯಲ್ಲಿ ಈತನ ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದರು. 

ನಾಲ್ಕು ಕಿಲೋ ಗಾಂಜಾ ವಶ; ಓರ್ವ ಸೆರೆ

ಕಾಸರಗೋಡು: ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತರಿಪಡಿಸುವ ಸಲುವಾಗಿ ಪೊಲೀಸರು ಜಿಲ್ಲೆಯಾ ದ್ಯಂತ ಆರಂಭಿಸಿದ ಕಾರ್ಯಾಚ ರಣೆಯಲ್ಲಿ ಚೌಕಿಯ ಕ್ವಾರ್ಟರ್ಸ್‌ವೊಂದರಿಂದ ನಾಲ್ಕು ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಸಿದ್ದಾರೆ. ಮೂಲತಃ ಉತ್ತರಪ್ರದೇಶ ಬಲಿಯಾಪಿಪ್‌ರೋಲಿ ನಿವಾಸಿ ಹಾಗೂ ಈಗ ಕೂಡ್ಲು ಚೌಕಿ ಕಾವುಗೋಳಿ ರೈಲ್ವೇ ಲೈನ್ ಬಳಿಯ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ  ಸುನಿಲ್ ಪ್ರಸಾದ್ (41) ಎಂಬಾತನನ್ನು ಇದಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ ನಿರ್ದೇಶ ಪ್ರಕಾರ ಕಾಸರಗೋಡು …

ನಂಬ್ರಪ್ಲೇಟ್ ಇಲ್ಲದ ವಾಹನಗಳ ವಿರುದ್ಧ ಕ್ರಮ: ಕುಂಬಳೆಯಲ್ಲಿ ಬೈಕ್ ವಶ

ಕುಂಬಳೆ: ನಂಬ್ರಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ರಾತ್ರಿ ವೇಳೆ ಯುವಕರು ಸುತ್ತಾಡುವುದು ಹೆಚ್ಚಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಕುಂಬಳೆ ಪೊಲೀಸರು  ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದರಂತೆ ನಿನ್ನೆ ರಾತ್ರಿ 12 ಗಂಟೆಗೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಂಬ್ರ ಪ್ಲೇಟ್ ಇಲ್ಲದ ಬೈಕೊಂದನ್ನು ಕುಂಬಳೆ ಶಾಲೆ ರಸ್ತೆಯಿಂದ ವಶಪಡಿಸಲಾಗಿದೆ. ಅದರ ಸವಾರನಿಂದ ಮಾಹಿತಿ ಸಂಗ್ರಹಿಸಿ ಆತನನ್ನು ಬಿಡುಗಡೆಗೊಳಿಸಲಾಗಿದೆ.  ವಿವಿಧ ರೀತಿಯ ಮಾದಕವಸ್ತು ಸಹಿತ ಅನಧಿಕೃತ ಚಟುವಟಿಕೆಗಳಿಗೆ ಹೆಚ್ಚಾಗಿ ನಂಬ್ರಪ್ಲೇಟ್ ಇಲ್ಲದ ವಾಹನಗಳನ್ನು  ಬಳಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ …

