ಕನ್ಯಪ್ಪಾಡಿಯಲ್ಲಿ ರಸ್ತೆ ಮಧ್ಯೆ ಕಾಡುಕೋಣ ಪ್ರತ್ಯಕ್ಷ

ಬದಿಯಡ್ಕ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ    ಭಾರೀ ಗಾತ್ರದ ಕಾಡುಕೋಣ ಪತ್ತೆಯಾಗಿದೆ.  ನೀರ್ಚಾಲು ಬಳಿಯ ಕನ್ಯಪ್ಪಾಡಿಯಲ್ಲಿ ನಿನ್ನೆ ರಾತ್ರಿ 12 ಗಂಟೆ ವೇಳೆ  ಕಾಡುಕೋಣ ಕಂಡುಬಂದಿದೆ. ಇಲ್ಲಿನ ಬಸ್ ಪ್ರಯಾಣಿಕರ ತಂಗುದಾಣದ ಮುಂದೆ ದೀರ್ಘ ಹೊತ್ತು ನಿಂತಿದ್ದ ಕಾಡು ಕೋಣದ ಚಿತ್ರವನ್ನು ಈ ರಸ್ತೆಯಲ್ಲಿ ಸಂಚರಿಸಿದವರು ತೆಗೆದಿದ್ದರು.  ಈ ಪ್ರದೇಶದಲ್ಲಿದ್ದ ಬೀದಿ ನಾಯಿಗಳು ಕಾಡುಕೋಣವನ್ನು ಸುತ್ತುವರಿದು ದಾಳಿಗೆ ಮುಂದಾಗಿ ದ್ದವು. ಇದರಿಂದ ಕಾಡುಕೋಣ ಅಲ್ಲಿಂದ ಪರಾರಿಯಾಗಿದೆ. ಕೆಲವು ದಿನಗಳ ಹಿಂದೆಯೂ ಕನ್ಯಪ್ಪಾಡಿಯಲ್ಲಿ ಕಾಡುಕೋಣವನ್ನು ಕಂಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಅಂದು …

ಕೋಳಿ ಅಂಕ:5 ಮಂದಿ ಸೆರೆ; 7 ಕೋಳಿ ವಶ

ಬದಿಯಡ್ಕ: ಪುತ್ತಿಗೆ ಮುಗು ಚೇವ ಎಂಬಲ್ಲಿನ ಕೋಳಿ ಅಂಕ ಕೇಂದ್ರಕ್ಕೆ ನಿನ್ನೆ ರಾತ್ರಿ ಬದಿಯಡ್ಕ ಪೊಲೀಸರು ದಾಳಿ ನಡೆಸಿ ಕೋಳಿಅಂಕದಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ. ಮಾತ್ರವಲ್ಲ 7 ಹುಂಜಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಡಂಬಾರ್ ನಿವಾಸಿ ಯತೀಶ್ ಬಿ. (36), ಮುಗು ನಿವಾಸಿಗಳಾದ ಬಾಬು ರೈ (70), ಸುಧಾಕರ ರೈ (48), ನಾರಾಯಣ ಕೆ. (42) ಮತ್ತು ಗಿರೀಶ್ ರೈ (40) ಎಂಬವರನ್ನು ಈ ಸಂಬಂಧ ಬಂಧಿಸಲಾಗಿದೆ.

