ಮಲ್ಲ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ತೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ವಿಟ್ಲ ನಿವಾಸಿಯೂ, ಕ್ಷೇತ್ರದ ಅಧೀನತೆಯ ಲ್ಲಿರುವ ಕಟ್ಟಡದಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದ ಬಿ. ಅನಂತಕೃಷ್ಣ ಭಟ್ (49) ಮೃತಪಟ್ಟ ವ್ಯಕ್ತಿ. ೨೭ ವರ್ಷಗಳ ಹಿಂದೆ ಇವರು ಮಲ್ಲ ಕ್ಷೇತ್ರದಲ್ಲಿ ಅರ್ಚಕನಾಗಿ ಕೆಲಸಕ್ಕೆ ಸೇರಿದ್ದರೆಂದು ಸಹೋದರ ತಿಳಿಸಿದ್ದಾರೆ. ನಿನ್ನೆ ಸಂಜೆ ಕ್ಷೇತ್ರದಲ್ಲಿ  ಪೂಜೆ ಕಾರ್ಯಕ್ಕೆ ಇವರು ತಲುಪಬೇಕಾಗಿತ್ತು. ಆದರೆ ನಾಪತ್ತೆಯಾದ ಹಿನ್ನೆಲೆಯಲ್ಲಿ ನೌಕರರು ವಾಸಸ್ಥಳಕ್ಕೆ ತಲುಪಿದರೂ  ಪತ್ತೆಯಾಗಲಿಲ್ಲ. ಬಳಿಕ ಸಿಸಿ ಟಿವಿ ಕ್ಯಾಮರಾಗಳ …

ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ನಿಧನ

ಉಪ್ಪಳ: ಮೂಲತ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ನಿವಾಸಿಯೂ ಇದೀಗ ಬೆಂಗಳೂರಿನಲ್ಲಿ ವಾಸವಾಗಿರುವ ನಿವೃತ್ತ ಮುಖ್ಯೋಪಾಧ್ಯಾಯ ಐ. ಸದಾಶಿವ ಆಳ್ವ ಇಚ್ಲಂ ಗೋಡು (95) ಬೆಂಗಳೂರಿ ನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದರು. ಇವರು ಉಪ್ಪಳ ಸರಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಅಲ್ಲದೆ ಮಂಜೇಶ್ವರ-ಉಪ್ಪಳ ಲಯನ್ಸ್ ಕ್ಲಬ್‌ನಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ರಾಜೀವಿ .ಎಸ್ ಆಳ್ವ, ಮಕ್ಕಳಾದ ಸುಧಿ ರಂಜನ್ , ಗೀತಾ ಅಶೋಕ ಹಾಗೂ ಅಪಾರ ಬಂಧು ಬಳಗವನ್ನು …

ಹೆರಿಗೆ ಬಳಿಕ ರಕ್ತಸ್ರಾವ: ಯುವತಿ ಮೃತ್ಯು

ಬದಿಯಡ್ಕ: ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದಿಂದಾಗಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸಹಕಾರಿ ಇಲಾಖೆ ಜೂನಿಯರ್ ಅಡಿಟರ್ ಮಾವಿನಕಟ್ಟೆಯ ಟಿ. ನಳಿನಾಕ್ಷಿ (42) ಮೃತಪಟ್ಟ ಯುವತಿ. ಇವರು ಅರವತ್ ಕುದಿರಕ್ಕೋಡ್‌ನ ರಾಘನ್‌ರ ಪತ್ನಿಯಾಗಿದ್ದಾರೆ. ಫೆ. 24ರಂದು  ನಳಿನಾಕ್ಷಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಉಂಟಾದ ರಕ್ತಸ್ರಾವದ ಹಿನ್ನೆಲೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ನಳಿನಾಕ್ಷಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ರಕ್ತಸ್ರಾವ ಹಾಗೂ ಬಳಿಕ ಉಂಟಾದ ಹೃದಯಾಘಾ ತವೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಇದು ನಳಿನಾಕ್ಷಿಯ ಮೂರನೇ ಹೆರಿಗೆಯಾಗಿದೆ. ಇವರಿಗೆ …

ಕಳವು ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಕಾಸರಗೋಡು:  ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪಾಲಕ್ಕಾಡ್‌ನ ಚಿಟ್ಟೂರು ಆಯುರೂರು ಕೊಳಕ್ಕರೆಪರಂಬಿಲ್ ನಿವಾಸಿ ಜಲೀಲ್ ಯಾನೆ ಶಟ್ಟರ್ ಜಲೀಲ್ (36), ಈತನ ಸಹಚರ ಆಲಂಪಾಡಿಯ ಅಬ್ದುಲ್ ಲತೀಫ್ (46) ಎಂಬಿವರನ್ನು ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್, ಎಸ್‌ಐ ಅಖಿಲ್, ಎಎಸ್‌ಐ ಪ್ರಸಾದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಆರೋಪಿಗಳ ಪೈಕಿ ಜಲೀಲ್ ಕಾಸರಗೋಡಿನಲ್ಲಿ ವಾಸಿಸಿ ಕರ್ನಾಟಕದಲ್ಲಿ ಕೋಳಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಈಮಧ್ಯೆ  ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಿಂದ   ಬೆಲೆಬಾಳುವ ಸೊತ್ತುಗಳನ್ನು  ಕಳವುಗೈದ …