ಪತ್ರ ಬರೆದಿಟ್ಟು ಬೈಕ್‌ನಲ್ಲಿ ತೆರಳಿದ ಯುವಕ ನಾಪತ್ತೆ

ಕಾಸರಗೋಡು:  ಬೈಕ್ ಸಹಿತ ತೆರಳಿದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವಟ್ಟಂತ್ತಟ್ಟ ಎರಿಂಞಿಪುಳ ಹೌಸ್‌ನ ಜಿತೇಶ್ (32) ನಾಪತ್ತೆಯಾದ ಯುವಕ. ಈ ಬಗ್ಗೆ ತಂದೆ ಸಿ. ಬಾಲನ್ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ 1 ಗಂಟೆ ಬಳಿಕ ಜಿತೇಶ್ ಮನೆಯಿಂದ ಬೈಕ್‌ನಲ್ಲಿ ತೆರಳಿದ್ದನು. ಸಂಜೆಯಾದರೂ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.  ಜಿತೇಶ್ ತೆರಳುವಾಗ ಮೊಬೈಲ್ ಫೋನ್ ಕೊಂಡೊಯ್ದಿಲ್ಲ. ಇದರಿಂದ ಸಂಶಯಗೊಂಡು ಕೊಠಡಿಯಲ್ಲಿ ಪರಿಶೀಲಿಸಿದಾಗ  ಪತ್ರವೊಂದು ಪತ್ತೆಯಾಗಿದೆ.  “ಇಲ್ಲಿಯ ಜೀವನ ಸಾಕಾಗಿದೆ. ಮನಸ್ಸಿಗೆ …

ವಿಧಾನಸಭಾ ಚುನಾವಣೆ: ಎಡರಂಗದ ನಾಯಕತ್ವ ಮತ್ತೆ ಪಿಣರಾಯಿ ವಿಜಯನ್‌ಗೆ

ನವದೆಹಲಿ: ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಡರಂಗದ ನಾಯಕತ್ವವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್  ವಹಿಸಲಿದ್ದಾರೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ತಿಳಿಸಿದ್ದಾರೆ.  ಇದರಂತೆ ಎಡರಂಗದ ಚುನಾವಣಾ ಪ್ರಚಾರದ ನೇತೃತ್ವವನ್ನು ಪಿಣರಾಯಿ ವಿಜಯನ್‌ರೇ ವಹಿಸಲಿದ್ದಾರೆ.  ಅಲ್ಲದೆ ಅವರು ತಮ್ಮ ಸ್ವ ಕ್ಷೇತ್ರವಾದ ಕಣ್ಣೂರು ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ  ಸ್ಪರ್ಧಿಸುವುದು ಖಚಿತಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಸಿಪಿಎಂ ಅಭ್ಯರ್ಥಿಗಳ ಯಾದಿಯನ್ನು  ಮಾರ್ಚ್‌ನಲ್ಲಿ ಪ್ರಕಟಿಸಲಾಗುವುದೆಂದು ಎಂ.ಎ. ಬೇಬಿ ತಿಳಿಸಿದ್ದಾರೆ.  ಇದೇ ವೇಳೆ ಪಿಣರಾಯಿ ವಿಜಯನ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕೇ …

ನಾರಾಯಣಮಂಗಲದ ಪದ್ಮನಾಭ ಚೆಟ್ಟಿಯಾರ್ ನಿಧನ

ಕುಂಬಳೆ: ನಾರಾಯಣಮಂಗಲ  ನಿವಾಸಿ  ಎನ್. ಪದ್ಮನಾಭ ಚೆಟ್ಟಿಯಾರ್ (77) ಇಂದು ಬೆಳಿಗ್ಗೆ ಸ್ವ ಗೃಹದಲ್ಲಿ  ನಿಧನಹೊಂದಿದರು. ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ಹಿರಿಯ ಸದಸ್ಯನಾದ ಇವರು ಕಾಸರಗೋಡು ಜಿಲ್ಲಾ ವೀವರ್ಸ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕನೂ ಆಗಿದ್ದರು. ಮೃತರು ಪತ್ನಿ ರಾಜೀವಿ, ಮಕ್ಕಳಾದ ಎನ್. ಶಶಿಧರ, ದಿವಾಕರ, ಗೋಪಾಲಕೃಷ್ಣ, ಜಲಜಾಕ್ಷಿ, ಅಳಿಯ ಅಪ್ಪುಕುಟ್ಟನ್ ಉದುಮ, ಸೊಸೆಯಂದಿರಾದ  ಶ್ವೇತ, ವೀಣಾ, ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರ ರಜನೀಕಾಂತ್ ಈ ಹಿಂದೆ  ನಿಧನರಾಗಿದ್ದಾರೆ.