ಎಂಟು ತಿಂಗಳು ಪ್ರಾಯದ ಮಗುವನ್ನು ರೈಲಿನಲ್ಲಿ ಸಹಪ್ರಯಾಣಿಕನಿಗೆ ನೀಡಿ ಪರಾರಿಯಾದ ಯುವತಿ

ಕಲ್ಲಿಕೋಟೆ: ಶೌಚಾಲಯಕ್ಕೆ ಹೋಗಿ ಬರುತ್ತೇ ನೆಂದು ತಿಳಿಸಿ 8 ತಿಂಗಳ ಪ್ರಾಯದ ಮಗುವನ್ನು  ಸಹ ಪ್ರಯಾಣಿಕನ ಕೈಯಲ್ಲಿ ನೀಡಿ ಯುವತಿ ಪರಾರಿಯಾಗಿದ್ದು, ಬಳಿಕ   ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಕೆಯನ್ನು ಪತ್ತೆಹಚ್ಚಲಾಗಿದೆ.   ಕಲ್ಲಿಕೋಟೆಯಿಂದ ಶೋರ್ನೂರಿಗೆ  ಬೆಳಿಗ್ಗೆ 10.15 ಕ್ಕೆ  ಹೊರಡುವ ರೈಲಿನಲ್ಲಿ ಈ ಘಟನೆ ನಡೆದಿದೆ.  ಮಗುವಿನೊಂದಿಗೆ ರೈಲಿನಲ್ಲಿ ಕುಳಿತಿದ್ದ ಯುವತಿ ರೈಲು ಪ್ರಯಾಣ ಆರಂಭಿಸಲು  ಕೆಲವೇ ನಿಮಿಷಗಳಿರುವಾಗ  ಶೌಚಾಲಯಕ್ಕೆ ಹೋಗಿ ಬರುತ್ತೇನೆಂದೂ ಅದುವರೆಗೆ ಮಗುವನ್ನು ಹಿಡಿದುಕೊಳ್ಳುವಂತೆ ರೈಲಿನಲ್ಲಿದ್ದ ಪ್ರಯಾಣಿಕನಲ್ಲಿ ಯುವತಿ ತಿಳಿಸಿದ್ದಾಳೆ. ಇದರಂತೆ ಸಹಪ್ರಯಾ ಣಿಕ ಮಗುವನ್ನು  …

ಕಡ್ಡಾಯ ಮಲೆಯಾಳ ಮಸೂದೆ: ಕರ್ನಾಟಕ ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ ಬಲ್ಕೀಸ್ ಬಾನು

ಬೆಂಗಳೂರು: ಕೇರಳ ವಿಧಾನಸಭೆ ಮಂಡಿಸಿದ ಕಡ್ಡಾಯ ಮಲೆಯಾಳ ಮಸೂದೆ ವಿರುದ್ಧ ಕರ್ನಾಟಕ ಎಂಎಲ್‌ಸಿ ಬಲ್ಕೀಸ್ ಬಾನು ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತಿದರು. ಕಾಸರಗೋಡು ಗಡಿನಾಡು ಪ್ರದೇಶದ ಕನ್ನಡಿಗರ ಸಮಸ್ಯೆಗಳ ಬಗ್ಗೆ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಕರ್ನಾಟಕ ಸರಕಾರದ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಮೊದಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕಡ್ಡಾಯ ಮಲೆಯಾಳ ಮಸೂದೆಯನ್ನು ಹಿಂತೆಗೆಯಲು ಒತ್ತಾಯಿಸಿದ್ದರು. ಪ್ರಸ್ತುತ ಕಾಂಗ್ರೆಸ್ ಮುಖಂಡೆಯಾಗಿರುವ ಬಲ್ಕೀಸ್ ಬಾನು ಕರ್ನಾಟಕ ವಿಧಾನಪರಿ ಷತ್‌ನಲ್ಲಿ ಪ್ರಸ್ತಾಪಿಸಿ ಕೇರಳದ …

ಬೇಸಿಗೆ ಮಳೆ : ಹಳ್ಳದಂತಾದ ಪೆರಿಯ ಹೆದ್ದಾರಿ ಸರ್ವಿಸ್ ರಸ್ತೆ

ಕಾಸರಗೋಡು: ನಿನ್ನೆ ರಾತ್ರಿ ಸುರಿದ ಬೇಸಿಗೆ ಮಳೆಯಿಂದ ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ.  ರಾತ್ರಿ ೧೦.೩೦ರ ವೇಳೆ ಸುರಿಯತೊಡಗಿದ ಮಳೆ ಸುಮಾರು ೧೫ ನಿಮಿಷಗಳ ಕಾಲ ಮುಂದುವರಿದಿದೆ. ಇದೇ ವೇಳೆ  ಬೇಸಿಗೆ ಮಳೆಗೆ ರಸ್ತೆಯಲ್ಲಿ ನೀರು ತುಂಬಿಕೊಂಡರೆ  ಮಳೆಗಾಲದಲ್ಲಿ ಏನಾಗಿರಲಿದೆಯೆಂಬ ಬಗ್ಗೆ  ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.  ಎರಡೂ ಭಾಗಗಳಿಂದ ಹರಿದು ಬರುವ ಮಳೆ ನೀರು   ಪೆರಿಯ ಬಜಾರ್ ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಸಮೀಪ ತುಂಬಿಕೊಳ್ಳುತ್ತಿದೆ. ಇಲ್ಲಿಂದ  ಮಳೆ ನೀರು ಹರಿದುಹೋ …