ಕಬಡ್ಡಿ ಟೂರ್ನಮೆಂಟ್‌ಗೆ ತೋರಣ ಕಟ್ಟುತ್ತಿದ್ದಾಗ ರಾಜ್ಯ ಕಬಡ್ಡಿ ಕ್ರೀಡಾಪಟು ಕುಸಿದುಬಿದ್ದು ಮೃತ್ಯು

ಕಾಸರಗೋಡು: ಕಬಡ್ಡಿ ಟೂರ್ನಮೆಂಟ್‌ಗೆ ತೋರಣಕಟ್ಟುತ್ತಿದ್ದ ವೇಳೆ  ರಾಜ್ಯ ಕಬಡ್ಡಿ ಕ್ರೀಡಾಪಟು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾಞಂಗಾಡ್ ಪಡನ್ನ ಕ್ಕಾಡ್ ಅನಂತಂಪಳ್ಳದ ಸತೀಶನ್-ಪುಷ್ಪ ದಂಪತಿಯ ಪುತ್ರನೂ ಪ್ಲಸ್‌ವನ್ ವಿದ್ಯಾರ್ಥಿಯಾದ ನಿತಿನ್‌ಕೃಷ್ಣ (16) ಮೃತಪಟ್ಟ ದುರ್ದೈವಿ. ಅನಂತಂಪಳ್ಳ ಶಬರಿ ಕ್ಲಬ್‌ನ ಸಮೀಪ ಲೆಜೆಂಡ್ ಒಕ್ಕೂಟ ಇಂದು ಹಮ್ಮಿಕೊಂಡ ಕಬಡ್ಡಿ ಟೂರ್ನಮೆಂಟ್‌ಗಾಗಿ ತೋರಣ ಕಟ್ಟುತ್ತಿದ್ದ ವೇಳೆ ನಿತಿನ್‌ಕೃಷ್ಣ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ನೀಲೇಶ್ವರದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕಲ್ಲಿಕೋಟೆ ಮುಕ್ಕಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ …

ಯುವತಿ ನಾಪತ್ತೆ

ಕುಂಬಳೆ: ಕುಂಬಳೆಯ ಫ್ಯಾನ್ಸಿ ಅಂಗಡಿಯೊಂದರ ಸೇಲ್ಸ್ ಗರ್ಲ್ ಆಗಿರುವ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕೊಯಿಪ್ಪಾಡಿ ರಾಜೀವ್ ಗಾಂಧಿ ಕಾಲನಿಯ ನಾರಾಯಣಮಂಗಲ ಹೌಸ್‌ನ  ಹರ್ಷಿತಾ ಯಾನೆ ರೇಖಾ ಡಿ’ಸೋಜಾ (23) ನಾಪತ್ತೆಯಾದ ಯುವತಿ. ಈ ಬಗ್ಗೆ ಪತಿಯ ಸಹೋದರ ಅಕ್ಷತ್ ನೀಡಿದ ದೂರಿನಂತೆ  ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಳಿಗ್ಗೆ ಕುಂಬಳೆಯ ಅಂಗಡಿಗೆ ಕೆಲಸಕ್ಕೆಂದು ತಿಳಿಸಿ ಹೋದ ಯುವತಿ ಬಳಿಕ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಮಾಹಿತಿ ನೀಡಿದ ಶಂಕೆಯಿಂದ : ಯುವಕನಿಗೆ ಹಲ್ಲೆ: ಮೂವರ ವಿರುದ್ಧ ನರಹತ್ಯಾಯತ್ನ ಪ್ರಕರಣ ದಾಖಲು

ಕುಂಬಳೆ: ಅಕ್ರಮವಾಗಿ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ನೀಡಿದ ಶಂಕೆಯ ಹೆಸರಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್  ಮುಸ್ಲಿಂ ಲೀಗ್ ಕಚೇರಿ ಬಳಿಯ ಬೈತುಲ್ ಸುರೂಲ್ ನಿವಾಸಿ ಅಬ್ದುಲ್ಲ ಅರ್ಶಾದ್ (35) ಎಂಬವರು ನೀಡಿದ ದೂರಿನಂತೆ ಮೊಗ್ರಾಲ್ ನಿವಾಸಿಗಳಾದ ಗಫೂರ್, ತನ್ಸೀಫ್ ಮತ್ತು ಸನದ್ ಎಂಬವರ ವಿರುದ್ಧ  ಈ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ …

ಮಂಗಲ್ಪಾಡಿ ಪಂ. ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಟ್ಟದ ಬೃಹತ್ ಹಿಂದೂ ಸಮಾಜೋತ್ಸವ ನಿನ್ನೆ ಸಂಜೆ ಪ್ರತಾಪನಗರದ ಶಿವಶಕ್ತಿ ಮೈದಾನದಲ್ಲಿ ಸಾವಿವಾರು ಮಂದಿಯ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು. ಮಂಗಲ್ಪಾಡಿ ಮನೆತನದ ಹಿರಿಯರಾದ ಸುಫಲಚಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಮಿತಿಯ ರಕ್ಷಾಧಿಕಾರಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ್ ಮನೋಹರ ಮಠದ್ ದಿಕ್ಸೂಚಿ ಭಾಷಣ ಮಾಡಿದರು. ಸಮಿತಿ ಅಧ್ಯಕ್ಷ ಸಿ.ಎಸ್.ಕೃಷ್ಣಪ್ಪ ಐಲ್ ಉಪಸ್ಥಿತರಿದ್ದರು. ಆರ್.ಎಸ್.ಎಸ್ ಮಂಡಲ ಕಾರ್ಯವಾಹ ಶ್ರೀಧರ ಶೆಟ್ಟಿ …

ತಲೆಹೊರೆ ಕಾರ್ಮಿಕರ ಕನಿಷ್ಠ ಪಿಂಚಣಿ 5000 ರೂ.ಗೇರಿಸಬೇಕು-ಬಿಎಂಎಸ್

ಕಾಸರಗೋಡು: ತಲೆಹೊರೆ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ 5000 ರೂಪಾಯಿಗೇರಿಸಬೇಕೆಂದು ಹೆಡ್ ಲೋಡ್ ಆಂಡ್ ಜನರಲ್ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮ್ಮೇಳನ ಒತ್ತಾಯಿಸಿದೆ. ಉಳಿಯತ್ತಡ್ಕದ ಶಕ್ತಿ ಸಭಾ ಭವನದಲ್ಲಿ ನಡೆದ ಸಮ್ಮೇಳನವನ್ನು ಫೆಡರೇಶನ್ ರಾಜ್ಯ ಅಧ್ಯಕ್ಷ ಕೆ. ಜಯಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ವಿ. ಬಾಬು ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್, ಉಪೇಂದ್ರನ್ ಕೋಟೆಕಣಿ ಮಾತನಾಡಿದರು. ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಭಾಸ್ಕರನ್ ಚೆಂಬಿಲೋಟ್, ಸದಾಶಿವನ್ ಮುಳ್ಳೇರಿಯ, ತಂಗಚ್ಚನ್ ಪಾಣತ್ತೂರು, ಅನೀಶ್ ಪರಕ್ಕಳಾಯಿ, ಪ್ರಧಾನ ಕಾರ್ಯದರ್ಶಿಯಾಗಿ …

ಮುಳ್ಳೇರಿಯ: ಹಿಂದೂ ಏಕತಾ ಸಮ್ಮೇಳನ ನಗರಕ್ಕೆ ಧ್ವಜಸ್ತಂಭ ಘೋಷಯಾತ್ರೆ

ಮುಳ್ಳೇರಿಯ: ಕಾರಡ್ಕ ಪಂಚಾಯತ್ ಹಿಂದೂ ಏಕತಾ ಸಮ್ಮೇಳನದ ಪ್ರಚಾರಾರ್ಥ ಸಮ್ಮೇಳನ ನಗರದಲ್ಲಿ ಸ್ಥಾಪಿಸಲಿರುವ ಧ್ವಜಸ್ತಂಭವನ್ನು  ಸಾಗಿಸುವ ಘೋಷಯಾತ್ರೆ ಹಲವಾರು ದ್ವಿಚಕ್ರ ವಾಹನಗಳ ಹಾಗೂ ಇತರ ವಾಹನಗಳ ಬೆಂಗಾವಲಿನೊಂದಿಗೆ ನಡೆಯಿತು. ಕುಂಟಾರಿನಿಂದ ಆರಂಭ ಗೊಂಡ ಘೋಷಯಾತ್ರೆ ಪಂಚಾಯ ತ್‌ನ ವಿವಿಧ ಭಾಗಗಳಿಂದ ಸಂಚರಿಸಿ ಮುಳ್ಳೇರಿಯದ ಸಮ್ಮೇಳನ ನಗರಕ್ಕೆ ತಲುಪಿತು. ಘೋಷಯಾತ್ರೆಯನ್ನು ಕುಂಟಾರಿನಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಸ್ವಾಗತ ಸಮಿತಿ ಅಧ್ಯಕ್ಷ ಎಂ.ಕೆ. ರಾಘವನ್‌ರಿಗೆ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಜನನಿ, ಉಪಾಧ್ಯಕ್ಷ ದಾಮೋದರ …