ಶಾಲಾ ಮಕ್ಕಳ ಗೋಡೆ ಹಾರಾಟ ಅಪಾಯಕ್ಕೆ ಸಾಧ್ಯತೆ: ಕುಂಬಳೆ ಮಾವಿನಕಟ್ಟೆಯಲ್ಲಿ ಕಾಲ್ನಡೆ ಮೇಲ್ಸೇತುವೆ ಬೇಕೆಂಬ ಬೇಡಿಕೆ

ಕುಂಬಳೆ: ವಿವಿಧ ಕಡೆಗಳಲ್ಲಿ ಫೂಟ್‌ಓವರ್ ಬ್ರಿಡ್ಜ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವಾಗ, ಅನುಮತಿ ನೀಡುತ್ತಿರುವಾಗ ಮಾವಿನಕಟ್ಟೆಯನ್ನು ಅವಗಣಿ ಸುತ್ತಿರುವುದಾಗಿ ಸ್ಥಳೀಯರು ಸೂಚಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ತಲಪಾಡಿ- ಚೆಂಗಳ ರೀಚ್‌ನಲ್ಲಿ 10ರಷ್ಟು ಸ್ಥಳಗಳಲ್ಲಿ ಹೊಸತಾಗಿ ಮೇಲ್ಸೇತುವೆ ಮಂಜೂರುಗೊಳಿಸಿ ಸೂಚನೆ ಲಭಿಸಿತ್ತು. ಕುಂಬಳೆ ಮಾವಿನಕಟ್ಟೆಯಲ್ಲಿ ಮಸೀದಿ, ಸಮೀಪದಲ್ಲೇ ಶಿಕ್ಷಣ ಸಂಸ್ಥೆಗಳು ಎಲ್ಲ ಇರುವಾಗ ಇಲ್ಲಿ ಅಂಡರ್ ಪಾಸ್ ಅನಿವಾರ್ಯವಾಗಿತ್ತು. ಇಲ್ಲಿ ಅಂಡರ್‌ಪಾಸ್‌ಗೆ ಸಮಾನ ವಾದ ರೀತಿಯಲ್ಲಿ ಕಲ್ವರ್ಟ್ ನಿರ್ಮಿಸುವಾಗ ಅದು ಕಾಲ್ನಡೆ ಪ್ರಯಾಣಿಕರಿಗೆ ಪ್ರಯೋಜನವಾ ಗುವ ರೀತಿಯಲ್ಲಿ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು. ಆದರೆ …

ಹಗಲು ಹೊತ್ತಿನಲ್ಲಿ ಉರಿಯುತ್ತಿರುವ ಬೀದಿ ದೀಪ: ಭಾರೀ ಪ್ರಮಾಣದಲ್ಲಿ ವಿದ್ಯುತ್ ವ್ಯರ್ಥದಿಂದ ಪಂಚಾಯತ್‌ಗೆ ಆರ್ಥಿಕ ನಷ್ಟ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಬೀದಿ ದೀಪಗಳು ಹಗಲು ಹೊತ್ತಲ್ಲೂ ಉರಿದು ಭಾರೀ ಪ್ರಮಾಣದಲ್ಲಿ ವಿದ್ಯುತ್ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೆರಿಂಗಡಿ ರಸ್ತೆಯ ಜನಪ್ರಿಯ ಎಂಬಲ್ಲಿ ಸರ್ವೀಸ್ ರಸ್ತೆ ಬದಿ ಹಾಗೂ ಕುಬಣೂರು ರಸ್ತೆಯ ಪುಳಿಕುತ್ತಿ ಸ್ಮಶಾನದ ಬಳಿ ಸ್ಥಾಪಿಸಲಾದ ಲೋಮಾಸ್ಟ್ ಬೀದಿ ದೀಪಗಳು ಕಳೆದ ಒಂದು ತಿಂಗಳಿಂದ ರಾತ್ರಿ ಹಗಲು ಸತತವಾಗಿ ಉರಿಯುತ್ತಿದೆ. ಹಗಲು ಉರಿಯುತ್ತಿರುವ ದೀಪವನ್ನು ನಂದಿಸುವ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯುತ್ ಅನಗತ್ಯವಾಗಿ ವ್ಯರ್ಥವಾಗಿ ಹೋಗುತ್ತಿದೆ ಎಂದು ಇದರಿಂದ ಪಂಚಾಯತ್‌ಗೆ …