ಕಾಸರಗೋಡು ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸರಾಗುತ್ತಿರುವುದಾಗಿ ಬಿಎಂಎಸ್ ಆರೋಪ

ಕಾಸರಗೋಡು: ನಗರದಲ್ಲಿ ರಾತ್ರಿ ಕಾಲ ಆಟೋ ಚಾಲಕರಲ್ಲಿ ಕೆಲವರು ನೈತಿಕ ಪೊಲೀಸ್‌ಗಿರಿ ತೋರಿಸುತ್ತಿರುವು ದಾಗಿ ಬಿಎಂಎಸ್ ಆರೋಪಿಸಿದೆ. ರಾತ್ರಿ ಕಾಲದ ಗೂಂಡಾ ಪ್ರವೃತ್ತಿಯನ್ನು ಕೊನೆಗೊಳಿಸಬೇಕೆಂದು ಪೊಲೀಸರಲ್ಲಿ ಬಿಎಂಎಸ್ ಆಗ್ರಹಿಸಿದೆ. ಪೇಟೆಯಲ್ಲಿ ರಾತ್ರಿ ಕಾಲಗಳಲ್ಲಿ ಆಟೋ ನಿಲುಗಡೆ ಸ್ಥಳಗಳಲ್ಲಿ ನಿಲ್ಲಿಸುವ ಆಟೋ ರಿಕ್ಷಾಗಳ ಚಾಲಕರಲ್ಲಿ ಸ್ಟಾಂಡ್‌ನಿಂದ ಆಟೋ ವನ್ನು ತೆಗೆಯಬೇಕೆಂದು ಆಗ್ರಹಿಸುತ್ತಿ ರುವುದಾಗಿಯೂ, ತೆಗೆಯದಿದ್ದರೆ ಆಕ್ರಮಣ ನಡೆಸುವುದಾಗಿಯೂ ಬೆದರಿಕೆಯೊಡ್ಡುತ್ತಿರುವುದಾಗಿ ಬಿಎಂಎಸ್ ಸಭೆ ಆರೋಪಿಸಿದೆ. ಫೆಬ್ರವರಿ ೨೫ರಂದು ರಾತ್ರಿ ಕೆಎಸ್‌ಆರ್‌ಟಿಸಿ ಕಿಂಗ್ ಕೋಬ್ರಾ ಆಟೋ ಸ್ಟಾಂಡ್‌ನಲ್ಲಿ ಸ್ಥಿರವಾಗಿ ನಿಲುಗಡೆ ಮಾಡುವ …

ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಸಹಕಾರಿ ರತ್ನ ಪುರಸ್ಕಾರ

ಕಾಸರಗೋಡು:  ತೃಶೂರು ಕೇಂದ್ರವಾಗಿ ಕಾರ್ಯಾಚರಿಸುವ ಟೀಮ್ ಕೋ-ಆಪರೇಟಿವ್‌ನ ಸಹಕಾರಿ ರತ್ನ ಪುರಸ್ಕಾರ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಲಭಿಸಿದೆ. ಸಂಘದ ಸ್ತುತ್ಯರ್ಹವಾದ ಚಟುವಟಿಕೆ, ನೂತನ ಸಹಕಾರಿ ಮಾದರಿಗಳು ಎಂಬಿವುಗಳನ್ನು ಪರಿಗಣಿಸಿ ಪುರಸ್ಕಾರ ಲಭಿಸಿದೆ. ಕಲ್ಲಿಕೋಟೆ ನಳಂದ ಸಭಾಂಗಣದಲ್ಲಿ ನಡೆದ ಸಹಕಾರಿ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಂಘಕ್ಕೆ ಬೇಕಾಗಿ ಕಾರ್ಯದರ್ಶಿ ಪ್ರದೀಪ್ ಕೆ. ಪುರಸ್ಕಾರ ಸ್ವೀಕರಿಸಿದರು. ಅಗ್ರಿಕಲ್ಚರ್ ಕೋ-ಓಪರೇಟಿವ್ ಸ್ಟಾಫ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ಮಾಜಿ ನಿರ್ದೇಶಕ ಬಿ.ಪಿ. ಪಿಳ್ಳ, ಐ.ಸಿ.ಎಂ. ಮಾಜಿ ನಿರ್ದೇಶಕ ಎಂ.ವಿ. ಶಶಿಕುಮಾರ್, …

ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ

ಬದಿಯಡ್ಕ: ಬಿಜೆಪಿ ಬದಿಯಡ್ಕ ಮಂಡಲ ಕಾರ್ಯಕರ್ತರ ಶಿಬಿರ ಮಾರ್ಪನಡ್ಕದಲ್ಲಿ ಜರಗಿದ್ದು, ಬೆಳ್ತಂಗಡಿ ಶಾಸಕ ಹಾಗೂ ಕಾಸರಗೋಡು ವಿಧಾನಸಭಾ ಮಂಡಲ ಚುನಾವಣಾ ಪ್ರಭಾರಿ ಹರೀಶ್ ಪೂಂಜ ಉದ್ಘಾಟಿಸಿದರು. ಬಿಜೆಪಿ ಕೇರಳದಲ್ಲೂ ಅಧಿಕಾರಕ್ಕೇರಬೇಕಾದುದು ಕಾಲ ಘಟ್ಟದ ಅನಿವಾರ್ಯತೆ ಎಂದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳದಾದ್ಯಂತ ಗಳಿಸಿದ ಮುನ್ನಡೆ ವಿಧಾನಸಭಾ ಚುನಾವಣೆಯಲ್ಲೂ ಪ್ರತಿಫಲಿಸಲಿದೆ ಎಂದು ಅವರು ನುಡಿದರು. ಮಂಡಲ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ. ಶ್ರೀಕಾಂತ್, ಸುಧಾಮ ಗೋಸಾಡ, ಎಂ.ಎಲ್. ಅಶ್ವಿನಿ, ಮಣಿಕಂಠ ರೈ, ಶ್ರೀಧರ ಬೆಳ್ಳೂರು, ರವೀಂದ್ರ …

ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕಾರ- ಬ್ರಹ್ಮಚಾರಿಣಿ ದಿಶಾ ಚೈತನ್ಯ

ಕಾಸರಗೋಡು: ಮಹಿಳೆಯರನ್ನು ಗೌರವಿಸುವುದು, ಅಂಗೀಕರಿಸುವ ಸಂಸ್ಕಾರ ಭಾರತೀಯ ಸಂಸ್ಕಾರವಾಗಿದೆ ಎಂದು ಚಿನ್ಮಯ ಮಿಷನ್‌ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ನುಡಿದರು. ಭಾರತೀಯ ಅಭಿಭಾಷಕ ಪರಿಷತ್‌ನ ಆಶ್ರಯದಲ್ಲಿ ನಡೆಸಿದ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವಾದಿ ಬೀನ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಅಭಿಭಾಷಕ ಪರಿಷತ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್, ನ್ಯಾಯವಾದಿಗಳಾದ ಬಿ. ರವೀಂದ್ರನ್, ಹರ್ಷಿತ, ಜಾಹ್ನವಿ ಮಾತನಾಡಿದರು.

ಎಕೆಪಿಎ ಈಸ್ಟ್ ಘಟಕದಿಂದ ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಗೆ ಅಭಿನಂದನೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಈಸ್ಟ್ ಘಟಕದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಂಗವಾಗಿ ಹಸಿರು ಕ್ರಿಯಾಸೇನೆಯಲ್ಲಿ ಕಳೆದ 9 ವರ್ಷದಿಂದ ದುಡಿಯುತ್ತಿರುವ ಗಾಯತ್ರಿ ಕಿಣಿಯವರನ್ನು ಅಭಿನಂದಿಸಲಾಯಿತು. ಈಸ್ಟ್ ಯೂನಿಟ್ ಅಧ್ಯಕ್ಷ ರಾಜಶೇಖರ ಅಭಿನಂದಿಸಿದರು. ಕಾರ್ಯದರ್ಶಿ ಅಖಿಲ್, ಕೋಶಾಧಿಕಾರಿ ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸಂಜೀವ್ ರೈ, ವಲಯ ಕೋಶಾಧಿಕಾರಿ ಅಜಿತ್ ಕುಮಾರ್, ಘಟಕ ಸದಸ್ಯರಾದ ಫೈಸಲ್, ಸುರೇಶ್ ಬಿ.ಜೆ. ಭಾಗವಹಿಸಿದರು.