ಗ್ಯಾರೇಜ್ ಮಾಲಕ ನಿಧನ

ಮುಳ್ಳೇರಿಯ: ಮುಳ್ಳೇರಿಯ ಪೇಟೆಯಲ್ಲಿ ದುರ್ಗಾ ವರ್ಕ್‌ಶಾಪ್ ಎಂಬ ಗ್ಯಾರೇಜ್‌ನ ಮಾಲಕ ಪಾರ್ಥಕೊಚ್ಚಿ ನಿವಾಸಿ ರಾಮಕೃಷ್ಣ ಆಚಾರ್ಯ (79) ನಿಧನ ಹೊಂದಿದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ದಿನೇಶ್, ಶಿವಪ್ರಸಾದ್, ಉಷಾ, ಮೌನೇಶ್, ವೇಣುಗೋಪಾಲ, ಚರಣ್‌ರಾಜ್, ಅಳಿಯಂದಿರಾದ ಪ್ರಜೀಶ್, ಹರ್ಷ, ಸೊಸೆಯಂದಿರಾದ ಕಾಂಚನ, ಅಶ್ವಿನಿ, ಬಸ್ವಿತ, ಅನುಷ, ಸಹೋದರಿಯರಾದ ವಾರಿಜ, ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆರ್ಥಿಕ ವರ್ಷ ಕೊನೆಗೊಳ್ಳುವ ವೇಳೆ ಯೋಜನೆ ಪೂರ್ತಿಗೆ ಸಮಸ್ಯೆ: ಬದಿಯಡ್ಕ ಪಂಚಾಯತ್‌ನಿಂದ ಅಧಿಕಾರಿಗಳ ವರ್ಗಾವಣೆ ಮಾಡಬಾರದೆಂದು ಅಧ್ಯಕ್ಷರಿಂದ ಸಚಿವರಿಗೆ ಪತ್ರ

ಬದಿಯಡ್ಕ: ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ ತಿಂಗಳಲ್ಲಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಬದಿಯಡ್ಕ ಪಂಚಾಯತ್‌ನಲ್ಲಿ ಸಮಸ್ಯೆ ಸೃಷ್ಟಿಗೆ ಯತ್ನಿಸುತ್ತಿದೆ ಎಂದು ಪಂಚಾಯತ್ ಅಧ್ಯಕ್ಷ ಶಂಕರ ಡಿ. ದೂರಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಇಲಾಖೆ ಸಚಿವರಿಗೆ ಪತ್ರ ಬರೆದ ಅವರು ಮಾರ್ಚ್ ತಿಂಗಳು ಕೊನೆಗೊಳ್ಳುವ ಮೊದಲು ಪಂಚಾಯತ್ ಕಚೇರಿಯಿಂದ ಯಾವುದೇ ಅಧಿಕಾರಿಯನ್ನು ವರ್ಗಾಯಿಸಬಾರದೆಂದು ಒತ್ತಾಯಿಸಿದ್ದಾರೆ. ಪಂಚಾಯತ್‌ನಲ್ಲಿ ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿದ್ದ ವೇಳೆ ಕಚೇರಿಯಲ್ಲಿ ೧೦ರಷ್ಟು ಹುದ್ದೆಗಳು ಖಾಲಿಯಾಗಿತ್ತು. ಪಂಚಾಯತ್ ಆಡಳಿತ ನಿರಂತರ ಒತ್ತಾಯದ ಮೇರೆಗೆ …